ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ-?

ಬಳ್ಳಾರಿ-   ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದ ವಿದ್ಯಾರ್ಥಿಗಳು- ಐದಾರು ವಿದ್ಯಾರ್ಥಿಗಳಿಂದ ಒಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ- ಹಿಗ್ಗಾ ಮುಗ್ಗಾ ಥಳಿಸಿ  ಕಾಲುವೆಗೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಸುನೀಲ್ ಕುಮಾರ್ (16)  ಮೃತ ವಿದ್ಯಾರ್ಥಿ- ಬಳ್ಳಾರಿಯ ಅಲ್ಲಿಪುರದ ಬಳಿಯ ಕಾಲುವೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಹೊಸಪೇಟೆಯ ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿದ್ದ ಸುನೀಲ್ ಕುಮಾರ್- ಅದೇ ಶಾಲೆಯ ವಿದ್ಯಾರ್ಥಿಗಳಿಂದ ಕೃತ್ಯ ನಡರದಿದೆ  ಎನ್ನಲಾಗುತ್ತಿದೆ. ನಾ ಲ್ಕು ದಿನದ ಹಿಂದೆ ಶಾಲೆಯಲ್ಲಿ     ವಿದ್ಯಾರ್ಥಿಗಳು ಪರಸ್ಪರ ಜಗಳ ಮಾಡಿಕೊಂಡಿದ್ದರು. ಈ  ವಿಚಾರವಾಗಿ ಎರಡು ಕಡೆ ಯವರನ್ನು ಕರೆದು ಮಾತನಾಡಿದಾಗ ಹಲ್ಲೆ ಮಾಡಿ ಕಾಲುವೆಗೆ ಹಾಕಿದ ವಿದ್ಯಾರ್ಥಿಗಳ ಪೊಷಕರು ಹಾಗೂ ಮೃತ ವಿದ್ಯಾರ್ಥಿಗಳ ಪೊಷಕರ ನಡುವೆ ವಾಗ್ವಾದ ಕೂಡ ನಡೆದಿತ್ತು-. ತಮ್ಮ ಮಗನನ್ನು ಕೊಲೆ ಮಾಡಲಾಗಿದೆ ಎಂದು ಸುನಿಲ್ ಕುಮಾರ್ ಪೊಷಕರ ಆರೋಪ ಮಾಡಿದ್ದಾರೆ. ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು- ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಲಾಗಿದೆ.

Please follow and like us:
error