ಶಿವರಾಜ್ ತಂಗಡಗಿಯಂತಹ ಸತ್ಯಹರಿಶ್ಚಂದ್ರ ಜಗತ್ತು ನೋಡಿಲ್ಲ : ಸಚಿವ ಬಿ.ಸಿ.ಪಾಟೀಲ್ ವ್ಯಂಗ್ಯ

ಕನ್ನಡನೆಟ್ ನ್ಯೂಸ್, ‌ಕೊಪ್ಪಳ:
ಶಿವರಾಜ ತಂಗಡಗಿ ಅಂತಾ ಪ್ರಾಮಾಣಿಕ, ಸತ್ಯಹರೀಶ್ಚಂದ್ರ ಮತ್ತು ಜನಪರ ಕಾಳಜಿ ಇರುವ ವ್ಯಕ್ತಿಯನ್ನು ಈ ಜಗತ್ತು ನೋಡಿಯೇ ಇಲ್ಲ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ವ್ಯಂಗ್ಯವಾಡಿದರು.
ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಗಳ ಹೆಸರಿನಲ್ಲಿ ಪೊಲೀಸರು‌ ಲೂಟಿ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಕ್ಕೆ ತಿರುಗೇಟು ನೀಡಿದರು.
ತಂಗಡಗಿ ಎಷ್ಟು ಪ್ರಾಮಾಣಿಕ ಅಂತಾ ಇಡೀ ಕೊಪ್ಪಳ ಜನರಿಗೆ ಗೊತ್ತಿದೆ. ‌ಅದಕ್ಕೆ ಕನಕಗಿರಿ ಕ್ಷೇತ್ರದ ಜನ ಅವರನ್ನ ಎಲ್ಲಿ ಕೂಡಿಸಬೇಕೋ ಅಲ್ಲಿ ಕುಳ್ಳಿರಿಸಿದ್ದಾರೆ. ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಲೂಟಿ ಮಾಡುವ ಕೆಲಸ ಮಾಡಿರಬೇಕು ಎಂದ ಬಿ.ಸಿ.ಪಾಟೀಲ್, ಕಾಮಾಲೆ ಬಂದವರ ಕಣ್ಣಿಗೆ ಕಂಡಿದೆಲ್ಲ ಹಳದಿ ಅಂತೆ. ಶಿವರಾಜ ತಂಗಡಗಿ ಕಣ್ಣು ಹಳದಿ ಆಗಿವೆ. ತನ್ನಂತೆ ಪರರು ಎನ್ನುವಂತೆ, ತಾವು ಹೇಗಿದ್ದೇನೆ ಹಾಗೆ ಎಲ್ಲರೂ ಅಂತಾ ತಿಳಿದುಕೊಂಡಿದ್ದಾರೆ. ಅವರ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ಬಿ.ಸಿ.ಪಾಟೀಲ್ ಹೇಳಿದರು.‌ ಸಂಸದ ಸಂಗಣ್ಣ ಕರಡಿ, ಶಾಸಕ ಬಸವರಾಜ ದಡೆಸುಗೂರ, ಡಿಸಿ ವಿಕಾಸ ಕಿಶೋರ್ ‌ಸೇರಿ ಇತರರು ಇದ್ದರು.

Please follow and like us:
error