ಶಾದಿ ಮಹಲ್ ನಲ್ಲಿ ಕೋವಿಡ್ ಸೆಂಟರ್ : ಅನುಮತಿ ಕೋರಿದ ಗಂಗಾವತಿ ಮಸೀದಿ ಕಮಿಟಿ

Positive NEWS 

ಶಾದಿಮಹಲನ್ನು ಕೋವಿಡ್ ಆಸ್ಪತ್ರೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಮುಸ್ಲಿಂ ಬಾಂಧವರು

ಕನ್ನಡನೆಟ್ ನ್ಯೂಸ್ : ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಸಲಹೆ ಮೇರೆಗೆ ಗಂಗಾವತಿ ನಗರದ ಮುಸ್ಲಿಂ ಸಮಾಜದ ಖಾಸಗಿ ಶಾದಿ ಮಹಲ್ ನ್ನು ಕೋವಿಡ ಸೆಂಟರ್ ಆಗಿ ಮಾಡಲು ಬೇರೂನಿ ಆಬಾದೀ ಮಸೀದಿಯ ಅಧ್ಯಕ್ಷ ಶಾಮೀದ ಮನಿಯಾರ್ ಮತ್ತು ಮುಸ್ಲಿಂ ಮುಖಂಡರು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ರಿಗೆ ಮನವಿ ಸಲ್ಲಿಸಿದ್ದಾರೆ.
ಕೊರೋನ ಸೊಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಕೊರೋನ ಸೊಂಕಿತರಿಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯ ಬೆಡ್ ಗಳ ಕೊರತೆ ಉಂಟಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸೊಂಕಿತರು ಆಕ್ಸಿಜನ್ ಮತ್ತು ಬೆಡ್ ಸಿಗದೆ ಸಾಯುವ ಸ್ಥಿತಿ ಉಂಟಾಗಿದೆ. ಹೀಗಾಗಿ ನಮ್ಮ ಮಸೀದಿಯ ಆಡಳಿತ ಮಂಡಳಿಯಲ್ಲಿರುವ ಮಹ್ಮದಿಯಾ ಶಾದಿ ಮಹಲನ್ನು 30 ಹಾಸಿಗೆಯುಳ್ಳ ಕೋವಿಡ ಸೆಂಟರ್ ಮಾಡಿ ಅಲ್ಲಿ ಬರುವ ಕೋವಿಡ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ಮತ್ತು ವೈದ್ಯಕೀಯ ಸೇವೆಯನ್ನು ಮಸೀದಿಯಿಂದ ಬರುವ ಆದಾಯದಲ್ಲಿ ನಡೆಸಲು ತೀರ್ಮಾನಿಸಿ ಮಸೀದಿ ಅಧ್ಯಕ್ಷ, ನಗರಸಭೆ ಸದಸ್ಯ ಶಾಮಿದ್ ಮನಿಯಾರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು. ಆದಷ್ಟು ಬೇಗನೆ ಸ್ಥಳ ಪರಿಶೀಲನೆ ಮಾಡಲು ಮತ್ತು
ಶಾದಿಮಹಲನಲ್ಲಿ 30 ಹಾಸಿಗೆ ( ಬೆಡ್ ) ನ ವ್ಯವಸ್ಥೆ ಮತ್ತು ಆಕ್ಸಿಜನ್ , ವಿದ್ಯತ್ ( ಜನೇರಟರ್ ) ವ್ಯವಸ್ಥೆ ಇದ್ದು , ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ಸಂಜೀವಿನಿ ಆಸ್ಪತ್ರೆಯ ವೈದ್ಯರಾದ ಕೃಷ್ಣಕುಮಾರ್ ಟಿ . ಇವರಿಗೆ ಸೂಚಿಸಲು ವಿನಂತಿಸಿಕೊಂಡಿದ್ದಾರೆ

Please follow and like us:
error