ರೋಗಿಗಳು ಆಸ್ಪತ್ರೆಗೆ ತಡವಾಗಿ ದಾಖಲಾಗುತ್ತಿರುವುದು ಸಾವಿಗೆ ಕಾರಣ- ವಿಕಾಸ್ ಕಿಶೋರ್ ಸುರಳ್ಕರ್

ಸರಕಾರ ನಿಗದಿಪಡಿಸಿದ ಆಕ್ಸಿಜನ್ ಮಿತಿಯೊಳಗೆ ವ್ಯವಸ್ಥೆ ಮಾಡಲಾಗುವುದು

ಕನ್ನಡನೆಟ್ ನ್ಯೂಸ್ : ಈಗಾಗಲೇ ಕೊಪ್ಪಳದ ಗವಿಮಠದಲ್ಲಿ 100 ಬೆಡ್ ಆಸ್ಪತ್ರೆ ತೆರೆಯಲಾಗಿದೆ. ಗವಿಮಠದಲ್ಲಿ ನೇರವಾಗಿ ಹೋಗಿ ಅಡ್ಮಿಟ್ ಆಗಲು ಅವಕಾಶ ಇಲ್ಲ.ಗವಿಮಠ ಆಸ್ಪತ್ರೆಯನ್ನು ಆಕ್ಸಿಜನ್ ಬೆಡ್ ಮಾಡುತ್ತೇವೆ. ಜಿಲ್ಲಾಸ್ಪತ್ರೆಯಿಂದ ರೆಫರ್ ಆದವರು ಮಾತ್ರ ಗವಿಮಠ ಆಸ್ಪತ್ರೆಗೆ ಹೋಗಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಸುರಳ್ಕರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು

ಐಸಿಎಂಆರ್ ಗೈಡ್ ಲೈನ್ ನಂತೆ ಕೊಪ್ಪಳ ಜಿಲ್ಲೆಯಲ್ಲಿ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್ ಜನರೇಷನ್ ಪ್ಲಾಂಟ್ ಕಾಮಗಾರಿ ನಡೆದಿದೆ, ೩ನೇ ಅಲೆ ಎದುರಿಸುವಲ್ಲಿ ಅದು ಮಹತ್ವದ ಹೆಜ್ಜೆ.ಕಳೆದ ಒಂದು ವಾರದಿಂದ ಮಾರ್ಟಾಲಿಟಿ ೩% ಆಗ್ತಿದೆ. ಇದಕ್ಕೆ ಆರ್ ಎಂಪಿ ವೈದ್ಯರೂ ಹೊಣೆ ಆಗ್ತಿದ್ದಾರೆ.ರೋಗಿಗಳು ಕೂಡಲೇ ಆಸ್ಪತ್ರೆಗೆ ಬರುತ್ತಿಲ್ಲ. ಈ ಕಾರಣಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಟಾರ್ಗೆಟ್ ಟೆಸ್ಟ್‌ ಗಿಂತ ಹೆಚ್ಚು ಪರೀಕ್ಷೆ ಆಗ್ತಿದೆ ಕೊಪ್ಪಳ ಜಿಲ್ಲೆಯಲ್ಲಿ ಈ ವರೆಗೆ ಕೇವಲ ಎರಡು ಗ್ರಾಮದಲ್ಲಿ ಮಾತ್ರ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಉಳಿದಂತೆ ಎಲ್ಲ ಹೆಚ್ಚಿನ ಸಂಖ್ಯೆಯ ಲ್ಲಿ ಒಂದೇ ಗ್ರಾಮದಲ್ಲಿ ಹೆಚ್ಚಿನ ಸೋಂಕಿತರು ಕಂಡು ಬಂದಿಲ್ಲ. ರಾಜ್ಯ ನಿಗದಿಪಡಿಸಿದ ಮಿತಿಯಲ್ಲಿ ಅಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಜನರೂ ಸಹ ಎಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಡಿಎಚ್ಒ ಡಾ.ಲಿಂಗರಾಜ್ ಉಪಸ್ಥಿತರಿದ್ದರು.

Please follow and like us:
error