ಲಾರಿಗೆ ಕಾರು ಡಿಕ್ಕಿ ಏಳು ಜನ ಸ್ಥಳದಲ್ಲೆ ಸಾವು

ಕನ್ನಡನೆಟ್ ಆಳಂದ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಏಳು ಜನ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕಲಬುರಗಿ ಹೊರವಲಯದ ಆಳಂದ ರಸ್ತೆಯ ಸಾವಳಗಿ ಬಳಿ ನಡೆದಿದೆ.ಓರ್ವ ಗರ್ಭಿಣಿ ಸೇರಿ ನಾಲ್ವರು ಮಹಿಳೆಯರು , ಮೂರು ಜನ ಪುರಷರ ಸಾವನ್ನಪ್ಪಿದ್ದಾರೆ

ಗರ್ಭಿಣಿ ಮಹಿಳೆಯನ್ನ ಡೆಲೇವರಿ ಸಲುವಾಗಿ ಕಲಬುರಗಿಗೆ ಕರೆದುಕೊಂಡು ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ‌. ಮೃತರು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲುಕಿನ ನಿವಾಸಿಗಳು. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Please follow and like us:
error