ಶಾಲೆಯ ಅಭಿಮಾನ ಟ್ಯಾಟೂ ಹಾಕಿಸಿಕೊಂಡ ಶಿಕ್ಷಕ

ಕೊಪ್ಪಳ

ನೀವು ತಾಯಿ ಪ್ರೀತಿ ಅಪ್ಪನ ಪ್ರೀತಿಗಾಗಿ ಹಚ್ಚೆ ಹಾಕಿಸಿಕೊಂಡವರನ್ನ ನೋಡಿರುತ್ತೀರಿ, ರಾಜಕಾರಣಿ, ಚಿತ್ರ ನಟ-ನಟಿಯರ ಅಂಧ ಅಭಿಮಾನಕ್ಕೆ ಕೈಯಿ, ಎದೆ ಮೇಲೆ ಟ್ಯಾಟು ಹಚ್ಚನ್ನು ಹಾಕಿಕೊಂಡವರನ್ನೂ ನೋಡಿರುತ್ತೀರಿ ಹಾಗೂ ಪ್ರೀತಿಸಿದ ಹುಡುಗಿ, ಹುಡುಗನಿಗಾಗಿ ಪಾಗಲ್ ಪ್ರೇಮಿಯಂತೆ ಕೈಯಿ ಮತ್ತು ಎದೆ ಮೇಲೆ ಹೆಸರನ್ನು ಹಚ್ಚೆ ಹಾಗೂ ಟ್ಯಾಟೂ ಹಾಕಿಸಿಕೊಳ್ಳುವರ ಬಗ್ಗೆ ಹೆಚ್ಚಾಗಿ ಹೇಳಬೇಕಾಗಿಲ್ಲ, ಅದರಲ್ಲೂ ಇತ್ತೀಚೆಗೆ ಟ್ಯಾಟೂ ಹಾಕಿಸಿಕೊಳ್ಳುವುದಂತೂ ಒಂದು ಫ್ಯಾಷನ್ ಆಗಿಬಿಟ್ಟಿದೆ. ಆದ್ರೆ ಇಲ್ಲೊಬ್ಬ ಶಿಕ್ಷಕ ತಾನು ಪಾಠ ಮಾಡುವ ಶಾಲೆಯಲ್ಲಿ ಹತ್ತು ವರ್ಷ ತನ್ನ ವೃತ್ತಿ ಜೀವನ ಕಳೆದಿರುವ ಹಿನ್ನಲೆ ಶಾಲೆಯ ಹೆಸರನ್ನು ತನ್ನ ಕೈಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಹೌದು! ಜೂನ್ ನಲ್ಲೆ ಶಾಲೆಗಳು ಆರಂಭವಾಗಬೇಕಾಗಿತ್ತು ಆದ್ರೆ ಕೋವಿಡ್ ಇನ್ನು ನಿಯಂತ್ರಣಕ್ಕೆ ಬಂದಿಲ್ಲ. ಈ ಹಿನ್ನಲೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಗಳು ಯಾವಾಗ ಆರಂಭವಾಗುತ್ತವೆ ಎಂಬ ಕಾತುರದಲ್ಲಿದ್ದಾರೆ. ಇಲ್ಲೊಬ್ಬ ಶಿಕ್ಷಕ ತನ್ನ ಶಾಲೆಯ ಪ್ರೀತಿ ಹಾಗೂ ಅಭಿಮಾನದ ಮೇಲೆ ಶಾಲೆಯ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ, ಈಳಿಗನೂರು ಶಾಲೆಯ ಶಿಕ್ಷಕ ಪರುಶಾರಮ‌ ಗಡ್ಡಿ ಎನ್ನುವವರು ತಮ್ಮ ಕೈಯಿ ಮೇಲೆ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದಿದ್ದಾರೆ.

ಅಲ್ದೇ ಅದನ್ನು ಅಭಿಮಾನದಿಂದ ಹೇಳುತ್ತಾರೆ “ಇಂದಿಗೆ ನಾನು ಶಿಕ್ಷಕನಾಗಿ ಹತ್ತು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದೇನೆ. ಪ್ರೀತಿಯಿಂದ ಅಕ್ಕರೆಯಿಂದ ಹಾಗೂ ಗೌರವದಿಂದ ನಡೆಸಿಕೊಂಡಿರುವ ಈಳಿಗನೂರಿನ ಮಹಾಜನತೆಗೆ ನಾನು ಆಭಾರಿ. ಈ 10 ವರ್ಷದಲ್ಲಿ( ಜೂನ್ 8, 2010 ರಿಂದ ಜೂನ್ 8, 2020) ಕಳೆದುಕೊಂಡಿದ್ದು ಮತ್ತು ಪಡೆದುಕೊಂಡಿದ್ದು ಬಹಳಷ್ಟಿದೆ. ಅದರಲ್ಲಿ ಪಡೆದುಕೊಂಡಿದ್ದೇ ಜಾಸ್ತಿ, ಈ ಶಾಲೆ ನನಗೆ ಸಾಕಷ್ಟು ಪಾಠವನ್ನು ಕಲಿಸಿದೆ, ಮಕ್ಕಳ‌ಪ್ರೀತಿ ಸಿಕ್ಕಿದೆ, ಉತ್ತಮ ಶಾಲೆಯೆಂಬ 2019-20 ಪ್ರಶಸ್ತಿಯನ್ನು ಶಿಕ್ಷಣ ಮಂತ್ರಿ ಸುರೇಶ್ ಕುಮಾರ ಅವರಿಂದ ಪಡೆದಿದ್ದೇನೆ.
ಖುಷಿ ಹೀಗೆ ಹತ್ತು ಹಲವಾರು. ಈಳಿಗನೂರು ಜನರ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ ಆದರೂ ಸಹ ನಾನು ಅವರ ಪ್ರೀತಿಯ ನೆನಪಿಗೆ, ನಮ್ಮ ಶಾಲೆಯ ನೆನಪಿಗೆ, ನೆನಪುಗಳು ಮಾಸದಿರಲಿ, ಅಚ್ಚಳಿಯದೆ ಹಚ್ಚಹಸಿರಾಗಿ ಹಚ್ಚೆಯ ರೂಪದಲ್ಲಿ ತನು ಹಾಗೂ ಮನದಲಿ ಉಳಿಯಲಿ ಎಂಬ ಭಾವವೆಯಿಂದ ಟ್ಯಾಟೂ ಹಾಕಿಸಿಕೊಂಡಿರುವೆ ನಿಮ್ಮ ಪ್ರೀತಿ ನಮ್ಮ ಮೇಲೆ ಹೀಗೆ ಇರಲಿ ಎಂದು ವಿಜ್ಞಾನ ಶಿಕ್ಷಕ ಪರಶುರಾಮ ಗಡ್ಡಿ ಅಭಿಮಾನದಿಂದ ಹೇಳುತ್ತಾರೆ

ಪರುಶುರಾಮ ಗಡ್ಡಿ ಅವರು ಒಬ್ಬ ಕ್ರಿಯಾಶೀಲ ಶಿಕ್ಷಕರು ಸರ್ಕಾರಿ ಶಾಲೆಗಳೂ ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವಂತೆ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಶಾಲೆಯನ್ನು ವರ್ಲಿ ಕಲೆಯಿಂದ ಶೃಂಗಾರಗೊಳಿಸಿದ್ದಾರೆ. ಈಳಿಗನೂರು ಶಾಲೆಯ ಮೇಲೆ ಅಷ್ಟೊಂದು ಅಭಿಮಾನ ಗೌರವಕ್ಕಾಗಿ ಟ್ಯಾಟೂ ಹಾಕಿಸಿಕೊಂಡು ಈಗ ಎಲ್ಲರ ಗಮನಸೆಳೆದಿದ್ದಾರೆ

Please follow and like us:
error