ಶಾಂತಿ ಮತ್ತು ಮಾನವೀಯತೆ ಅಭಿಯಾನ

ದೇಶದಲ್ಲಿ ಹೆಚ್ಚುತ್ತಿರುವ ಕೋಮು ಧ್ರುವೀಕರಣ, ಸಮಾಜದ ಒಡಕು ಹಾಗೂ ಜಾತಿಯ ಮತ್ತು ಧಾರ್ಮಿಕ ನೆಲೆಯಲ್ಲಿ ಧ್ರುವೀಕರಣ, ದ್ವೇಷ ಮತ್ತು ಕೋಮು ಉದ್ವಗ್ನತೆಗಳ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತಿದ್ದೇವೆ. ನಮ್ಮ ದೇಶವು ಅಭಿವೃದ್ಧಿಗೊಳ್ಳುತ್ತಿರುವ ಪ್ರಜಾಪ್ರಭುತ್ವವಾಗಿದ್ದು ಆರ್ಥಿಕ ಮತ್ತು ಔದ್ಯೋಗಿಕ ಅಭಿವರದ್ಧಿಗೆ ಧಾರಾಳ ಸದವಕಾಶಗಳನ್ನು ಹೊಂದಿದೆ ಪ್ರಧಾನಮಂತ್ರಿಯವರು ತನ್ನ ಪ್ರಥಮ ಸ್ವಾತಂತ್ರ್ಯೋತ್ಸವದಿನದ ಭಾಷಣದಲ್ಲಿ ಹೇಳಿದಂತೆ ಧಾರ್ಮಿಕ ಮತ್ತು ಜಾತೀಯ ಉದ್ವಿಗ್ನತೆ ಹಾಗೂ ಸಾಮಾಜಿಕ ಅಸಮಾನತೆಗಳಂತಹ ಕೆಡಕು ಮತ್ತು ಪಾಪಗಳು ದೇಶದ ವಿಭಜನೆಗೆ ಕಾರಣವಾಗಿದ್ದು ಅವುಗಳಿಂದ ಯಾರಿಗೂ ಪ್ರಯೋಜನವಾಗಿಲ್ಲವೆಂಬುದರಲ್ಲಿ ನಮಗೆ ಸಹಮತವಿದೆ. ಧಾರ್ಮಿಕ ಮತ್ತು ಜಾತೀಯ ಹಿಂಸೆಗಳನ್ನು ತ್ಯಜಿಸಲು ಅವರು ಮಾಡಿದ ಭವನಾತ್ಮಕ ಮನವಿಯನ್ನು ನಾವು ಪುನಃ ನೆನಪಿಸಲು ಬಯಸುತ್ತೇವೆ. ಆದರೆ ಈ ಮಾನವೀಯ ೨ ವರ್ಷಗಳ ನಂತರವೂ ನಾವು ಇಂದು ಕಾಣುತ್ತಿರುವ ದೇಶದ ಸ್ಥಿತಿಯು ತುಂಬಾ ಚಿಂತಾಜನಕ ಮತ್ತು ಕಳವಳಕಾರಿಯಾಗಿದೆ ಕಳೆದ ಕೆಲವು ತಿಂಗಳುಗಳಿಂದ ದೇಶದ ವಿವಿಧ ಭಾಗಗಳಲ್ಲಿ ನಡೆದ ಘಟನೆಗಳ ಸರಣಿಯು ದೇಶದ ಸಾಮಾಜಿಕ ಸ್ಥಿತಿಯು ಯಾವ ದಿಕ್ಕಿನತ್ತ ಸಾಗುತ್ತಿದೆಯೆಂಬುದಕ್ಕೆ ಜೀವಂತ ಸಾಕ್ಷಿಗಳಿವೆ. ಪ್ರಧಾನ ಮಂತ್ರಿ ಮತ್ತು ಸರಕಾರದ ನೇತರಾರು ಈ ಹಿಂಸಾತ್ಮಕ ಘಟನೆಗಳ ವಿರುದ್ಧ ಕ್ಲಪ್ತ ಮತ್ತು ಸೂಕ್ತ ಧ್ವನಿ ಎತ್ತುವ ಅಗತ್ಯವನ್ನು ಮನಗಾಣದಿರುವುದು ಪರಿಸ್ಥಿತಿಯನ್ನು ಇನ್ನೂ ಹೆಚ್ಚು ಕೆಡಿಸುತ್ತದೆ ತಡವಾಗಿ ಇತ್ತೀಚಿಗೆ ಪ್ರಧಾನ ಮಂತ್ರಿಯವರು ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಕೊಲೆ ಮತ್ತು ದೌರ್ಜನ್ಯಗಳ ವಿರುದ್ಧ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಆದರೆ ಅದರ ಮೇರೆಯು ಬಹಳ ಸೀಮಿತ ಮತ್ತು ದುರ್ಬಲವಾಗಿತ್ತು ಸರಕಾರ ಮತ್ತು ಆಡಳಿತ ಪಕ್ಷಗಳಲ್ಲಿ ಇರುವ ಪೋಲಿ ಶಕ್ತಿಗಳ ವಿರುದ್ಧ ಯಾವುದೇ ಕಠಿಣಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ ಬದಲಾಗಿ ಆಡಳಿತ ಪಕ್ಷದ ವಕ್ತಾರರಿಂದ ಇಂತಹ ಘಟನೆಗಳನ್ನು ಕ್ಷುಲ್ಲಕವೆಂದು ಸಾರುವ ಹಾಗೂ ಅವುಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ನಿರಂತರ ಪ್ರಯತ್ನಗಳು ನಡೆಯುತ್ತಿವೆ.ಉದ್ರೇಕಕಾರಿ ಭಾಷಣ ಮತ್ತು ಕೋಮು ಭಾವನೆಗಳನ್ನು ಪ್ರಚೋದಿಸುವ ರೀತಿಯ ಕೆಲವು ಮದ್ಯಮಗಳು ಪ್ರಸಾರಗಲು ಕೋಮು ರೋಷದ ಬೆಂಕಿಯನ್ನು ಹರಡುವ ಎರಡು ಪ್ರಮುಖ ಸಾಧನಗಳಾಗಿವೆ, ದ್ವೆಷ ಸಾಧಿಸುವ ಭಾಷಣಗಳ ವಿರುದ್ಧ ನಮ್ಮಲ್ಲಿ ಕಾನೂನುಗಳಿವೆ ಆದರೆ ಅವುಗಳು ಜಾರಿಗುತ್ತಿಲ್ಲ ಕಳೆದ ಕೆಲವು ತಿಂಗಳುಗಳಿಂದ ಒಂದು ನಿಶ್ಚಿತ ಧರ್ಮ ಮತ್ತು ಅದರ ಅನುಯಾಯಿಗಳನ್ನು ಕೆಟ್ಟದಾಗಿ ಚಿತ್ರಿಸುವ ವಿಷಕಾರಿ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವಿಷವು ಅತ್ಯಂತ ಪ್ರಚೋದನಕರಿ ಮತ್ತು ವಿನಾಶಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಅಂತಧರ್ಮೀಯ ಸಂಪರ್ಕ ಮತ್ತು ಸೌಹಾರ್ದವನ್ನು ಬಲಪಡಿಸಲುನವು ಶಾಂತಿ ಮತ್ತು ಮಾನವೀಯತೆ ರಾಷ್ಟ್ರ ವ್ಯಾಪ್ತಿ ಅಭಿಯಾನವನ್ನು ಆರಂಭಿಸಿದ್ದೇವೆ. ಕೋಮು ಶಾಂತಿ ಮತ್ತು ಸಾಮಾಜಿಕ ಸ್ತರಗಳ ಜನರನ್ನು ನಾವು ಬೇಟಿಯಾದೆವು ಇಂತಹ ಸಾಮಾಜಿಕ ಪ್ರಯತ್ನಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದಲೂ ಭಾರತೀಯ ಸಮಾಜದ ಬಹುತ್ವದ ಸ್ವಭಾವ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಯನ್ನು ಖಾತರಿ ಪಡಿಸುವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು.ಹಾಗೂ ವಿವಿಧ ಬೇಡಿಕೆಗಳಾದ ಕೊಲೆ, ಹಿಂಸೆ, ಥಳಿತ, ಸುಡುವಿಕೆ, ಪ್ರಚೋದನೆ ಮತ್ತು ಉದ್ರೇಕಕಾರ ಭಾಷಣದ ಆರೋಪಗಳಿರುವ ಎಲ್ಲರನ್ನೂ ಕೂಡಲೇ ಬಂಧಿಸಿ ತ್ವರಿತಗತಿಯಲ್ಲಿ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯಬೇಕು, ಕೋಮು, ಗಲಭೆಗಳನ್ನು ತಡೆಯುವ ಮಸೂದೆಯನ್ನು ಕೂಡಲೇ ಮಂಜೂರು ಮಾಡಬೇಕು, ಕೋಮು ಗಲಭೆಗಳ ಎಲ್ಲಾ ಸಂತ್ರಸ್ತರಿಗೆ ಸಂಪೂರ್ಣ ಪರಿಹಾರ ಮತ್ತು ರಕ್ಷಣೆಯನ್ನು ಒದಗಿಸಬೇಕು, ಪತ್ರಿಕಾರಂಗದ ಸರ್ವಸಾಮಾನ್ಯ ಶಿಷ್ಟಾಚಾರಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಮೀಡಿಯಾ ಟ್ರಯಲ್ ನಡೆಸುವ ತಪ್ಪು ಮಾಹಿತಿ ಮತ್ತು ಆಧಾರ ರಹಿತ ಆರೋಪಗಳನ್ನು ಹೊರಿಸಿ ಪ್ರಚಾರ ಮಾಡುತ್ತಿರುವ ಸಮಾಜದ ಕೆಲವು ವರ್ಗಗಳನ್ನು ಗುರಿಯಾಗಿಸಿ ಅವರ ಹೆಸರನ್ನು ಕೆಡಿಸುವ ಕೆಲವು ಪತ್ರಿಕೆ ಮತ್ತು ಟಿವಿ ಚಾಲನಗಳ ವಿರುದ್ಧಸೂಕ್ತ ಕ್ರಮ ಕೈಗೊಳ್ಳಬೇಕು, ಅಮತರರ್ಜಾಲದಲ್ಲಿ ಕೋಮು ಭಾವನೆಗಳನ್ನು ಪ್ರಚೋದಿಸುವ ನಿಂದನಿಯ ಮತ್ತು ವಿಷಕಾರಿ ವಿಷಯಗಳು ಪ್ರಸಾರವಾದಂತೆ ನಗಾ ವಹಿಸಬೇಕು, ಸರ್ಕಾರವು ಅಲ್ಪ ಸಂಖ್ಯಾತ, ದಲಿತ, ಮತ್ತು ಆದಿವಾಸಿ ವರ್ಗ ಮತ್ತು ಅವರ ಸಂಘಟನೆಗಳನ್ನು ತಲುಪಿ ಅವರಲ್ಲಿ ಭದ್ರತೆಯ ಪ್ರಜ್ಞೆಯನ್ನು ಬೆಳಸಲು ಮತ್ತು ಅವರ ಕ್ಷೇಮ, ಸುರಕ್ಷತೆ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಇನ್ನಿತರ ಬೇಡಿಕೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಸವರಾಜ ವಿ. ಬಳ್ಳುಳ್ಳಿ, ಮಾಹಂತೇಶ ಮಲ್ಲನಗೌಡರ, ಜಿ.ಎಸ್ ಗೋನಾಳ, ಕೆ.ವಿರಣ್ಣ ಲಿಂಗಾಯತ, ಸೆಬೆಸ್ಟ್ರೇನ್ ಕಾನರಾಜ್, ಜನಾಬ ಖಾಜಿ ಮಹ್ಮದ ಅಬ್ಬಾಸಲಿ ಸಹಾಬ, ಶ್ರೀಮತಿ ಕೋಮಲಾ ಕುದ್ರಿಮೊತಿ, ಎನ್.ಎಂ ದೊಡ್ಡಮನಿ, ಶ್ರೀಮತಿಇ ಗೌರಮ್ಮ ಲೋಹಿತ್ ದೇಸಾಯಿ, ಅಪ್ಪಣ್ಣ ಅರಳಿ ಗಂಗಾಔತಿ, ಸಿ.ಹೆಚ್.ನಾರನಾಳ, ಶ್ರಿಮತಿ ರುದ್ರಮ್ಮ ಹಸಿನಾಳ, ವಿರೇಶ ಬಂಗಾರ ಶೆಟ್ಟರ, ನೆಟರಾಜ ಸೋನಾರ್, ಜನಾಬ ಸೈಯದ್ ಹಿದಾಯತ್ ಅಲಿ ಸಹಾಬ, ಜನಾಬ ಗೌಸ ಮೊಯಿದ್ಧೀನ್ ಸಹಾಬ ಸರದಾರ್ ಇನ್ನೂ ಮುಂತಾದವರು ಉಪಸ್ತಿತರಿದ್ದರು.

Please follow and like us:
error