ವಿಜಯನಗರ ಜಿಲ್ಲೆ ಗಡಿಗಳಿಗೆ ಕ್ಯಾಬಿನೆಟ್ ಅನುಮೋದನೆ

ಬೆಂಗಳೂರು :;ವಿಜಯನಗರ ಜಿಲ್ಲೆಗೆ ಗಡಿಗಳನ್ನು ಕ್ಯಾಬಿನೆಟ್ ಅನುಮೋದಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಬಳ್ಳಾರಿ ಜಿಲ್ಲೆಯಿಂದ ಹೊಸದಾಗಿ  ವಿಜಯನಗರ ಜಿಲ್ಲೆಯ ಗಡಿಗಳನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ.

ಹೊಸಪೇಟೆ ಜಿಲ್ಲಾ ಪ್ರಧಾನ ಕಚೇರಿ. ಹೊಸಪೇಟೆ , ಹರಪ್ಪನಹಳ್ಳಿ, ಹೂವಿನಹಡಗಲಿ, ಹಗರಿ ಬೊಮ್ಮನಹಳ್ಳಿ, ಕೊಟ್ಟುರು ಮತ್ತು ಕುಡ್ಲಿಗಿ ಸೇರಿದಂತೆ ಆರು ತಾಲ್ಲೂಕುಗಳು ವಿಜಯನಗರ ಜಿಲ್ಲೆಯ ಭಾಗವಾಗಲಿವೆ.ಉಳಿದ ತಾಲ್ಲೂಕುಗಳು ಬಳ್ಳಾರಿ ಜಿಲ್ಲೆಯ ಭಾಗವಾಗಲಿವೆ.

ಬಳ್ಳಾರಿ ಜಿಲ್ಲೆಯ ತಾಲೂಕುಗಳು.

1- ಬಳ್ಳಾರಿ ( ಜಿಲ್ಲಾ ಕೇಂದ್ರ)
2- ಸಿರುಗುಪ್ಪ
3- ಸಂಡೂರು
4-ಕುರುಗೋಡು
5- ಕಂಪ್ಲಿ.

ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರೋ ತಾಲೂಕುಗಳು.

1- ಹೊಸಪೇಟೆ( ಜಿಲ್ಲಾ ಕೇಂದ್ರ)

2- ಹಗರಿಬೊಮ್ಮನ ಹಳ್ಳಿ
3- ಕೂಡ್ಲಿಗಿ
4- ಕೊಟ್ಟೂರು
5- ಹರಪನಹಳ್ಳಿ
6- ಹೂವಿನ ಹಡಗಲಿ

 

Please follow and like us:
error