ವ್ಯವಹಾರದ ನೆಪದಲ್ಲಿ ದರೋಡೆ : ಆರೋಪಿಯ ಬಂಧನ


ಕೊಪ್ಪಳ : ಎರಡು ಎಕರೆ ಕೊಡುವದಾಗಿ ಹೇಳಿ, ನರ್ಸರಿಯನ್ನು ತಾನೇ ನಿರ್ವಹಿಸಿಕೊಡುತ್ತೇನೆ ಭೂಮಿ ಖರೀದಿಗೆ ಮತ್ತು ನರ್ಸರಿಯನ್ನು ಸ್ಥಾಪಿಸಲು ಹಣದೊಂದಿಗೆ ಬರುವಂತೆ ಹೇಳಿ ಬಂದಂತಹ ವ್ಯಕ್ತಿಯ ಬಳಿಯಿದ್ದ ದುಡ್ಡನ್ನು ದರೋಡೆ ಮಾಡಿದ್ದ ಪ್ರಕರಣವನ್ನು ಭೇದಿಸಿದ ಪೋಲಿಸರು ಆರೋಪಿಯನ್ನು ಬಂದಿಸಿದ್ದಾರೆ.

ಪ್ರಕರಣದ ವಿವರ  :
ಕೊಪ್ಪಳ ಜಿಲ್ಲೆಯ ಕೊಪ್ಪಳ ಗ್ರಾಮೀಣ ವೃತ್ತ ವ್ಯಾಪ್ತಿಯ ಅಳವಂಡಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಅಪರಾಧ ಸಂ : 12/2021 ಕಲಂ : 394 ಐಪಿಸಿ ಪ್ರಕರಣದಲ್ಲಿಯ ಫಿರ್ಯಾದಿದಾರರಾದ  ವಂಜಗಲಿ ಅಂಜಿ ಸಾ : ಮದನಪಲ್ಲಿ ಆಂದ್ರಪ್ರದೇಶ ರಾಜ್ಯ ಇವರಿಗೆ ಆರೋಪಿತನಾದ ಇ . ರವಿ ತಂದ ಇ , ತಿಮ್ಮಯ್ಯ ಸಾ : ಕದ್ರಿ ಸೈದಾಪೂರ , ಜಿ : ಅನಂತಪುರ , ಆಂದ್ರಪ್ರದೇಶ ರಾಜ್ಯ ಎಂಬುವನು ಫಿರ್ಯಾಧಿಗೆ ವೆಂಕಟೇಶ ಅಂತಾ ಪರಿಚಯ ಮಾಡಿಕೊಂಡು ತಾನು ಕರ್ನಾಟಕ ರಾಜ್ಯ ಶಿವಮೊಗ್ಗ ಭಾಗಕ್ಕೆ ಸೇರಿದ್ದು ನಮ್ಮ ಭಾಗದಲ್ಲಿ ನರ್ಸರಿ ಮಾಡಲು ಅನಕೂಲ ಇದ್ದು ಭೂಮಿಯು ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದು ಮತ್ತು ನೀರಾವರಿ ಸೌಲಭ್ಯ ಇದೆ ಅಂತಾ ಹೇಳಿ ನಿಮಗೆ ಇನ್ನೂ ಯೋಗ್ಯ ಬೆಲೆಗೆ ತನ್ನದೆ ಎರಡು ಎಕರೆ ಕೊಡುವದಾಗಿ ಹೇಳಿ ಮತ್ತು ನರ್ಸರಿಯನ್ನು ತಾನೇ ನಿರ್ವಹಿಸಿಕೊಡುತ್ತೇನೆ ಅಂತಾ ಹೇಳಿ ಭೂಮಿ ಖರೀದಿಗೆ ಮತ್ತು ನರ್ಸರಿಯನ್ನು ಸ್ಥಾಪಿಸಲು ಹಣದೊಂದಿಗೆ ಬರುವಂತೆ ಹೇಳಿ ದಿನಾಂಕ : 30-01-2021 ರಂದು ಬೆಳಗ್ಗೆ 7-00 ಗಂಟೆಯ ವೇಳೆಗೆ ಕೊಪ್ಪಳಕ್ಕೆ ಕರೆಯಿಸಿ ಕೊಪ್ಪಳದಿಂದ ಫಿರ್ಯಾಧಿ ಮತ್ತು ಅತನ ಹೆಂಡತಿಗೆ ಬೇಟಿ ಮಾಡಿ ಹಲಗೇರಿ ಕ್ರಾಸಗೆ ಮುಖಾಂತರ ಹಣವಾಳ ಗ್ರಾಮದ ಕಡೆಗೆ ಹೋಗುವ ರಸ್ತೆಗೆ ಕರೆದುಕೊಂಡು ಹೋದಾಗ ರವಿ ಈತನು ಇನ್ನಿತರ ಆರೋಪಿತರಾದ ಕೆ , ಮಲ್ಲಿಕಾರ್ಜುನ ಹಾಗೂ ಇತರ ನಾಲ್ಕು ಜನರೊಂದಿಗೆ ಕೂಡಿ ಫಿರ್ಯಾಧಿಗೆ ಕಾರಿಗೆ ಹಿಂದ ಮತ್ತು ಮುಂದಿನಿಂದ ಎರಡು ಬೈಕ್ ಗಳಲ್ಲಿ ಅಡ್ಡ ಹಾಕಿ ಪಿರ್ಯಾಧಿದಾರರಿಗೆ ಹೆದರಿಸಿ ಕಟ್ಟಿಗೆ ಬಡಿಗೆಯಿಂದ ಹೊಡೆದು ಫಿರ್ಯಾಧಿ ಹೆಂಡತಿ ಬ್ಯಾಗಿನಲ್ಲಿ ಇದ್ದ 8,50,000 / – ರೂ ಗಳನ್ನು ಅವರ ಹತ್ತಿರ ಇದ್ದ ರೇಡ್ ಮೀ ಕಂಪನಿಯ ಹಾಗೂ ಎಮ್.ಐ 10 ಕಂಪನಿಯ ಎರಡು ಮೊಬೈಲಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದು ಇತ್ತು , ನಂತರ ಪ್ರಕರಣದಲ್ಲಿ ಆರೋಪಿತರ ಮತ್ತು ದೋಚಿಕೊಂಡು ಹೋದ ನಗದು ಹಣ ಮತ್ತು ಮೊಬೈಲ್ ಪತ್ತೆ ಕುರಿತು ಟಿ . ಶ್ರೀಧರ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಕೊಪ್ಪಳ ಹಾಗೂ  ವೆಂಕಟಪ್ಪ ನಾಯಕ ಪೊಲೀಸ ಉಪಾಧೀಕ್ಷಕರು ಕೊಪ್ಪಳ ಉಪ – ವಿಭಾಗ ರವರ ಮಾರ್ಗದರ್ಶನದಲ್ಲಿ ಗ್ರಾಮೀಣ ವೃತ್ತದ  ವಿಶ್ವನಾಥ ಹಿರೇಗೌಡರ್ , ಚಂದ್ರಪ್ಪ ಹೆಚ್ , ಪಿ.ಎಸ್.ಐ ಅಳವಂಡಿ ಹಾಗೂ ಸಿಬ್ಬಂದಿಗಳಾದ ಚಂದಪ್ಪ ನಾಯ್ಕ ಹೆಚ್.ಸಿ -232 , ಕೊಪ್ಪಳ ಗ್ರಾಮೀಣ , ಶಿವಪುತ್ರಪ್ಪ ಹೆಚ್.ಸಿ -248 , ಖಾಜಾಸಾಬ ದಫೇದಾರ , ಹೆಚ್.ಸಿ. 96 ಅಮರೇಗೌಡ ಪಿಸಿ -502 ಅಳವಂಡಿ ಪೊಲೀಸ ರಾಣೆ , ಜಿಲ್ಲಾ ಪೊಲೀಸ ಸಿಡಿ , ಆರ್ ಘಟಕದ ತಾಂತ್ರಿಕ ವರ್ಗದ ಸಿಬ್ಬಂದಿಗಳಾದ ಪ್ರಸಾದ ಕೊಟೇಶ ರವರೊಂದಿಗೆ ವೈಜ್ಞಾನಿಕ ತನಿಖೆ ಆಧಾರದ ಮೇಲೆ ದಿನಾಂಕ : 10.02.2021 ರಂದು ಆಪಾದಿತನಾದ ಕೆ . ಮಲ್ಲಿಕಾರ್ಜುನ ಎಂಬವನು ಹರಪನಹಳ್ಳಿ ತಾಲೂಕಿನ ಯಲ್ಲಾಪೂರ ಗ್ರಾಮದಲ್ಲಿ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಪಾದಿತನಾದ ಕೆ.ಮಲ್ಲಿಕಾರ್ಜುನ ತಂದ ಕ.ಎಂ. ನಾಗರಾಜಪ್ಪ ವಯಸ್ಸು 27 ವರ್ಷ ಸಾ : ಯಲ್ಲಾಪೂರ , ತಾ : ಹರಪನಹಳ್ಳಿ ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿ ದೋಚಿಕೊಂಡು ಹೋದ ನಗದು ಹಣದ ಪ್ರತಿ ರೂ 6,97,800 / – ಹಾಗೂ ಎರಡು ಮೊಬೈಲಗಳನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ . ಉಳಿದ 4 ಜನ ಆರೋಪಿತರು ತಲೆ ಮರೆಸಿಕೊಂಡಿದ್ದು ಪ್ರಕರಣವು ತನಿಖಾ ಹಂತದಲ್ಲಿರುತ್ತದೆ . ಸದರ ಪ್ರಕರಣವನ್ನು ಭೇದಿಸುವಲ್ಲಿ ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಮಾನ್ಯ ಜಿಲ್ಲಾ ಪೊಲೀಸ ಅಧೀಕ್ಷಕರು ಕೊಪ್ಪಳ ರವರು ಶ್ಲಾಘನ ವ್ಯಕ್ತಪಡಿಸಿದ್ದಾರೆ.

Please follow and like us:
error