fbpx

ಶಿಕ್ಷಕರಿಗೆ ೩ ವಾರಗಳ ಮಧ್ಯಂತರ ರಜೆ ಘೋಷಿಸಿ ಸರಕಾರದ ಆದೇಶ

ಕೊಪ್ಪಳ : ಶಿಕ್ಷಕರಿಗೆ ೩ ವಾರಗಳ ಮಧ್ಯಂತರ ರಜೆ ಘೋಷಿಸಿ ಸರಕಾರ ಆದೇಶ ಮಾಡಿದೆ. ಈ ಕುರಿತು ಆದೇಶ ಹೊರಡಿಸಿರುವ ಸಿಎಂ

ಬಿ.ಎಸ್ . ಯಡಿಯೂರಪ್ಪ ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ಕಾರ್ಯಕ್ರಮವನ್ನು ಸಹ ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಲಾಗಿದೆ . ಹಲವಾರು ಶಿಕ್ಷಕರು ಸಹ ಕೋವಿಡ್ -19 ಸೋಂಕಿಗೆ ಒಳಗಾಗಿರುವುದನ್ನ ಮಾಧ್ಯಮದ ಮೂಲಕ ಗಮನಿಸಿದ್ದೇನೆ ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಿಗೆ ದಿನಾಂಕ : 12-10-2020 ರಿಂದ ಮೂರು ವಾರಗಳ ಅಂದರೆ ದಿನಾಂಕ 30-10-2020 ರವರೆಗೆ ಮಧ್ಯಂತರ ರಜೆ ಘೋಷಿಸಿ ಆದೇಶ ಹೊರಡಿಸಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿರುತ್ತೇನೆ . ನನ್ನ ಪ್ರೀತಿಯ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವರ್ಗದವರೆಲ್ಲರಿಗೂ ಮುಂಚಿತವಾಗಿ ದಸರಾ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

Please follow and like us:
error
error: Content is protected !!