ಶಾಸಕ ದಡೆಸೂಗೂರು ಬೆಂಬಲಿಗರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ

Koppal ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ‌ ಬಿಜೆಪಿಯಲ್ಲಿ ಕಾರ್ಯಕರ್ತರ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾ ಕೋಶಾಧ್ಯಕ್ಷರೂ ಆಗಿರುವ ಕನಕಗಿರಿ ತಾಲೂಕು ನವಲಿ ಗ್ರಾಮದ ನಾಗರಾಜ ತಳವಾರ ನನ್ನ ಮೇಲೆ ಹಲ್ಲೆಯಾಗಿದೆ. ಇದಕ್ಕೆ ಶಾಸಕ ಬಸವರಾಜ ದಡೆಸುಗೂರ ಅವರ ಬೆಂಬಲಿಗರೇ ಹಲ್ಲೆ ಮಾಡಿದ್ದು, ಇದಕ್ಕೆ ಶಾಸಕರೂ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ಲೈವ್ ಮಾಡಿರುವ ನಾಗರಾಜ ತಳವಾರ, ‘ನಾನು ಕೂಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ನಾನು ನಮ್ಮದೇ ಪಕ್ಷದ ಶಾಸಕ ಬಸವರಾಜ ದಡೆಸುಗೂರ ಬಗ್ಗೆ ಒಂದಷ್ಟು ಅಸಮಾಧಾನದ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ.‌ ಜೊತೆಗೆ ನನ್ನ ಸ್ನೇಹಿತನೊಬ್ಬನ ಜೊತೆ ಮಾತನಾಡಿದ್ದ ಆಡಿಯೋ ಕೂಡ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ನವಲಿ ಗ್ರಾಮದ ವಿರೇಶ ಸೇರಿ 8 ಜನ ಸೇರಿ ಹಲ್ಲೆ ಮಾಡಿದ್ದಾರೆ’ ಎಂದು ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದಾರೆ.

ಸದ್ಯ ಹಲ್ಲೆಗೆ ಒಳಗಾಗಿದ್ದೇನೆ ಎಂದು ಆರೋಪಿಸುತ್ತಿರುವ ನಾಗರಾಜ ತಳವಾರ ಬಿಜೆಪಿ ಕಾರ್ಯಕರ್ತ. ಕಳೆದ ಕೆಲ ದಿನದ ಹಿಂದೆ ಫೇಸ್ ಬುಕ್ ಲೈವ್ ಮಾಡಿದ್ದ ನಾಗರಾಜ, ಬಿಜೆಪಿ ಪಕ್ಷದಲ್ಲಿದ ವೈಮನಸ್ಸು ಬಿಚ್ಚಿಟ್ಟಿದ್ದ. ಅಲ್ಲದೇ ಶಾಸಕ ಬಸವರಾಜ ದಡೆಸುಗೂರ ಅವರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದ. ಇದಾದ ಕೆಲ ದಿನದ ನಂತರ ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ವೀರಬಸನಗೌಡ ಅವರ ಜೊತೆ ಮನಸೋಇಚ್ಚೆ ಮಾತನಾಡಿದ್ದರು. ಈ ಆಡಿಯೋ ಕೂಡ ವೈರಲ್ ಆಗಿತ್ತು.

 

ನಾಗರಾಜ ಮಾಡಿರುವ ಲೈವ್ ನ ಲಿಂಕ್

https://m.facebook.com/story.php?story_fbid=836646427076337&id=100021929620820

Please follow and like us:
error