ರೈತ ಕುಟುಂಬಗಳಿಗೆ ಪರಿಹಾರ ವಿತರಿಸಿದ ಶಾಸಕ ದಡೆಸೂಗೂರ

ಕಾರಟಗಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಚಳ್ಳೂರು ಗ್ರಾಮದಲ್ಲಿ ಹೇಮಂತರಾಜ ಎಂಬ ರೈತ ಸಾಲಭಾದೆಯಿಂದ ಮತ್ತು ಗಂಗಮ್ಮ ಗಂಡ ಅಮರೇಶಪ್ಪ ಮೇಟಿ ಅವರು ಸಾಲಭಾದೆಯಿಂದ ಆತ್ಮ ಹತ್ಯೆಗೆ ಶರಣಾದ ರೈತರ ಕುಟುಂಬಗಳಿಗೆ ಶಾಸಕರಾದ ಬಸವರಾಜ ದಡೇಸೂಗೂರು ಅವರು ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ವತಿಯಿಂದ ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಮತ್ತು ಮನೆಯ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಿದರು.

ಈ ಸಂಧರ್ಭದಲ್ಲಿ ಕೃಷಿ ಅಧಿಕಾರಿಯಾದ ತಿಪ್ಪೆಸ್ವಾಮಿ, ಕಾರಟಗಿ ತಹಶಿಲ್ದಾರರಾದ ಶಿವಶಂಕರಪ್ಪ , ಮೋಹನರಾವ್, ಶ್ರೀ ಶೈಲಗೌಡರು, ಗೋಪಾಲರಾವ್, ಶಿವಕುಮಾರ್, ಪಂಪಣ್ಣ ಮೇಟಿ, ದಸ್ತಗಿರಿ, ಹಾಗೂ ಚಳ್ಳೂರು ಗ್ರಾಮಸ್ಥರು ಉಪಸ್ಥಿತರಿದ್ದರು ಯರಡೋಣ ಗ್ರಾಮದಲ್ಲಿ ಬಸವರಾಜ ತಂದೆ ಬಸವಲಿಂಗಪ್ಪ ಅವರು ಕೃಷಿ ಗದ್ದೆಗೆ ತೆರಳಿದಾಗ ಹಾವು ಕಚ್ಚಿ ಮೃತಪಟ್ಟಿದ್ದರು.. ಶಾಸಕ ಬಸವರಾಜ ದಡೇಸೂಗೂರು ಅವರು ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ವತಿಯಿಂದ ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಮತ್ತು ಮನೆಯ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಿದರು. ಈ ಸಂಧರ್ಭದಲ್ಲಿ ಕೃಷಿ ಅಧಿಕಾರಿಗಳು ಹಾಗೂ ಕಾರಟಗಿ ತಹಶಿಲ್ದಾರರು ಹಾಗೂ ಪ್ರಮುಖರು ಉಪಸ್ಥಿತರಿದ್ದರು…

Please follow and like us:
error