ವಿಶ್ವಾರಾಧ್ಯ ಸತ್ಯಂಪೇಟೆ ವಿರುದ್ದ ಕೇಸ್ ವಾಪಸ್ ಪಡೆಯಲು ಆಗ್ರಹ

ಕೊಪ್ಪಳ : ಜಿಲ್ಲಾ ಜಾಗತಿಕ ಲಿಂಗಾಯತ ಮಾಹಸಭಾ ದಿಂದ ಬಸವತತ್ವ ಚಿಂತಕ,ಶರಣ ಸಾಹಿತಿ,ದಿಟ್ಟ ಪತ್ರಕರ್ತ ವಿಶ್ವಾರಾಧ್ಯ ಸಂತ್ಯಂಪೇಟೆ ಅವರ ಮೇಲೆ ಮಾಡಲಾದ ಕಿರಕುಳದ ಕೇಸ್ ವಾಪಸ್ಸು ಪಡೆಯಬೇಕೆಂದು ವಿವಿಧ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿವೆ.
ಸತ್ಯಾಸತ್ಯತೆ ಅರಿಯದ,ಸೈದ್ಧಾಂತಿಕ ಭಿನ್ನ ನಿಲುವುಗಳನ್ನು ಅರ್ಥಮಾಡಿಕೊಳ್ಳದೇ ಅವರ ಮೇಲೆ ದಾವಣಗೆರೆ ಜಿಲ್ಲೆ,ಹೊನ್ನಾಳಿಯಲ್ಲಿ ಸರಕಾರ ಕೇಸ್ ದಾಖಲಿಸಿಕೊಂಡಿರುವುದು ಪ್ರಜಾಸತ್ತೆಯ ವಿರೋಧಿ ಕೃತ್ಯವಾಗಿದೆ.
ಇಂದು ಕೊಪ್ಪಳ ತಹಶಿಲ್ದಾರರ ಮುಖಾಂತರ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ, ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿ,ಈ ಕೂಡಲೇ ಕೇಸ್ ಹಿಂತೆಗೆಯಬೇಕೆಂದು ಒತ್ತಾಯಿಸಲಾಯಿಸಿದರು.

Please follow and like us:
error