ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ: 5 ಲಕ್ಷ ರೂ. ದೇಣಿಗೆ ನೀಡಿದ ಸಂಸದ ಕರಡಿ ಸಂಗಣ್ಣ

ಕೊಪ್ಪಳ:
ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಯೋಜನೆಯ ಅನ್ವಯ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕಾಗಿ ನಡೆದಿರುವ ಧನ ಸಂಗ್ರಹಣೆ ಅಭಿಯಾನಕ್ಕೆ ಸಂಸದ ಸಂಗಣ್ಣ ಕರಡಿ ಅವರು ತಮ್ಮ ವ್ಯಯಕ್ತಿಕವಾಗಿ 5 ಲಕ್ಷ ರೂ. ಗಳ ದೇಣಿಗೆ ಹಣವನ್ನು ಚಕ್ ಮೂಲಕ ನೀಡಿದ್ದಾರೆ.
ಇಡೀ ರಾಷ್ಟ್ರದಾದ್ಯಂತ ರಾಮ ಮಂದಿರ ಕಟ್ಟುವುದಕ್ಕೆ ನಿಧಿ ಸಂಗ್ರಹಣೆ ಮಾಡಲಾಗುತ್ತಿದ್ದು , ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ನಡೆದ ಈ ನಿಧಿ ಸಮರ್ಪಣಾ ಅಭಿಯಾನದಲ್ಲಿ ಸಂಸದರು ಸ್ವತಃ ಪಾಲ್ಗೊಂಡು ನಿಧಿ ಸಂಗ್ರಹಣ ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದರು,
ಕಾರ್ಯಕರ್ತರ ಒಳಗೊಂಡ ತಂಡವು ನಡೆಸಿದ್ದ ನಿಧಿ ಸಮರ್ಪಣಾ ಅಭಿಯಾನಕ್ಕೆ ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಂಸದರು ಸಹ ರೂ. 5 ಲಕ್ಷ ಮೊತ್ತದ ದೇಣಿಗೆ ಹಣವನ್ನು ನೀಡುವ ಮೂಲಕ ಇತರರಿಗೆ ಮಾದರಿಯಾಗಿರುವರು. ಪ್ರಾಚೀನ ಪರಂಪರೆಗೆ ಅನುಗುಣವಾಗಿ ಶ್ರೀರಾಮಂದಿರ ನಿರ್ಮಾಣಕ್ಕಾಗಿ ಉದಾರವಾಗಿ ಸಾತ್ವಿಕ ದೇಣಿಗೆಯನ್ನು ನೀಡಿ, ಈ ಪವಿತ್ರ ಯಜ್ಞದಲ್ಲಿ ಸಮಸ್ತ ಸಮಾಜದ ಬಾಂದವರು ಸಹಕಾರ ನೀಡುವುಂತೆ ಮನವಿ ಮಾಡಿರುವರು.

….
ಶ್ರೀರಾಮ ಜನ್ಮಭೂಮಿ
ಪಾರಂಪರಿಕ ಮಹತ್ವದ ಸ್ಥಾನ ಮತ್ತು ಪ್ರಸಿದ್ಧ ಸಾರ್ವಜನಿಕ ಪೂಜಾಸ್ಥಳ ಎಂದು ಭಾರತ ಸರ್ಕಾರ ಘೋಷಿಸಿದೆ, ಶ್ರೀರಾಮ ಮಂದಿರ ನಿರ್ಮಾಣ ರಾಷ್ಟ್ರೀಯ ಸ್ವಾಭಿಮಾನದ ಪುರುಜ್ಜೀವನವಾಗಿದೆ, ನಮ್ಮೆಲ್ಲರ ದೃಢಸಂಕಲ್ಪ ಮತ್ತು ಸಾಮೂಹಿಕ ಪುರುಷಾರ್ಥಗಳಿಂದ ಭಾರತವನ್ನು ಮತ್ತೆ ರಾಮರಾಜ್ಯವನ್ನಾಗಿ ಮಾಡಬೇಕಾಗಿದೆ
— ಸಂಗಣ್ಣ ಕರಡಿ, ಸಂಸದರು, ಕೊಪ್ಪಳ

Please follow and like us:
error