ಶ್ರೀರಾಮನ ಫ್ಲೆಕ್ಸ್ ಗೆ ಅವಮಾನ : ಶ್ರೀರಾಮ ಸೇನೆ ಕಾರ್ಯಕರ್ತ ಸಹಿತ 6 ಮಂದಿ ಬಂಧನ

SHABADA-AROPI-sriramasene-sriram-flexಕಲಬುರಗಿ, ಅ.19:  ಶ್ರೀರಾಮನ ಫ್ಲೆಕ್ಸ್ ಗೆ ಸೆಗಣಿ ಎರಚಿ,  ಕೋಮು ಸಾಮರಸ್ಯ ಕದಡಲು ಯತ್ನಿಸಿದ್ದ  6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಪಟ್ಟಣದ ನಿವಾಸಿಗಳಾದ ಮುಹಮ್ಮದ್ ಬಾಬಾ ಅಲಿಯಾಸ್ ಗಿಡ್ಡಾಬಾಬಾ, ನಿಲೇಶ ಇಬಾರೆ, ಅಭಿಷೇಕ್ ಅಲಿಯಾಸ್ ವಿಶ್ವರಾಧ್ಯ ಕಂಬಾನವರ, ವಿನೋದ ದೇವರಮನಿ, ಶ್ರೀನಿವಾಸ ದೊರೆ, ತಮ್ಮಣ್ಣ ದೊರೆ ಬಂಧಿತ ಆರೋಪಿಗಳು ಎಂದು ಎಸ್ಪಿ ಎನ್.ಶಶಿಕುಮಾರ್ ಹೇಳಿದ್ದಾರೆ.

ಅ.11 ರಂದು  ವಿಜಯದಶಮಿ ಹಿನ್ನೆಲೆಯಲ್ಲಿ ಶ್ರೀರಾಮನ ಬೃಹತ್  ಮೆರವಣಿಗೆ ನಡೆದಿತ್ತು. ಅ. 12 ರಂದು ನಸುಕಿನ ಜಾವ ಶ್ರೀರಾಮನ ಭಾವಚಿತ್ರಕ್ಕೆ ದುಷ್ಕರ್ಮಿಗಳು ಹಾನಿಯೆಸಗಿದ್ದರು. ಇದನ್ನು ಖಂಡಿಸಿ ಕೆಲ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದವು. ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ವಿವರಿಸಿದರು.

ಕೋಮು ಸೌಹಾರ್ದವನ್ನು ಕದಡುವ ದುರುದ್ದೇಶದಿದಂದಲೇ ದುಷ್ಕರ್ಮಿಗಳು ಭಾವಚಿತ್ರಕ್ಕೆ ಅಪಮಾನ ಮಾಡಿ ಪರಾರಿಯಾಗಿದ್ದರು. ಬಳಿಕ ತೆಲಂಗಾಣ, ಕಲಬುರಗಿ ಮತ್ತಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದರು ಎಂದು ಎಸ್ಪಿ ತಿಳಿಸಿದ್ದಾರೆ.

Please follow and like us:

Related posts

Leave a Comment