ರೈಲ್ವೆ ಕೆಳ ಸೇತುವೆ ಶಾಶ್ವತ ಕಾಮಗಾರಿಗೆ ಒತ್ತಾಯಿಸಿ ನಾಗರಿಕ ಸಮಿತಿ ಪ್ರತಿಭಟನೆ

ಕನ್ನಡನೆಟ್ ನ್ಯೂಜ್ : ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಕಿನ್ನಾಳ ರೈಲ್ವೆ ಕೆಳ ಸೇತುವೆ ಶಾಶ್ವತ ಕಾಮಗಾರಿಗೆ ಒತ್ತಾಯಿಸಿ ನಾಗರಿಕ ಸಮಿತಿ ಸದಸ್ಯರು ಇಂದು ಅಶೋಕ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು. ಕಿನ್ನಾಳ ಪ್ರಮುಖ ರಸ್ತೆಗೆ ಹೊಂದಿಕೊಂಡ ಕಾಲೋನಿಗಳು ಮತ್ತು ಯಲಬುರ್ಗಾ ತಾಲೂಕುವರೆಗೆ ಬರುವ ಅನೇಕ ಗ್ರಾಮಗಳು ಇದ್ದು ಇಲ್ಲಿ ವ

ಾಸಿಸುವ ಜನರಿಗೆ ಕೆಳಗೆ ನಮೂದಿಸಿದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿನಂತಿಸಲಾಗಿದೆ . 1 ) ರೈಲ್ವೆ ಕೆಳ ಸೇತುವೆಯಲ್ಲಿ ಚರಂಡಿಯನ್ನು ಮನಃ ನಿರ್ಮಿಸುವುದು , ಏಕೆಂದರೆ ಪ್ರಸ್ತುತ ಚರಂಡಿಯು ದುರಸ್ತಿಯನ್ನು ಕೈಗೊಳ್ಳಲು ಸಾಧ್ಯವಾಗಿರುತ್ತದೆ , ರೈಲ್ವೆ ಸೇತುವೆ ಪಕ್ಕದಲ್ಲಿ ಮೆಳ್ಳಾಗದಲ್ಲಿ ( ಪೂರ್ವ ದಿಕ್ಕು ಗೋಡೆಯಲ್ಲಿ ) ಚರಂಡಿಯ ನೀರು ಸೋರಿಕೆಯಾಗಿ ಸೇತುವೆಯಲ್ಲಿ ಸಂಗ್ರಹವಾಗುತ್ತದೆ . ಅಲ್ಲದೇ ಇದರೊಂದಿಗೆ ಮಳೆಯ ನೀರು ಸಹ ಸಂಗ್ರಹವಾಗಿ ಎಲ್ಲಾ ವಾಹನಗಳಿಗೆ ಹಾಗೂ ಜನರಿಗೆ ಸಂಚರಿಸಲು ತೀವ್ರ ತೊಂದರೆ ಆಗಿದೆ , ಇದು ಆರೋಗ್ಯ ದೃಷ್ಟಿಯಿಂದಲೂ ಮಾರಕವಾಗಿದೆ , ಕಾರ್ರಥಿ ಕೆಳಭಾಗದಲ್ಲಿ ಚರಂಡಿ ಸುನಃ ನಿರ್ಮಾಣ ಅನಿವಾರವಾಗಿರುತ್ತದೆ . 2 ) ರೈಲ್ವೆ ಸೇತುವೆ ಎರಡು ಕೊನೆಗಳಲ್ಲಿ ಹೈಮಾಸ್ ದೀಪಗಳನನ್ನು ಅಳವಡಿಸುವುದು . 3 ) ಕಿನ್ನಾಳ ರೈಲ್ವೆ ಗೇಟ್‌ದಿಂದ ಭಾಗ್ಯನಗರ ಕ್ರಾಸ್‌ವರೆಗೆ ಪ್ರಮುಖ ರಸ್ತೆಯ ಎರಡು ಬದಿಗೆ ಚರಂಡಿಗಳನ್ನು ನಿರ್ಮಿಸುವುದು ಹಾಗೂ ಅದರ ಮೇಲೆ fಿಗಳನ್ನು ಅಳವಡಿಸಿ ಪಾದಚಾರಿಗಳಿಗೆ ಸಂಚರಿಸಲು ರಸ್ತೆ ನಿರ್ಮಿಸುವುದು . 4 ) ಅಶೋಕ ವೃತ್ತದಿಂದ ರೈಲ್ವೆ ಸೇತುವೆ ಕೆಳಭಾಗ ಸೇರಿಕೊಂಡಂತೆ ಹಾದುಹೋಗುವ ಭಾಗ್ಯನಗರ ಕಾಸ್ ವರೆಗೆ ಡಾಂಬರೀಕರಣ ಮಾಡುವುದು , 5 ) ಕಿನ್ನಾಳ ರಸ್ತೆಗೆ ಹೊಂದಿಕೊಂಡ ಎಸ್.ಜಿ.ಓ ಕಾಲೋನಿ ಕ್ರಾಸ್‌ನಲ್ಲಿ ಲಭ್ಯ ಇರುವ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸುವುದು . 6 ) ಭಾಗ್ಯನಗರ ಕ್ರಾಸ್ ದಿಂದ ಕುಷ್ಟಗಿ ಮುಖ್ಯ ರಸ್ತೆವರೆಗೆ ವಿಭಜಕದೊಂದಿಗೆ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಅಲ್ಲಮಪ್ರಭು ಬೆಟ್ಟದೂರ, ವಿ.ಬಿ.ರಡ್ಡೇರ್, ಸಾಲಿಮಠ ನಗರಸಭೆ ಸದಸ್ಯ ಮಹಾಲಕ್ಷ್ಮಿ ಕಂದಾರಿ, , ಯೇಸು, ಶ್ರೀಶೈಲ ಬಡಿಗೇರ,   ಯಮನೂರಸಾಬ ಭೈರಾಪುರ, ಯಶವಂತಕುಮಾರ ಮೇತ್ರಿ, ಶಂಕರಗೌಡ ಮಾಲೀಪಾಟೀಲ್, ವೆಂಕಪ್ಪ ಬಾರಕೇರ, ಅರವಿಂದಗೌಡ ಪೊಲೀಸ್, ಜಿ.ಬಿ.ಪಾಟೀಲ್, ರಂಗಪ್ಪ ಹುಲ್ಲೂರು, ರವಿ ಕರಡಿ, ಮೌನೇಶ್, ರಾಘವೇಂದ್ರ ದೇಶಪಾಂಡೆ ಮತ್ತಿತರರು ಭಾಗವಹಿಸಿದ್ದರು.

Please follow and like us:
error