ಶಾಲೆಯ ಅಭಿವೃದ್ಧಿ ಗೆ ೧ ಲಕ್ಷ ದೇಣಿಗೆ ನೀಡಿದ ಪುನಿತ್ ರಾಜಕುಮಾರ್

ಗಂಗಾವತಿ : ಗಂಗಾವತಿ ಸಮೀಪದ ಮಲ್ಲಾಪೂರು ಹತ್ತಿರ ಇತ್ತಿಚೆಗೆ ಪುನೀತ್ ರಾಜಕುಮಾರ ಜೇಮ್ಸ್ ಚಲನಚಿತ್ರ ಸುಮಾರು 8ದಿನಗಳ ಕಾಲ ಚಿತ್ರೀಕರಣ ನಡೆದ ಸಂದರ್ಭದಲ್ಲಿ ಈ ಭಾಗದಲ್ಲಿ ಡಾ.ರಾಜಕುಮಾರ ಟ್ರಸ್ಟ್ ವತಿಯಿಂದ ಈ ಭಾಗದಲ್ಲಿ ನಮ್ಮ ನೆನಪಿಗಾಗಿ ಏನಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ದೊಡ್ಡಪ್ಪ ನವರಿಗೆ ಕೇಳಿದಾಗ ಪಿಎಸ್ಐ ಅವರು ಪುನೀತ್ ರಾಜಕುಮಾರ ಅವರಿಗೆ ಮಲ್ಲಾಪೂರ ಸರಕಾರಿ ಪ್ರೌಢ ಶಾಲೆಯಲ್ಲಿ ಹೆಚ್ಚಿನ ಮಕ್ಕಳು ಇದ್ದರೆ ಈ ಶಾಲೆಯಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಸೌಲಭ್ಯ ಇದೆ ಆದ್ರೇ ವಿಜ್ಞಾನ ವಿಷಯಕ್ಕೆ ಸ್ವಲ್ಪ ತೊಂದರೆ ಇದೆ ಎಂದು ಹೇಳಿದಾಗ ಸ್ಥಳದಲ್ಲಿಯೇ ಡಾ.ರಾಜಕುಮಾರ ಪೌಂಡೇಷನ್ ವತಿಯಿಂದ ಗ್ರಾಮೀಣ ಪ್ರದೇಶಗಳ ಶೈಕ್ಷಣಿಕ ಬೆಳವಣಿಗೆಗಾಗಿ ಶಾಲೆ ಮಕ್ಕಳ ಕಲಿಕಾ ವಾತಾವರಣವನ್ನು ಉತ್ತೇಜಿಸಲು ಮಕ್ಕಳಿಗೆ ವಿಜ್ಞಾನ ಪ್ರಯೋಗಾಲಯಸಲವಾಗಿ ಒಂದು ಲಕ್ಷ ರೂಪಾಯಿ ಗಳನ್ನು ಪ್ರೋತ್ಸಾಹ ಧನವಾಗಿ ಶಾಲೆಯ ಮುಖ್ಯೋಪಾಧ್ಯಾಯರ ಅಕೌಂಟ್ ಗೆ ಜಮವಾಗಿದೆ ಎಂದು ಪಿಎಸ್ಐ ದೊಡ್ಡಪ್ಪ ಅವರು ತಿಳಿಸಿದರು ಹಾಗೂ ಅಪರ ಸರ್ಕಾರಿ ವಕೀಲರಾದ ಹೆಚ್.ಸಿ.ಯಾದವ ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮದ ಗುರು ಹಿರಿಯರು ಎಲ್ಲಾ ಯುವಕರು ವಿಧ್ಯಾರ್ಥಿಗಳು ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದರು

Please follow and like us:
error