ಲೋಕಸಭಾ ಚುನಾವಣೆ; ಬಹಿರಂಗ ಪ್ರಚಾರಕ್ಕೆ ತೆರೆ, ಮತಗಟ್ಟೆಯತ್ತ ಸಿಬ್ಬಂದಿ

ಕೊಪ್ಪಳ ಏ. 21: ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಏಪ್ರಿಲ್ 23 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಏಪ್ರಿಲ್ 21 ರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು ಏಪ್ರಿಲ್ 22 ರಂದು ಮಸ್ಟರಿಂಗ್ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕೊಪ್ಪಳ ಜಿಲ್ಲೆಯ 5 ಹಾಗೂ ರಾಯಚೂರು ಜಿಲ್ಲೆಯ ಎರಡು ಮತ್ತು ಬಳ್ಳಾರಿ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರ ಸೇರಿ 8 ವಿಧಾನಸಭಾ ಕ್ಷೇತ್ರಗಳು ಈ ವ್ಯಾಪ್ತಿಗೆ ಬರಲಿವೆ. ಒಟ್ಟು 2033 ಮತಗಟ್ಟೆಗಳಿದ್ದು 862466 ಪುರುಷ, 873539 ಮಹಿಳೆಯರು ಹಾಗೂ 113 ಇತರೆ ಸೇರಿ 1736118 ಮತದಾರರಿದ್ದಾರೆ.
ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್ ಕೇಂದ್ರಗಳು;
ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು ಏಪ್ರಿಲ್ 22 ರಂದು ಮಸ್ಟರಿಂಗ್ ನಡೆಯಲಿದೆ. ಸಿಂಧನೂರು ಸರ್ಕಾರಿ ಪದವಿ ಕಾಲೇಜು, ಕುಷ್ಟಗಿ ರಸ್ತೆ, ಮಸ್ಕಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಲಿಂಗಸೂರು, ಕುಷ್ಟಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಷ್ಟಗಿ, ಕನಕಗಿರಿ ಬಾಲಕರ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ, ಗಂಗಾವತಿ, ಗಂಗಾವತಿ ಲಯನ್ಸ್ ಪ್ರೌಢಶಾಲೆ, ಲಯನ್ಸ್ ಕ್ಲಬ್ ಆವರಣ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಿಂಭಾಗ, ಗಂಗಾವತಿ, ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಬುರ್ಗಾ, ಕೊಪ್ಪಳ ಗವಿಸಿದ್ದೇಶ್ವರ ಪ್ರೌಢಶಾಲೆ, ಕೊಪ್ಪಳ, ಸಿರಗುಪ್ಪ ವಿವೇಕಾನಂದ ಪಬ್ಲಿಕ್ ಸ್ಕೂಲ್, ಬಳ್ಳಾರಿ ರಸ್ತೆ, ಸಿರಗುಪ್ಪ ಇಲ್ಲಿ ಮಸ್ಟರಿಂಗ್ ಹಾಗೂ ಡಿ.ಮಸ್ಟಿರಿಂಗ್ ನಡೆಯಲಿದೆ.
ಮತಗಟ್ಟೆ ಸಿಬ್ಬಂದಿಗಳ ವಿವರ;
ಏಪ್ರಿಲ್ 23 ರಂದು ಕ್ಷೇತ್ರದ 2033 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಕರ್ತವ್ಯಕ್ಕಾಗಿ ನೇಮಕವಾಗಿರುವ ಸಿಬ್ಬಂದಿಗಳಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ 269 ಮತಗಟ್ಟೆಗಳಿಗೆ 336 ಪಿಆರ್‍ಓ, 336 ಎಪಿಆರ್‍ಓ, 672 ಮತಗಟ್ಟೆ ಸಿಬ್ಬಂದಿ ಸೇರಿ 1344 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮಸ್ಕಿ ಕ್ಷೇತ್ರದ 231 ಮತಗಟ್ಟೆಗಳಿಗೆ 290 ಪಿಆರ್‍ಓ, 290 ಎಪಿಆರ್‍ಓ, 580 ಮತಗಟ್ಟೆ ಸಿಬ್ಬಂದಿ ಸೇರಿ 1160 ಸಿಬ್ಬಂದಿಗಳು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ 272 ಮತಗಟ್ಟೆಗಳಿಗೆ 327 ಪಿಆರ್‍ಓ, 327 ಎಪಿಆರ್‍ಓ, 654 ಮತಗಟ್ಟೆ ಸಿಬ್ಬಂದಿ ಸೇರಿ 1308 ಸಿಬ್ಬಂದಿಗಳು. ಕನಕಗಿರಿ ಕ್ಷೇತ್ರದ 261 ಮತಗಟ್ಟೆಗಳಿಗೆ 314 ಪಿಆರ್‍ಓ, 314 ಎಪಿಆರ್‍ಓ, 628 ಮತಗಟ್ಟೆ ಸಿಬ್ಬಂದಿ ಸೇರಿ 1256 ಸಿಬ್ಬಂದಿಗಳು. ಗಂಗಾವತಿ ಕ್ಷೇತ್ರದ 233 ಮತಗಟ್ಟೆಗಳಿಗೆ 280 ಪಿಆರ್‍ಓ, 280 ಎಪಿಆರ್‍ಓ, 560 ಮತಗಟ್ಟೆ ಸಿಬ್ಬಂದಿ ಸೇರಿ 1120 ಸಿಬ್ಬಂದಿಗಳು. ಯಲಬುರ್ಗಾ ಕ್ಷೇತ್ರದ 253 ಮತಗಟ್ಟೆಗಳಿಗೆ 304 ಪಿಆರ್‍ಓ, 304 ಎಪಿಆರ್‍ಓ, 608 ಮತಗಟ್ಟೆ ಸಿಬ್ಬಂದಿ ಸೇರಿ 1216 ಸಿಬ್ಬಂದಿಗಳು. ಕೊಪ್ಪಳ ಕ್ಷೇತ್ರದ 288 ಮತಗಟ್ಟೆಗಳಿಗೆ 346 ಪಿಆರ್‍ಓ, 346 ಎಪಿಆರ್‍ಓ, 692 ಮತಗಟ್ಟೆ ಸಿಬ್ಬಂದಿ ಸೇರಿ 1384 ಸಿಬ್ಬಂದಿಗಳು.
ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಕ್ಷೇತ್ರದ 226 ಮತಗಟ್ಟೆಗಳಿಗೆ 253 ಪಿಆರ್‍ಓ, 249 ಎಪಿಆರ್‍ಓ, 527 ಮತಗಟ್ಟೆ ಸಿಬ್ಬಂದಿ ಸೇರಿ 1029 ಸಿಬ್ಬಂದಿಗಳು. ಕೊಪ್ಪಳ ಲೋಕಸಭಾ ಕ್ಷೇತ್ರದ ಒಟ್ಟು 2033 ಮತಗಟ್ಟೆಗಳಿಗೆ 2450 ಪಿಆರ್‍ಓ, 2446 ಎಪಿಆರ್‍ಓ, 4921 ಮತಗಟ್ಟೆ ಸಿಬ್ಬಂದಿ ಸೇರಿ 9817 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಸಿಬ್ಬಂದಿಗಳಿಗೆ ಪ್ರತಿ ಮತಗಟ್ಟೆಯಲ್ಲಿಯು ಹೆಲ್ತ್ ಕಿಟ್ ಮತ್ತು ತುರ್ತು ಚಿಕಿತ್ಸಾ ಪೆಟ್ಟಿಗೆಯನ್ನು ಕಲ್ಪಿಸಿಕೊಡಲಾಗಿದೆ.
ವಾಹನಗಳ ಬಳಕೆ;
ಮತದಾನದಕ್ಕೆ ಕರ್ತವ್ಯಕ್ಕಾಗಿ ಎಂಟು ಕ್ಷೇತ್ರಗಳಿಂದ 435 ವಿವಿಧ ಮಾರ್ಗಗಳಲ್ಲಿ 215 ಕ್ರೂಸರ್, 256 ಕೆ.ಎಸ್.ಆರ್.ಟಿ.ಸಿ.ಬಸ್, 28 ಮ್ಯಾಕ್ಸಿ ಕ್ಯಾಬ್ ಹಾಗೂ 47 ಇತರೆ ವಾಹನಗಳು ಸೇರಿ 546 ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾನಕ್ಕೆ 2479 ಬ್ಯಾಲೇಟ್ ಯುನಿಟ್, 2526 ಕಂಟ್ರೋಲ್ ಯುನಿಟ್ ಹಾಗೂ 2920 ವಿವಿ ಪ್ಯಾಟ್ ಲಭ್ಯ ಇವೆ.
ಪಟ್ಟಿಯಲ್ಲಿ ಮತದಾರರ ಹೆಸರು ಹುಡುಕಲು;
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ನಿಮ್ಮಲ್ಲಿರುವ ಮೊಬೈಲ್‍ನಿಂದ ಮೆಸೇಜ್‍ಗೆ ಹೋಗಿ ಇಲ್ಲಿ KAEPICID Card No ಸಂಖ್ಯೆಯನ್ನು ಟೈಪ್ ಮಾಡಿ 9731979899 ಸಂಖ್ಯೆಗೆ ಎಸ್.ಎಂ.ಎಸ್. ಮಾಡಿದ ಕ್ಷಣಾರ್ಧದಲ್ಲಿ ನೀವು ಮತದಾರರಾಗಿರುವ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಹೆಸರು, ಭಾಗದ ಸಂಖ್ಯೆ, ಮತದಾನ ಕೇಂದ್ರದ ಹೆಸರು, ಮತದಾರರ ಪಟ್ಟಿಯಲ್ಲಿನ ಕ್ರಮ ಸಂಖ್ಯೆ, ಮತದಾರರ ಹೆಸರು ಸಮೇತ ವಿವರ ನಿಮ್ಮ ಮೊಬೈಲ್‍ಗೆ ಬರಲಿದೆ.
ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಸಂಪರ್ಕ ಕೇಂದ್ರದ ಟೋಲ್‍ಫ್ರೀ 08539-1950 ಸಂಖ್ಯೆಗೆ ಕರೆ ಮಾಡಿ ತಮ್ಮ ಮತದಾರರ ಪಟ್ಟಿಯ ವಿವರವನ್ನು ಪಡೆದುಕೊಳ್ಳಬಹುದು. ಮತ್ತು www.ceo.karnataka.kar.nic.in ವೆಬ್‍ಸೈಟ್‍ಗೆ ಹೋಗಿ ಇದರಲ್ಲಿ ಮೂರು ವಿಧದಲ್ಲಿ ನಿಮ್ಮ ಹೆಸರನ್ನು ಹುಡುಕಬಹುದು. ಮೊದಲನೆಯದು ನಿಮ್ಮ ಎಫಿಕ್ ಸಂಖ್ಯೆಯ ಮೂಲಕ ಹುಡುಕಬಹುದಾಗಿದ್ದು ಮೊದಲು ಇಲ್ಲಿ ಜಿಲ್ಲೆ ಆಯ್ಕೆ ಮಾಡಿ ನಂತರ ಎಫಿಕ್ ಸಂಖ್ಯೆ ಟೈಪ್ ಮಾಡಿ ಸರ್ಚ್‍ಕೊಟ್ಟಲ್ಲಿ ಹೆಸರು ಸಿಗುತ್ತದೆ. ಎರಡನೆಯದು ಇತರೆ ವಿವರಗಳ ಮೂಲಕ ಜಿಲ್ಲೆ ಹೆಸರು, ಮತದಾರರ ಹೆಸರು, ಲಿಂಗ, ಕ್ಷೇತ್ರದ ಹೆಸರು ಆಯ್ಕೆ ಮಾಡುವ ಮೂಲಕ ಹುಡುಕಬಹುದು. ಹಾಗೂ ಮತದಾರರ ಪಟ್ಟಿ ಸೇರ್ಪಡೆ ವೇಳೆ ನಿಮ್ಮ ಮೊಬೈಲ್ ಸಂಖ್ಯೆ ನೀಡಿದ್ದಲ್ಲಿ ಜಿಲ್ಲೆ ಆಯ್ಕೆ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಟೈಪ್ ಮಾಡಿ ಹುಡುಕಿದರೂ ನಿಮ್ಮ ಹೆಸರು ಸಿಗಲಿದೆ.
ಮತ್ತು ಈಗಾಗಲೇ ವೋಟರ್ ಗೈಡ್ ಮೂಲಕ ಮತದಾರರಿಗೆ ಮತದಾನದ ಮಾಹಿತಿಯನ್ನು ತಲುಪಿಸಿದ್ದು ಬಿ.ಎಲ್.ಓ.ಗಳ ಮೂಲಕ ಪ್ರತಿ ಮನೆಗೂ ಭಾವಚಿತ್ರವಿರುವ ವೋಟರ್ ಸ್ಲಿಪ್‍ನ್ನು ವಿತರಣೆ ಮಾಡಲಾಗಿದೆ. ಇದರಲ್ಲಿ ಹೆಸರು, ಮತದಾನ ಕೇಂದ್ರದ ವಿವರ, ಕ್ರಮ ಸಂಖ್ಯೆ ಇರುತ್ತದೆ. ಆದರೆ ಇದನ್ನು ಗುರುತಿನ ಚೀಟಿಯನ್ನಾಗಿ ಪರಿಗಣಿಸಲಾಗುವುದಿಲ್ಲ. ಇತರೆ 11 ದಾಖಲೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಈ ಎಲ್ಲಾ ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿಗಳಿಂದ ಎಲ್ಲಾ ವಿದ್ಯುನ್ಮಾನ ಮತಯಂತ್ರಗಳನ್ನು ಹಾಗೂ ಇತರೆ ದಾಖಲೆಗಳನ್ನು ಸ್ವೀಕರಿಸಿ, ಈ ಮತಯಂತ್ರಗಳನ್ನು ಹಾಗೂ ದಾಖಲೆಗಳನ್ನು ಮತ ಎಣಿಕಾ ಕೇಂದ್ರವಾದ `ಶ್ರೀ ಗವಿಸಿದ್ಧೇಶ್ವರ ವಾಣಿಜ್ಯ, ಕಲಾ, ವಿಜ್ಞಾನ ಮಹಾವಿದ್ಯಾಲಯದಲ್ಲಿ ನಿರ್ಮಿಸಲಾಗಿರುವ ಭದ್ರತಾ ಕೊಠಡಿಗಳಲ್ಲಿ ಸಂಗ್ರಹಿಸಿಡಲಾಗುವುದು. ಮತ ಎಣಿಕೆಯು ಮೇ 23 ರಂದು ಬೆಳಗ್ಗೆ 8 ರಿಂದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ.

Please follow and like us:
error