ಲಸಿಕೆ ಪಡೆಯಲು ಹಿಂದೇಟು: ಸ್ವತಃ ವೈದ್ಯಾಧಿಕಾರಿಯೇ ವ್ಯಾಕ್ಸಿನ್ ಪಡೆದು ಜಾಗೃತಿ

ಗಂಗಾವತಿ : ಕೊರೊನಾ ನಿಯಂತ್ರಣಕ್ಕೆಂದು ಕೇಂದ್ರ ಸರ್ಕಾರ ಕಳುಹಿಸಿಕೊಟ್ಟಿರುವ ಕೋವಿಶೀಲ್ಡ್ ಲಸಿಕೆಯ ಬಗ್ಗೆ ಜನರಲ್ಲಿ ಭೀತಿಯಿರುವ ಹಿನ್ನೆಲೆ, ಸ್ವತಃ ವೈದ್ಯಾಧಿಕಾರಿಗಳೇ ಸಾರ್ವಜನಿಕರ ಮುಂದೆ ಲಸಿಕೆ ಪಡೆದು ಜಾಗೃತಿ ಮೂಡಿಸಿದರು.
ಜಿಲ್ಲೆಯ ಗಂಗಾವತಿ ನಗರದ ಆನೆಗೊಂದಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಲಸಿಕೆ ಕಾರ್ಯಕ್ರಮಕ್ಕೆ ಮೊದಲೇ ಹೆಸರು ನೊಂದಾಯಿಸಿದ್ದ ಕೆಲವರು ಲಸಿಕೆ ಪಡೆಯಲು ಹಿಂದೇಟು ಹಾಕಿದರು. ಸ್ವತಃ ವೈದ್ಯಾಧಿಕಾರಿಯಾದ ಡಾ. ಈಶ್ವರ ಸವಡಿ ಸೇರಿದಂತೆ ವೈದ್ಯಾಧಿಕಾರಿಗಳು ವ್ಯಾಕ್ಸಿನ್ ಪಡೆದು ಜಾಗೃತಿ
ಈವೇಳೆ ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಮಹೇಶ್ ಹಾಗೂ ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಸವುಡಿ ಸ್ವತಃ ತಾವೇ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ಈ ವೇಳೆ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯವತಿ ಬೋಲಾ ಇದ್ದರು.

Please follow and like us:
error