ಲಾಕ್ ಡೌನ್ ಜಿಲ್ಲೆಗಳಲ್ಲಿ ಮದ್ಯ ‌ಮಾರಾಟ ಇರಲ್ಲ- ಅಬಕಾರಿ ಸಚಿವ ನಾಗೇಶ್ !

ಕೋಲಾರ : ಲಾಕ್ ಡೌನ್ ಜಿಲ್ಲೆಗಳಲ್ಲಿ ಮದ್ಯ ‌ಮಾರಾಟ ಇರಲ್ಲ,ನಾಳೆ ಸಂಜೆ ನಂತರ ಲಾಕ್ ಡೌನ್ ಪ್ರದೇಶಗಳಲ್ಲಿ ‌ಮಧ್ಯದಂಗಡಿ ಬಂದ್ ಮಾಡಲು ಸೂಚನೆ ನೀಡಿರುವುದಾಗಿ ಕೋಲಾರದಲ್ಲಿ ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ

ಲಾಕ್ ಡೌನ್ ಕುರಿತು ಸಿಎಂ‌‌ ಬಿ.ಎಸ್.ಯಡಿಯೂರಪ್ಪ ನವರ ಜೊತೆ ವಿಡಿಯೋ ಕಾನ್ಪಿರೆನ್ಸ್ ಬಳಿಕ ಹೇಳಿಕೆ ನೀಡಿದ್ದಾರೆ.ಆರ್.ಎಲ್.ಜಾಲಪ್ಪ ಆಸ್ಪತ್ರೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ,ಅವರಿಗೆ ವ್ಯವಸ್ಥೆ ಸರಿಮಾಡಿಕೊಳ್ಳಲು ನೋಟಿಸ್ ಕೊಟ್ಟು ಸೂಚನೆ. ಬೇರೆ ಜಿಲ್ಲೆಗೆ ಹೋಲಿಕೆ ಮಾಡಿದ್ರೆ ನಮ್ಮಲ್ಲಿ ಅಷ್ಟೊಂದು ಸಮಸ್ಯೆ ಇಲ್ಲ, ಹಾಗಾಗಿ ಕೋಲಾರದಲ್ಲಿ ಲಾಕ್ ಡೌನ್ ಮಾಡಲ್ಲ, ಲಾಕ್ ಡೌನ್ ಮಾಡೋದು ಬೇಡ ಎಂದು ಸಿಎಂಗೆ ಮನವಿ ಮಾಡಿರುವುದಾಗಿ ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ

Please follow and like us:
error