ಶಾಸಕ ದಡೆಸೂಗೂರ್ ಜೊತೆ ಮಸ್ಕಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಟೆಂಪಲ್‌ರನ್

ಕನಕಗಿರಿ : ಶಾಸಕ ಬಸವರಾಜ ದಡೇಸೂಗುರು ಅವರೊಂದಿಗೆ ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕನಕಗಿರಿಯ ಗರಡೋತ್ಸವ ಉತ್ಸವದಲ್ಲಿ ಭಾಗಿಯಾಗಿ ಟೆಂಪಲ್ ರನ್ ಶುರುಮಾಡಿದ್ದಾರೆ. ಮಾಧ್ಯಮಗಳೊಂದಿಗೆ ನಂತರ ಮಾತ್ನಾಡಿದ ಪ್ರತಾಪಗೌಡ ಪಾಟೀಲ್  ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರನ್ನು ನಿರ್ಲಕ್ಷ್ಯ ಮಾಡಲಾಯಿತು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಲೇ ಇಲ್ಲ. ಈ ಹಿನ್ನೆಲೆ ನಾನು ಪಕ್ಷಾಂತರ ಮಾಡಲು ನಿರ್ಧಾರ ಮಾಡಬೇಕಾಯಿತು ಅಂತಾ ಪ್ರತಾಪಗೌಡ ಪಾಟೀಲ್ ಅಸಮಾಧನಾ ವ್ಯಕ್ತಪಡಿಸಿದರು.2008 ರಿಂದ ನಾನು ಗರುಡೋತ್ಸವದಲ್ಲಿ ಭಾಗಿಯಾಗುತ್ತಿದ್ದೇನೆ. ನಾನು ರಾಜಕೀಯವಾಗಿ ಬೆಳೆಯಲು ಲಕ್ಷ್ಮೀ ನರಸಿಂಹಸ್ವಾಮಿ ದೇವರ ಆಶೀರ್ವಾದ ಇದೆ. 2008 ರಲ್ಲಿ ನಡೆದ ಗರುಡೋತ್ಸವ ಮುಗಿಸಿ ಹೊರಬಂದಾಗ ನನಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು. ಈಗ ಮತ್ತೆ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದೇನೆ, ಬಹುಮತಗಳಿಂದ ಗೆಲವು ಸಾಧಿಸಿ ಸಚಿವನಾಗುತ್ತೇನೆ ಅಂತಾ ಭರವಸೆ ವ್ಯಕ್ತಪಡಿಸಿದರು.ಇನ್ನು
ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರಬಹುದು ಅನ್ನೋ ಅನುಮಾನ ಇದೆ. ಈಗಾಗಲೇ ರಾಮುಲು, ವಿಜಯೇಂದ್ರ ಅವರು ಕ್ಷೇತ್ರದಲ್ಲಿ ನನ್ನ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಬಿಟ್ಟು ಪಕ್ಷಾಂತರ ಮಾಡೋದಕ್ಕೆ ಇಡೀ ಕ್ಷೇತ್ರದ ಜನರ ಅಭಿಪ್ರಾಯ ಕಾರಣ. ಕಾಂಗ್ರೆಸ್ ಗೆ ದೇಶದಲ್ಲಿ ಉಳಿಗಾಲವಿಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಕುರಿತಂತೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಯತ್ನಾಳ್ ಹೇಳಿಕೆ ಕುರಿತಂತೆ ಪಕ್ಷದ ಹೈಕಮಾಂಡ್ ಗಮನಿಸುತ್ತಿದೆ.
ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ದೂರು ನೀಡಿರುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಪ್ರತಾಪಗೌಡ ಇದು ಪಕ್ಷದ ಆಂತರಿಕ ವಿಚಾರ ಅಂತಾ ಮಾತಿನಲ್ಲಿ ಜಾರಿಕೊಂಡರು. ಈ ಸಂದರ್ಭದಲ್ಲಿ ಕನಕಗಿರಿ ಶಾಸಕ ಬಸವರಾಜ ದಡೇಸೂಗುರು ಇದ್ದರು

Please follow and like us:
error