ವಕೀಲರ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ಅಸೀಪ್ ಅಲಿ ಮನವಿ


ವಕೀಲರ ಪ್ರೋತ್ಸಾಹ ಧನ, ಬಾಕಿ ಇರುವ 1 ತಿಂಗಳುಗಳ ಪ್ರೋತ್ಸಾಹ ಧನ ಜೊತೆಗೆ  ಕರೋನಾದಿಂದ ಉಂಟಾದ ಕರ್ಫ್ಯೂ ತಿಂಗಳುಗಳಾದ ಏಪ್ರಿಲ್ ಮತ್ತು ಮೇ ಎರಡು ತಿಂಗಳಗಳ ಹಣವನ್ನು ಬಿಡುಗಡೆ ಮಾಡಲು
ವಕೀಲರೂ ಹಾಗೂ ನೋಟರಿ ಭಾರತ ಸರ್ಕಾರ, ಸದಸ್ಯರು ರಾಜ್ಯ ವಕೀಲರ ಪರಿಷತ್ತು , ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಅಸಿಫ್ ಅಲಿ .ಎಸ್. ಪತ್ರದ ಮೂಲಕ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

ಪತ್ರದ ಸಾರಾಂಶ ಇಲ್ಲಿದೆ

ಮುಖ್ಯಮಂತ್ರಿಗಳು,
ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು
ಮುಖ್ಯಮಂತ್ರಿಗಳ ಕಾರ್ಯಾಲಯ ವಿಧಾನಸೌಧ
ಬೆಂಗಳೂರು – 1.

ವಿಷಯ:- ” ವಕೀಲರ ಪ್ರೋತ್ಸಾಹ ಧನ, ಬಾಕಿ ಇರುವ 1 ತಿಂಗಳುಗಳ ಪ್ರೋತ್ಸಾಹ ಧನ ಜೊತೆಗೆ  ಕರೋನಾದಿಂದ ಉಂಟಾದ ಕರ್ಫ್ಯೂ ತಿಂಗಳುಗಳಾದ ಏಪ್ರಿಲ್ ಮತ್ತು ಮೇ ಎರಡು ತಿಂಗಳಗಳ ಹಣವನ್ನು ಬಿಡುಗಡೆ ಮಾಡಲು ವಿನಂತಿ. “

ಮಾನ್ಯರೇ,

ಭಾರತ ದೇಶ ಮತ್ತು ನಮ್ಮ ಕರ್ನಾಟಕ ರಾಜ್ಯ ಕರೋನಾ ಕರ್ಫೂನಿಂದ ಬಳಲುತ್ತಿರುವುದು ಗೊತ್ತಿರುವ ಸಂಗತಿಯೇ, ಕಾರಣ ರಾಜ್ಯದ ಯುವ ವಕೀಲರುಗಳು ಹಣಕಾಸಿನ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ ಕಾರಣ ದಯಾಳುಗಳ ಆದ ತಾವು ವಕೀಲರಿಗೆ ಸರಕಾರದಿಂದ ನೀಡುತ್ತಿರುವ ಪ್ರೋತ್ಸಾಹ ಧನ ವಿಳಂಬವಾದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಕಂದಾಯ ಇಲಾಖೆಯ ಮಂತ್ರಿಗಳ ಹಾಗೂ ಅಧಿಕಾರಿಗಳಿಗೆ ಸದರಿ ಸಮಸ್ಯೆಯನ್ನು ಬಗೆಹರಿಸಲು ತಾವು ನಿರ್ದೇಶನ ನೀಡಬೇಕೆಂದು ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ‌.

ಸದರಿ ವರ್ಷಕ್ಕೆ 10 ಸಾವಿರ ರೂ. 2019 ರ ಆದೇಶದಂತೆ 1 ತಿಂಗಳ ಕಾಲ ನೀಡಬೇಕಿದ್ದ 5 ಸಾವಿರಗಳೆಂತೆ 1 ತಿಂಗಳ ಕಾಲ ನೀಡುವ ಪ್ರೋತ್ಸಾಹ ಧನ ನೀಡಿಲ್ಲ.   ಹಾಗೆಯೇ ಓ ಬಿ ಸಿ.ಹಾಗು ಇತರೆ ಜಾತಿಯವರಿಗೆ ನೀಡಬೇಕಿದ್ದ ಪ್ರತಿ ತಿಂಗಳಿಗೆ 4 ಸಾವಿರದಂತೆ 1 ತಿಂಗಳ ಬಾಕಿ ಇರುವ ಪ್ರೋತ್ಸಾಹ ಧನ ಜೊತೆಗೆ ಸದರಿ ತಿಂಗಳು ಏಪ್ರಿಲ್ ಹಾಗೂ ಮುಂದಿನ ತಿಂಗಳು ಮೆ ಇವೆರಡನ್ನು ಸೇರಿಸಿ ಒಟ್ಟು 3 ತಿಂಗಳ ಪ್ರೋತ್ಸಾಹಧನವನ್ನು ಬಿಡುಗಡೆಗೆ ಮಾಡಿಕೊಡಬೇಕೆಂದು ತಮ್ಮಲ್ಲಿ  ಕಳಕಳಿಯ ಮನವಿ.

ಕರ್ನಾಟಕ ರಾಜ್ಯದಲ್ಲಿ 30 ಜಿಲ್ಲೆಗಳಿಂದ ಸುಮಾರು 3720 ವಕೀಲರು ಪ್ರತಿವರ್ಷ ಪ್ರೋತ್ಸಾಹಧನವನ್ನು ಪಡೆಯುತ್ತಿದ್ದು ಅದರಿಂದ ವಕೀಲರು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದು ಕರೋನವೈರಸ್ ಕಾರಣದಿಂದ ರಾಜ್ಯವು ಲಾಕ್ ಡೌನ್ ಆಗಿದ್ದು ಇದರಿಂದ ವಕೀಲರು ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಿದ್ದಾರೆ ಕಾರಣ ತಾವುಗಳು ಮಾರ್ಚನಲ್ಲಿ ಕೊಡಬೇಕಾಗಿರುವ ಪ್ರೋತ್ಸಾಹಧನ  ಹಾಗೂ  ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ  ಬರಬೇಕಾದ ಪ್ರೋತ್ಸಾಹಧನವನ್ನು ಆದಷ್ಟು ಬೇಗನೆ  ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಜೊತೆ ಮಾತನಾಡಿ ಹಣ ಬಿಡುಗಡೆ ಮಾಡಿ ವಕೀಲರ ಗಳಿಗೆ ಆರ್ಥಿಕವಾಗಿ ಅನುಕೂಲ ಮಾಡಬೇಕೆಂದು ಹಾಗೂ ವಕೀಲರ  ವೃತ್ತಿಯ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಈ ಮೂಲಕ ತಮ್ಮಲ್ಲಿ  ಮತ್ತೊಮ್ಮೆ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ

ಧನ್ಯವಾದಗಳೊಂದಿಗೆ

ಇಂತಿ ತಮ್ಮ ವಿಶ್ವಾಸಿ

( ಅಸಿಫ್ ಅಲಿ .ಎಸ್.)

Please follow and like us:
error