ವಿಮ್ಸ್ನಲ್ಲಿ ವೈದ್ಯರು ಸೇರಿ 19 ಜನರಿಗೆ ಸೊಂಕು


ಇಡೀ ವಿಮ್ಸ್ಗೆ ಸೊಂಕುನಿವಾರಕ ಔಷಧ ಸಿಂಪಡಣೆ
ಬಳ್ಳಾರಿ,ಜು.04(ಕರ್ನಾಟಕ ವಾರ್ತೆ): ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆರೋಗ್ಯ ಸೇವೆ ಸೌಲಭ್ಯ ಒದಗಿಸುತ್ತಿರುವ ವೈದ್ಯರು, ಸ್ಟಾಪ್ ನರ್ಸ್,ಲ್ಯಾಬ್ ಟೆಕ್ನಿಷಿಯನ್,ಪಿಜಿ ವಿದ್ಯಾರ್ಥಿಗಳು ಸೇರಿದಂತೆ 19 ಜನರಿಗೆ ಕೋವಿಡ್ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆ ಮೇರೆಗೆ ವಿಮ್ಸ್ನ ಇಡೀ ಆವರಣದಲ್ಲಿ ಹಾಗೂ ಒಳಗಡೆ ಸಂಪೂರ್ಣ ಸೊಂಕು ನಿವಾರಕ ಔಷಧ ಸಿಂಪಡಣೆ ಕಾರ್ಯ ಶನಿವಾರ ನಡೆಯಿತು.
ಶನಿವಾರ ಬೆಳಗ್ಗೆಯಿಂದಲೇ ವಿಮ್ಸ್ನಲ್ಲಿ ಸೊಂಕುನಿವಾರಕ ಔಷಧ ಸಿಂಪಡಣೆ ಮಾಡಲಾಗುತ್ತಿದೆ.  20 ಜನರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದ್ದು, 60 ಜನರನ್ನು ಪ್ರಥಮ ಸಂಪರ್ಕಿತರೆAದು ಗುರುತಿಸಲಾಗಿದೆ ಎಂದು ವಿಮ್ಸ್ ನಿರ್ದೇಶಕ ಡಾ.ದೇವಾನಂದ ಅವರು ತಿಳಿಸಿದ್ದಾರೆ.
ವಿಮ್ಸ್ಗೆ ಆರೋಗ್ಯ ಸೇವೆ ಪಡೆಯಲು ಆಗಮಿಸುತ್ತಿರುವ ತೀವ್ರ ಉಸಿರಾಟದ ಸಮಸ್ಯೆ, ಲಘುಶೀತ ಜ್ವರ(ಐಎಲ್‌ಐ)ದಂತವರ ಮೂಲಕ ಆರೋಗ್ಯ ಸೇವೆ ಒದಗಿಸುತ್ತಿರುವವರಿಗೆ ಈ ಸೊಂಕು ಹರಡಿದೆ; ಈ ಹಿನ್ನೆಲೆಯಲ್ಲಿ ವಿಮ್ಸ್ನಲ್ಲಿ ಸೊಂಕು ಹರಡಬಾರದು ಎಂಬ ಉದ್ದೇಶದಿಂದ ಸೊಂಕುನಿವಾರಕ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.
*ಜು.10ರೊಳಗೆ ಟ್ರಾಮಾಕೇರ್ ರೆಡಿ ಮಾಡಿ: ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳ ಕೊರತೆ ಕಾಡುತ್ತಿದ್ದು,ಈ ಹಿನ್ನೆಲೆಯಲ್ಲಿ ಟ್ರಾಮಾಕೇರ್ ಸೆಂಟರ್‌ನಲ್ಲಿ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಜು.10ರೊಳಗೆ ಕಲ್ಪಿಸಿ,ಒದಗಿಸುವುದಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.
ಟ್ರಾಮಾಕೇರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಇನ್ನೂ ಒಂದು ವಾರದೊಳಗೆ ಒದಗಿಸುವದಕ್ಕೆ ಮುಂದಾಗಬೇಕು. ನಿಗದಿಪಡಿಸಿದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್,ವಿಮ್ಸ್ ನಿರ್ದೇಶಕ ಡಾ.ದೇವಾನಂದ, ವಿಮ್ಸ್ ಅಧೀಕ್ಷಕ ಡಾ.ಮರಿರಾಜ್ ಮತ್ತಿತರರು ಇದ್ದರು.

Please follow and like us:
error