ಲೋಕಸಭೆ ಚುನಾವಣೆ ಸ್ಪರ್ಧೆಗೆ ಆಸಕ್ತಿ ಇಲ್ಲ – ರಾಯರಡ್ಡಿ

Koppal ಇವತ್ತು ರಾಜಕಾರಣ ಮಾಡೋರು ಲಫಂಗರು, ಮೂರು ಬಿಟ್ಟವರು. ಇವತ್ತು ಎಲ್ಲ ಪಕ್ಷಗಳ ರಾಜಕಾರಣಿಗಳು ಅನೈತಿಕವಾಗಿ ನಡಕೊಳ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ರು. ಕೊಪ್ಪಳದ

ಚಿಕ್ಕವಕ್ಕಲಕುಂಟಾದಲ್ಲಿ ಮಾತನಾಡಿದ ರಾಯರಡ್ಡಿಯವರು, ರಾಜಕೀಯ ವ್ಯವಸ್ಥೆ ಗಲೀಜ್ ಆಗಿದೆ. ಎಲ್ಲಾ ಪಕ್ಷದಲ್ಲಿ ನೈತಿಕತೆ ಇಲ್ಲ, ಜನಪ್ರತಿನಿಧಿಗಳು ಸರಿಯಾಗಿ ನಡೆದುಕೊಳ್ಳಿ ಎಂದು ಜನರು ತಿರುಗಿಬೀಳಬೇಕು, ಟಿವಿಯವರ ಸಹ ರಾಜಕಾರಣಿಗಳ ವಿರುದ್ದ ನಿಲ್ಲಬೇಕು,ಆದ್ರೂ ನಮ್ಮ ಜೊತೆ ನಿವು ಸಹ ಅಡ್ಜಸ್ಟ್ ಆಗಿದ್ದೀರಿ ಎಂದು ಮಾಧ್ಯಮಗಳ ವಿರುದ್ದ ತಿರುಗಿ ಬಿದ್ರು. ಶಾಸಕ ಗಣೇಶ್ ಮೇಲೆ ಹಲ್ಲೆ ಪ್ರಕರಣ, ಯಡಿಯ್ಯೂರಪ್ಪನವರ ಸಿಡಿ ಪ್ರಕರಣ ರಾಜಕೀಯ ವ್ಯವಸ್ಥೆಯನ್ನೆ ಹಾಳು ಮಾಡಿದೆ ಎಂದು ಎಲ್ಲಾ ಪ್ರಕ್ಷಗಳ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ರು. ಲೋಕಸಭಾ ಚುನಾವಣೆಗೂ ದೋಸ್ತಿ ಮುಂದುವರಿಸುವ ಬಗ್ಗೆ ಉಭಯ ಪಕ್ಷಗಳ ಮುಖಂಡರು ಬೆಗ್ಗರ್ಸ್ ಹೇಳಿಕೆ ನೀಡಿದ್ದು ಸರಿಯಲ್ಲ. ಅದರಲ್ಲೂ ಸಿಎಂ ಆ ರೀತಿ ಮಾತನಾಡಬಾರದಿತ್ತು ಎಂದು ಸಿಎಂ ಗೆ ಟಾಂಗ್ ನೀಡಿದ್ರು. ನನ್ನ ಅಭಿಪ್ರಾಯ ಪ್ರಕಾರ, ಜೆಡಿಎಸ್, ಕಾಂಗ್ರೇಸ್ ಮೈತ್ರಿಮಾಡಿಕೊಂಡು ಚುನಾವಣೆ ಎದುರಿಸಲಿವೆ. ನಾನು ಎಂಪಿ ಟಿಕೇಟ್ಗೆ ಅರ್ಜಿ ಹಾಕಿಲ್ಲ, ಹಾಕೋದು ಇಲ್ಲ. ಆದ್ರೆ ಪಕ್ಷದ ನಾಯಕರು ಒತ್ತಾಯ ಮಾಡ್ತಿದ್ದಾರೆ. ಟಿಕೇಟ್ ಕೊಟ್ರೆ ಸ್ಪರ್ಧಿಸುವೆ ಎಂದ್ರು.

Please follow and like us:
error