ಲಕ್ಷ ವೃಕ್ಷೋತ್ಸವದ ಅಡಿಯಲ್ಲಿ ಕೊಪ್ಪಳ ತಾಲೂಕಾ ಪ್ರಾಥಮಿಕ ಮತ್ತು ಪ್ರೌಡಶಾಲೆಗಳಿಗೆ ಸಸಿಗಳ ವಿತರಣೆ


ಕೊಪ್ಪಳ: ನಗರದ ಶ್ರೀಗವಿಮಠದ ವತಿಯಿಂದ ವೃಕ್ಷ ಸಂಕಲ್ಪ ಅಭಿಯಾನದ “ಲಕ್ಷ ವೃಕ್ಷೆÆÃತ್ಸª” Àದ ಅಂಗವಾಗಿ ಇಂದು ಸರಕಾರಿ, ಖಾಸಗಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಡಶಾಲೆಗಳಿಗೆ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಜರುಗಿತು . ಶ್ರೀಗವಿಮಠದ ಆವರಣದಲ್ಲಿರುವ ಹರ್ಬಲ್ ಗಾರ್ಡನ್‌ನಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಯಾ ಶಾಲೆಗಳ ಪ್ರತಿನಿಧಿಗಳಿಗೆ ಸಸಿಗಳನ್ನು ವಿತರಿಸಿದರು.
ಕೊಪ್ಪಳ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಅಳವಂಡಿ, ಬೆಟಗೆರಿ, ಕವಲೂರು, ಹಿರೇಸಿಂಧೋಗಿ, ಕೋಳೂರು, ಹಲಗೇರಿ, ಬಹದ್ದುರ ಬಂಡಿ, ಕುಣಿಕೇರಿ, ಕೊಪ್ಪಳ ಪೂರ್ವ, ಕೊಪ್ಪಳ ಪಶ್ಚಿಮ, ಕೊಪ್ಪಳ ಉತ್ತರ, ಕಿನ್ನಾಳ, ಇರಕಲ್‌ಗಡಾ, ಹಾಸಗಲ್, ಕುಕನಪಳ್ಳಿ, ಬೂದುಗುಂಪಾ, ಗಿಣಗೇರಿ, ಹಿಟ್ನಾಳ್, ಅಗಳಕೇರಿ ಹಾಗೂ ಮುನಿರಾಬಾದ್ ಈ ಎಲ್ಲ ಕ್ಲಸ್ಟರ್ ನ ಶಾಲೆಗಳಿಗೆ ಅಂದಾಜು ೧೨ ಸಾವಿರಕ್ಕಿಂತ ಹೆಚ್ಚೂ ಸಸಿಗಳ ಬೇಡಿಕೆ ಇದ್ದೂ ಅವುಗಳಲ್ಲಿ ಇಂದು ಸುಮಾರು ೪೦ ಶಾಲೆಗಳಿಗೆ ಸಾಂಕೇತಿಕವಾಗಿ ಸಸಿಗಳನ್ನು ಶ್ರೀಗವಿಮಠದಿಂದ ವಿತರಣೆ ಮಾಡಲಾಯಿತು.
ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಉಮಾದೇವಿ ಸೊನ್ನದ ಇವರ ಮಾರ್ಗದರ್ಶನಲ್ಲಿ ಪ್ರಭಾರಿ ಸಮನ್ವಯಾಧಿಕಾರಿಗಳಾದ ಅರವಿಂದ ಕುಮಾರ, ಇ.ಸಿ.ಓಗಳಾದ ಮಹಾಂತೇಶ, ಟಿ.ಪಿ.ಇ.ಒ ಗಳಾದ ಉದಯ ಕುಮಾರ, ಸಿ.ಆರ್.ಪಿ ಗಳಾದ ಸಂಗಪ್ಪ ಚಕ್ರಸಾಲಿ, ಹನುಮಂತಪ್ಪ ಕುರಿ, ಹನುಮಂತಪ್ಪ ಕೆ.ಆರ್, ಹುಲುಗಪ್ಪ ಭಜಂತ್ರಿ, ಬಸವನಗೌಡ ವಣಿಗೇರಿ, ಬಸವರಾಜ ಕರಿಕಟ್ಟಿ, ಯಲ್ಲಪ್ಪ. ಬಿ ಹಾಗೂ ಆಯಾ ಶಾಲೆಗಳ ಶಿಕ್ಷಕ ಪ್ರತಿನಿಧಿಗಳು ಭಾಗವಹಿಸಿ ಸಸಿಗಳನ್ನು ಪಡೆದುಕೊಂಡರು.

Please follow and like us:
error