ರಾಜ್ಯ ಬಿಜೆಪಿ ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ- ಯತ್ನಾಳ

ವಿಜಯಪುರ : ರಾಜ್ಯ ಬಿಜೆಪಿ ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಬಸನಗೌಡ ಯತ್ನಾಳ ಕೇಂದ್ರ ಸಚಿವರು ಕೇವಲ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗದೆ ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಲಿ. ಪ್ರಹ್ಲಾದ ಜೋಶಿ, 

ಸದಾನಂದಗೌಡ ತಮ್ಮ ಸಾಮರ್ಥ್ಯ ತೋರಿಸಿ ಪ್ರಧಾನಿಯವರ ಭೇಟಿಗೆ ಅವಕಾಶ ನೀಡಲಿ ಇಂದಿನ ಪರಿಸ್ಥಿತಿಯಲ್ಲಿ ಮೋದಿ ಅವರ ಕಟ್ಟಾ ಅಭಿಮಾನಿಗಳೂ ಕೇಂದ್ರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ ಚಕ್ರವರ್ತಿ ಸೂಲಿಬೆಲೆ ಹೇಳಿರುವುದರಲ್ಲಿ ತಪ್ಪೇನಿಲ್ಲ ನಮ್ಮ 25 ಜನ ಸಂಸದರು ಮೊದಲು ಮತದಾರರಿಗೆ ನಿಷ್ಠರಾಗಿರಲಿ. ಪ್ರಧಾನಿ ನರೇಂದ್ರ ಮೋದಿ ಯಾರನ್ನೂ ಹೆದರಿಸುವವರಲ್ಲ ಅವರೂ ಗುಜರಾತ ಸಿಎಂ ಆಗಿ, ಈಗ ಪ್ರಧಾನಿಯಾಗಿದ್ದಾರೆ ಮಂತ್ರಿಗಿರಿಗಾಗಿ , ಮುಂದಿನ ಬಾರಿ ಟಿಕೆಟ್ ಗಾಗಿ ಸಂಸದರು ಮೌನ ವಹಿಸುವುದು ಸರಿಯಲ್ಲ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿಯಲ್ಲಿ ಸದಾನಂದಗೌಡ ಬೆಂಗಳೂರಿನಲ್ಲಿ ಕುಳಿತಿದ್ದೀರಿ ದೆಹಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ ಸಂಸದರು ತಮ್ಮ ತಾಕತ್ತು ಪ್ರದರ್ಶಿಸಲಿ ಕೇಂದ್ರದಿಂದ ರೂ. 10000 ಕೋ. ಪರಿಹಾರ ತರಲಿ ಕೇರಳ, ಆಂಧ್ರ ಪ್ರದೇಶದಲ್ಲಿ ಉಸ್ತುವಾರಿ ವಹಿಸಿಕೊಂಡು ಇವರು ಎಷ್ಟು ಬಿಜೆಪಿ ಸ್ಥಾನಗಳಿಸಿದ್ದಾರೆ? ಎಂದು ಬಿಜೆಪಿ ರಾಜ್ಯಾಧ್ಯಜ್ಷ ನಳೀನಕುಮಾರ ಕಟೀಲ ಹೆಸರು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಅನಂತಕುಮಾರ, ಯಡಿಯೂರಪ್ಪ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ ಅನಂತಕುಮಾರ ಬದುಕಿದ್ದರೆ ಇಂದು ರಾಜ್ಯದಲ್ಲಿ ಬಿಜೆಪಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅನಂತಕುಮಾರ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಸೇತುವೆಯಾಗಿದ್ದರು

ಆದರೆ, ಹಾಲಿ ಬಿಜೆಪಿ ಸಂಸದರು ತಗ್ಗುಗಳಾಗಿದ್ದಾರೆ ರಾಜ್ಯ ಬಿಜೆಪಿ ಸಂಸದರಿಗೆ ಪ್ರಧಾನಿ ಭೇಟಿಗೆ ಸಮಯ ಕೇಳುವ ತಾಕತ್ತಿಲ್ಲ ಇನ್ನು ನಮ್ಮನ್ನೇನು ಕರೆದುಕೊಂಡು ಹೋಗಿ ಪ್ರಧಾನಿ ಭೇಟಿ ಮಾಡಿಸುತ್ತಾರೆ?  ಎಂದು ಯತ್ನಾಳ ಆಕ್ರೋಶ. ಸಂಸದರಿಗೆ ಸೀರೆ ಕುಂಕುಮ ಬಳೆ ಕಳೆಸುವುದಾಗಿ ಹೇಳಿದ್ದ ಶಿವರಾಜ ತಂಗಡಗಿ ಹೇಳಿಕೆ ಸರಿಯಲ್ಲ ಕೇಂದ್ರದ ವಿರುದ್ಧ ರಾಜ್ಯದ ಜನರ ಆಕ್ರೋಶದ ಬಗ್ಗೆ ಕೇಂದ್ರ ಇಂಟಲಿಜೆನ್ಸ್ ಪ್ರಧಾನಿಗೆ ಮಾಹಿತಿ ನೀಡಬೇಕು ಎಂದು ವಿಜಯಪುರದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದರು.

Please follow and like us:
error