ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ-ಡಾ.ತೇಜಸ್ವಿ ಕಟ್ಟಿಮನಿ

Kannadanet ಇಲ್ಲಿಯವರಿಗೂ ಇರುವ ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಆಗಲಿದೆ, ಕೇವಲ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸದ ಹಲವು ಸಾಧಕರ ಉದಾಹರಣೆ ನೀಡಿ ಅವರು ಮಾಡಿದ ಸಾಧನೆಗೆ ಪೂರಕ ಶಿಕ್ಷಣ ಯಾವುದೇ ವಿಶ್ವವಿದ್ಯಾಲಯ ನೀಡಲಿಲ್ಲ ಆದರೂ ಕೂಡ ಬಹುದೊಡ್ಡ ಸಾಧನೆ ಮಾಡಿದರು ಎಂದು ಕರುಡು ಸಮಿತಿ ಸದಸ್ಯರು ರಾಷ್ಟೀಯ ಹೊಸ ಶಿಕ್ಷಣ ನೀತಿ ಮತ್ತು ಉಪಕುಲಪತಿಗಳು ಬುಡಕಟ್ಟು ವಿಶ್ವವಿದ್ಯಾಲಯ ಆಂದ್ರಪ್ರದೇಶ ಡಾ.ತೇಜಸ್ವಿ v ಕಟ್ಟಿಮನಿ ಹೇಳಿದರು. ಅವರಿಂದು ಕೊಪ್ಪಳ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೊಟ ( ಕುಸ್ಮಾ ) ವತಿಯಿಂದ ಕೊಪ್ಪಳದ ಪಾನಘಂಟಿ ಕಲ್ಯಾಣ ಮಂಟಪ ಕೊಪ್ಪಳ ದಲ್ಲಿ ರಾಷ್ಟೀಯ ಹೊಸ ಶಿಕ್ಷಣ ನೀತಿ-2020 ಕುರಿತು ಉಪನ್ಯಾಸಕ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡದ ಹಲವು ಸಾಧಕರುಗಳ ಬಗ್ಗೆ ವಿವರಿಸಿದರು ಹಲವು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಬೂಮರೆಡ್ಡಿಯವರ ಬಗ್ಗೆ, ದೊಡ್ಡ ಸಾರಿಗೆ ಹಾಗೂ ಪತ್ರಿಕ್ಯೋದ್ಯಮ ವ್ಯವಸ್ಥೆ ಕಟ್ಟಿದ ವಿಜಯ ಸಂಕೇಶ್ವರ್ ಬಗ್ಗೆ , ಬಹುದೊಡ್ಡ ಕೈಗಾರಿಕೆ ಉದ್ಯಮವನ್ನು ಕಟ್ಟಿದ ಕಿರ್ಲೋಸ್ಕರ್ ಬಗ್ಗೆ , ಅವರುಗಳ ವಿಶೇಷ ಕೌಶಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು . ಇಂತಹ ಹಲವು ವ್ಯವಸ್ಥೆಗಳು ಹೊಸ ಶಿಕ್ಷಣ ನೀತಿಯಲ್ಲಿ ಬರಲಿದೆ ಎಂದರು. ಇದು ನಿಜಕ್ಕೂ ಸಾಕಷ್ಟು ಬದಲಾವಣೆ ತರಲಿದೆ ಎಂದರು

.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕುಸ್ಮಾ ದ ಅಧ್ಯಕ್ಷರಾದ ಜಗನ್ನಾಥ ಅಲಂಪಲ್ಲಿ ಅವರು ವಹಿಸಿದ್ದರು ವಿಶೇಷ ಆಹ್ವಾನಿತರಾಗಿ ಸಂಗಣ್ಣ ಕರಡಿ ಸಂಸದರು, ಘನಉಪಸ್ಥಿತಿಯನ್ನು ವಹಿಸಿದ ಶಾಸಕರು ಆದ ರಾಘವೇಂದ್ರ ಹಿಟ್ನಾಳ್ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಮುಖಂಡ ಸಿ.ವಿ.ಚಂದ್ರಶೇಖರ ರಾಘವೇಂದ್ರ ಪಾನಘಂಟಿ, ಪ್ರಹ್ಲಾದ ಅಗಳಿ, ಶಾಹೀದ್ ಕವಲೂರ ಸೇರಿದಂತೆ ಕೊಪ್ಪಳ ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳು, ಕೊಪ್ಪಳದ ಸಾಹಿತಿಗಳು, ಪತ್ರಕರ್ತರು ಭಾಗವಸಿದ್ದರು.

Please follow and like us:
error