ಲಂಡನ್ ನಿಂದ ಬೆಳಗಾವಿಗೆ ಬಂದ ಮಹಿಳೆಗೆ ಕರೋನಾ ನೆಗೆಟಿವ್

ಬೆಳಗಾವಿ : ಲಂಡನ್ ನಿಂದ‌ ವಾಪಸ್ ಆಗಿದ್ದ ಮಹಿಳೆಗೆ‌ ಕೊರೊನಾ‌ ನೆಗೆಟಿವ್ ರಿಜಲ್ಟ್ ಬಂದಿದೆ.

ಬೆಳಗಾವಿಯಲ್ಲಿ ‌ತೀವ್ರ ಆತಂಕ‌ ಮೂಡಿಸಿದ್ದ ಪ್ರಕರಣದಲ್ಲಿ 35 ವರ್ಷದ ಮಹಿಳೆಯ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿರುವುದರಿಂದ ಅಧಿಕಾರಿಗಳು ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.

ಡಿಸೆಂಬರ್ 14ರಂದು ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆ ಡಿಸೆಂಬರ್ 15ರಿಂದ‌ 21ರ ವರೆಗೆ ಜಮಖಂಡಿಯಲ್ಲಿ ಇದ್ದರು.ನಂತರ ಬೆಳಗಾವಿಯ ತಾಯಿಯ ಮನೆಗೆ ಬಂದಿದ್ದರು. ರೂಪಾಂತರಿ ಕರೋನಾ ಹಿನ್ನೆಲೆ ಬ್ರಿಟನ್ ನಿಂದ ಬಂದಿದ್ದ ಈ ಮಹಿಳೆಯ ಟ್ರಾವೆಲ್ ಹಿಸ್ಟರಿ ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು. ನಿನ್ನೆ ಬೆಳಗಾವಿಯಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಪತಿ,‌ಇಬ್ಬರು‌ ಮಕ್ಕಳ‌ ಜತೆಗೆ ಲಂಡನ್ ನಲ್ಲಿ ವಾಸವಾಗಿದ್ದ ಮಹಿಳೆ. ಸಂಬಂಧಿಕರ ಮನೆಗೆ ಭೇಟಿ ನೀಡಲು ಲಂಡನ್ ನಿಂದ ಬಂದಿದ್ದರು

Please follow and like us:
error