ಶಾರ್ಟ ಸರ್ಕೀಟ್ : ಬೆಂದು ಹೋದ ಮುಗ್ದ ಯುವಕ

ಕೊಪ್ಪಳ: ತಡರಾತ್ರಿ ನಗರದಲ್ಲಿ ನಡೆದ ಶಾರ್ಟ ಸರ್ಕಿಟ್ ನಲ್ಲಿ ಮೂರು ಅಂಗಡಿಗಳು ಸುಟ್ಟು ಭಸ್ಮವಾಗಿದ್ದವು. ನಗರದ ಇಂದಿರಾ ಕ್ಯಾಂಟಿನ್ ಬಳಿಯ ಶಾಸಕರ ಮಾದರಿ ಶಾಲೆಯ ಕಂಪೌಂಡಿಗೆ ಹೊಂದಿಕೊಂಡಿರುವ ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಳಗಿನ ಜಾವವೇ ಅದನ್ನು ನಿಯಂತ್ರಣಕ್ಕೆ ತರಲಾಗಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಸುಟ್ಟು ಭಸ್ಮವಾಗಿದ್ದವು. ಆದರೆ ಇದಕ್ಕಿಂತಲೂ ದುರಂತ ಎಂದರೆ ಅಮಾಯಕ ಯುವಕ ವಿರೇಶ ಬೆಂಕಿಗೆ ಸಿಕ್ಕು ಬೆಂದು ಹೋಗಿದ್ದ. ಅಂಗಡಿಯಲ್ಲಿಯೇ ಮಲಗಿದ್ದ ವಿರೇಶ ಮುಂಡರಗಿ ೧೮ ವರ್ಷದ ಯುವಕ ಬೆಂಕಿಗೆ ಬಲಿಯಾಗಿದ್ದಾನೆ. ಅದು ಇಡೀ ಕುಟುಂಬಕ್ಕೆ ಗೊತ್ತಾಗಿದ್ದು ತಡವಾಗಿ. ಬೆಂಕಿಗೆ ಹೆದರಿ ಕಣ್ಮರೆಸಿಕೊಂಡಿರಬೇಕು ಎಂದು ಮನೆಯವರು ಅಂದುಕೊಂಡಿದ್ದರು. ಆದರೆ ಬೆಳಿಗ್ಗೆ ಸಾಮಾನುಗಳನ್ನು ತೆರವುಗೊಳಿಸುವಾಗ ಯುವಕನ ಬೆಂದ ಶವ ಪತ್ತೆಯಾಗಿದೆ. ಇಡೀ ಕುಟುಂಬದ ಆಕ್ರಂದ ಮುಗಿಲು ಮುಟ್ಟಿದೆ. ಲೈಟ್ ಕಂಬಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬೇಕು ಎನ್ನುವ ಅನುಮಾನಗಳಿವೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ‌

Please follow and like us:
error