ಸಂಚಾರಿ ಸಿಗ್ನಲ್ ವೃತ್ತಗಳಲ್ಲಿ ಬ್ಯಾನರ್‍ಗಳನ್ನು & ಬಂಟಿಂಗ್ಸಗಳ ನಿಷೇಧ

ದಾವಣಗೆರೆ : ನಗರದ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ದಾವಣಗೆರೆ ನಗರದ ಎಲ್ಲಾ ಪೊಲೀಸ್ ಠಾಣಾ ಸರಹದ್ದಿನಲ್ಲಿನ ಎಲ್ಲಾ ಧಾರ್ಮಿಕ ಮುಖಂಡರನ್ನು ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಮುದ್ರಣ ಮಾಡುವ ಮಾಲೀಕರನ್ನು ಹಾಗೂ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಕಟ್ಟುವಂತಹ ಗುತ್ತಿಗೆದಾರರನ್ನು ಬರಮಾಡಿಕೊಂಡು ಈ ಸಭೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹನುಮಂತರಾಯ. ಐಪಿಎಸ್ ಇವರ ಅಧ್ಯಕ್ಷತೆಯಲ್ಲಿ ಮತ್ತು ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ ರವರ ಉಪಸ್ಥಿತಿಯಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿವಿಧ ಪೊಲೀಸ್ ಅಧಿಕಾರಿಗಳು ಈ ಸಭೆಗೆ ಹಾಜರಾಗಿದ್ದು ಈ ಸಭೆಯಲ್ಲಿ ಚರ್ಚಿಸಲಾಗಿ ಮುಂದಿನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರ ಈ ಕೆಳಕಂಡಂತೆ ಇರುತ್ತದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ ಸಿಟಿ ಯೋಜನೆಯ ಅಡಿಯಲ್ಲಿ ನಗರದ ಸುಗಮ ಸಂಚಾರಕ್ಕೆ ಅನುಗುಣವಾಗಿ ಸಿ.ಟಿ ಟಿವಿ, ಸ್ಮಾರ್ಟ ಪಾರ್ಕಿಂಗ್, ಸಂಚಾರ ಸಿಗ್ನಲ್‍ಗಳನ್ನು ಅಳವಡಿಸಲಾಗುತ್ತಿದ್ದು ಈ ಕಾಮಗಾರಿಗಳು ಸಂಪೂರ್ಣ ಪೂರ್ಣಗೊಳ್ಳುವ ಹಂತದಲ್ಲಿದ್ದು ನಗರದಲ್ಲಿ ವಿವಿಧ ಹಬ್ಬ-ಹರಿದಿನಗಳು, ಜನ್ಮ ದಿನಾಚರಣೆ, ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಮುಖಂಡರವರುಗಳು ನಗರದ ಎಲ್ಲಾ ಟ್ರಾಫಿಕ್ ಸಿಗ್ನಲ್ ವೃತ್ತಗಳಲ್ಲಿ ದೊಡ್ಡ ಪ್ರಮಾಣದ ಬ್ಯಾನರ್ ಕಟೌಟ್‍ಗಳನ್ನು ಅಳವಡಿಸಲಾಗುತ್ತಿದ್ದು ಈ ಪ್ರಕ್ರಿಯೆಯು ನಗರದ ಸುಗಮ ಸಂಚಾರಕ್ಕೆ ಹಾಗೂ ಟ್ರಾಫಿಕ್ ಸಿಗ್ನಲ್ ದೀಪಗಳು ರಸ್ತೆ ಬಳಕೆದಾರರಿಗೆ ಹಾಗೂ ವಾಹನ ಸವಾರರಿಗೆ ಗೋಚರಿಸದೇ ಇರುವ ಕಾರಣ ಲಘು ಅಪಘಾತಗಳು ಹಾಗೂ ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಿದ್ದು ಈ ಕುರಿತಂತೆ ಅನೇಕಬಾರಿ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಕಟ್ಟುವಂತಹ ಗುತ್ತಿಗೆದಾರರಿಗೆ ಮೌಖಿಕವಾಗಿ ಎಚ್ಚರಿಕೆಯನ್ನು ನೀಡಿದ್ದರೂ ಸಹ ಅದೇ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ. ಅದೇ ರೀತಿ ಸಿ.ಟಿ ಟಿವಿ, ಅಳವಡಿಸಲಾದ ಸ್ಥಳಗಳಲ್ಲಿ ಕ್ಯಾಮೇರಾಗಳ ದೃಶ್ಯಗಳು ಕಾಣದಂತೆ ಸಿ.ಟಿ ಟಿವಿ ಕಂಬಗಳಿಗೆ ಹಾಗೂ ಕ್ಯಾಮೇರಾಗಳ ದೃಶ್ಯಗಳು ಕಾಣದಂತೆ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಕಟ್ಟುತ್ತಿರುತ್ತಾರೆ. ಮುಂದಿನ ದಿನಗಳಲ್ಲಿ ಈ ಪ್ರವೃತ್ತಿಯನ್ನು ಮುಂದುವರೆಸಿದರೆ, ಅಥವಾ ಯಾವ ಟ್ರಾಫಿಕ್ ಸಿಗ್ನಲ್ ವೃತ್ತಗಳಲ್ಲಿ ಅಥವಾ ರಸ್ತೆಗಳಲ್ಲಿ ಅಳವಡಿಸಿಲಾದ ಸೂಚನಾ ಫಲಕಗಳಿಗೆ ಬ್ಯಾನರ್ ಮತ್ತು ಬಂಟಿಂಗ್ಸ್ ಅಥವಾ ಪೂಸ್ಟರ್‍ಗಳನ್ನು ಅಳವಡಿಸಿ ರಸ್ತೆ ಬಳಕೆದಾರರಿಗೆ ಹಾಗೂ ವಾಹನ ಸವಾರರಿಗೆ ಗೋಚರಿಸದೇ ಲಘು ಅಥವಾ ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದಲ್ಲಿ ಅಪಘಾತ ಪ್ರಕರಣಗಳಲ್ಲಿ ಆರೋಪಿತರಾಗಿ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಕಟ್ಟುವಂತಹ ಗುತ್ತಿಗೆದಾರರನ್ನು, ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಮುದ್ರಣ ಮಾಡುವ ಮಾಲೀಕರನ್ನು ಹಾಗೂ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಮುದ್ರಣ ಮಾಡಿಸಿರುತ್ತಾರೋ ಅವರನ್ನು ಪ್ರಕರಣದಲ್ಲಿ ಸೇರಿಸಲಾಗುವುದು. ಅದೇ ರೀತಿ ಸರ್ಕಾರಿ ಸೌಮ್ಯದ ಆಸ್ತಿಯನ್ನು ವಿರೋಪಗೊಳಿಸಿದ ಪ್ರಯುಕ್ತ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.
ಈ ಕುರಿತಂತೆ ದಾವಣಗೆರೆ ಮಹಾನಗರ ಪಾಲಿಕೆಯವರುಗಳು ನಗರದಲ್ಲಿ ವಿವಿಧ ಹಬ್ಬ-ಹರಿದಿನಗಳು, ಜನ್ಮ ದಿನಾಚರಣೆ, ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಮುಖಂಡರವರುಗಳವರಿಗೆ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಅಳವಡಿಸಲು ಅನುಮತಿಯನ್ನು ನೀಡುವ ಸಂದರ್ಭದಲ್ಲಿ ಈ ಮೇಲ್ಕಂಡ ವಿಷಯದ ನೋಟಿಸ್ ಮೇಲೆ ಸಹಿಯನ್ನು ಪಡೆದು ನಂತರ ಅನುಮತಿಯನ್ನು ನೀಡಲಾಗುವುದು. ಇದನ್ನು ಉಲ್ಲಂಘಿಸಿದವರ ಮೇಲೆ ಏಚಿಡಿಟಿಚಿಣಚಿಞಚಿ ಔಠಿeಟಿ Pಟಚಿಛಿes (Pಡಿeveಟಿಣioಟಿ oಜಿ ಆisಜಿiguಡಿemeಟಿಣ ಂಛಿಣ), 1981 ಚಿಟಿಜ ಏಚಿಡಿಟಿಚಿಣಚಿಞಚಿ ಒuಟಿiಛಿiಠಿಚಿಟiಣies ಂಛಿಣ 1964 ರಿತ್ಯ ಪ್ರಕರಣವನ್ನು ದಾಖಲಿಸಿ, ಕಾನೂನು ಕ್ರಮ ಜರುಗಿಸುತ್ತಾರೆ. ಆದ್ದರಿಂದ ನಗರದಲ್ಲಿನ ಈ ಮೇಲ್ಕಂಡ ಯಾವುದೇ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಮುಖಂಡರವರುಗಳು, ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಮುದ್ರಣ ಮಾಡುವ ಮಾಲೀಕರು ಹಾಗೂ ಬ್ಯಾನರ್ ಮತ್ತು ಬಂಟಿಂಗ್ಸ್‍ಗಳನ್ನು ಕಟ್ಟುವಂತಹ ಗುತ್ತಿಗೆದಾರರು ಈ ಕುರಿತಂತೆ ಜಾಗೃತೆಯನ್ನು ವಹಿಸಲು ಸೂಚಿಸಿದ್ದಾರೆ

Please follow and like us:
error