ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವು ನೀಡಲು ಕೆಯುಡಬ್ಲುಜೆ ಆಗ್ರಹ

ಬೆಂಗಳೂರು : ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವು ನೀಡಲು ಕೆಯುಡಬ್ಲುಜೆ ರಾಜ್ಯಾದ್ಯಕ್ಷ ಶಿವಾನಂದ ತಗಡೂರ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮನವಿ ಸಲ್ಲಿಸಿರುವ ಅವರು

ಕೋವಿಡ್ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಮನವಿ ಮೇರೆಗೆ, ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್‌ ಎಂದು ಘೋಷಣೆ ಮಾಡಿ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಮತ್ತು ಅಭಿನಂದನೆಗಳು.

ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಮಾಧ್ಯಮಗಳು ಸಂಕಷ್ಟದಲ್ಲಿ ಸಿಲುಕಿದ್ದು, ಇದೇ ವೃತ್ತಿ ಅವಲಂಬಿಸಿರುವ ಹಲವು ಪತ್ರಕರ್ತರ ಬದುಕು ಕೂಡ ಅಯೋಮಯವಾಗಿದೆ. ಗ್ರಾಮೀಣ ಪತ್ರಕರ್ತರ ಪರಿಸ್ಥಿತಿ ಕೂಡ ಬಹಳ ಕಷ್ಟದಲ್ಲಿದೆ.

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ, ಪತ್ರಕರ್ತರಿಗೆ ತಲಾ 10 ಸಾವಿರ ನೆರವು ನೀಡಬೇಕು. ಕುಟುಂಬ ನಿರ್ವಹಣೆಗೆ ಅಗತ್ಯವಾದ ಪಡಿತರವನ್ನು (ಜಿಲ್ಲಾ, ತಾಲ್ಲೂಕು, ಗ್ರಾಪಂ ಮಟ್ಟದಲ್ಲಿಯೂ) ನೀಡುವ ವ್ಯವಸ್ಥೆ ಆಗಬೇಕು. ಮಾಧ್ಯಮಕ್ಕೆ ಆದ್ಯತೆ ಮೇಲೆ ಜಾಹೀರಾತು ನೀಡುವ ಮೂಲಕ ನೆರವಾಗಬೇಕು ಎಂದು ಶಿವಾನಂದ ತಗಡೂರ ಒತ್ತಾಯಿಸಿದ್ದಾರೆ.


ಅಧ್ಯಕ್ಷರು

Please follow and like us:
error