ಲಾರಿ- ಬಸ್ ಡಿಕ್ಕಿ, ಚಾಲಕ ಸಾವು : ಹೊತ್ತಿ ಉರಿದ ಬಸ್

ಚಿತ್ರದುರ್ಗ:  ಲಾರಿ ಮತ್ತು  ಖಾಸಗಿ ಬಸ್ ನಡುವೆ ಡಿಕ್ಕಿಯಿಂದ ಬೆಂಕಿ ಹೊತ್ತಿ  ಬಸ್‌ ಸುಟ್ಟುಹೋಗಿದೆ. ಅಪಘಾತದಿಂದ ಲಾರಿ ಚಾಲಕ ಸಾವನ್ನಪ್ಪಿದರೆ 10ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕಪಿಲೆಹಟ್ಟಿ ಬಳಿ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದ ಬಸ್ ಗೆ  ಲಾರಿ ಡಿಕ್ಕಿ ಹೊಡೆದಿದೆ. ತಡರಾತ್ರಿ ಅಪಘಾತ ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.ಡಿಕ್ಕಿ ಬಳಿಕ  ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಾರಿ ಚಾಲಕ ವೆಂಕಟೇಶ್ (35) ಸಾವನ್ನಪ್ಪಿದ್ದಾನೆ.ಗಾಯಾಳುಗಳು ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Please follow and like us:
error