ವಾನರಗಳಿಗೆ ಹಣ್ಣು ವಿತರಿಸಿ ಮಾನವೀಯತೆ ಮೆರೆದ ಸಿಪಿಐ ‘ಮಾರುತಿ’

ಕನ್ನಡನೆಟ್ ನ್ಯೂಸ್ : ಹಸಿವಿನಿಂದ ಕಂಗೆಟ್ಟ ಪ್ರಾಣಿಗಳಿಗೆ ಆಹಾರ ನೀಡಿ ಪೋಲಿಸರು ಮಾನವೀಯತೆ ಮೆರೆಯುತ್ತಿದ್ದಾರೆ. ಕೊಪ್ಪಳದಲ್ಲಿ ವಾನರಗಳಿಗೆ ಹಣ್ಣು ಹಂಪಲು ವಿತರಿಸಿ ಪೋಲಿಸ್ ಅಧಿಕಾರಿಗಳು ಮಾನವೀಯತೆ ಮೆರೆದಿದ್ದಾರೆ.
ಮಳೇಮಲ್ಲೇಶ್ವರ ದೇವಸ್ಥಾನದ ಬಳಿ ವಾನರಗಳು ಆಹಾರ ನೀಡುವ ಜನರಿಲ್ಲದೇ ಉರಿಬಿಸಿಲಿನಲ್ಲಿ ಕಂಗಾಲಾಗಿದ್ದವು. ಇದನ್ನು ಗಮನಿಸಿದ್ದ ನಗರ ಠಾಣೆಯ ಸಿಪಿಐ ಮಾರುತಿ ಗುಳ್ಳಾರಿ, ಸಿಪಿಐ ರವಿ ಉಕ್ಕುಂದ ತಮ್ಮ ವಾಹನದಲ್ಲಿ ಹಣ್ಣುಗಳನ್ನು ತೆಗೆದುಕೊಂಡು ಹೋಗಿ ವಾನರ ಸೈನ್ಯಕ್ಕೆ ಹಂಚಿದರು. ಕೊಪ್ಪಳ ನಗರದ ಸುತ್ತಮುತ್ತಲಿನ ಗುಡ್ಡದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾನರಗಳು ಇವೆ. ನೀರು ಅಹಾರವಿಲ್ಲದೇ ಕಂಗಾಲಾಗಿವೆ. ಇಂತಹ ಸಮಯದಲ್ಲಿ
ಪೋಲಿಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Please follow and like us:
error