ರಾಜ್ಯಾದ್ಯಂತ ಸಂಭ್ರಮದ ಕ್ರಿಸ್ಮಸ್ ಆಚರಣೆ

Koppal ವಿಶ್ವದಾದ್ಯಂತ  ಕ್ರಿಸ್‌ಮಸ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಇತ್ತ ಕೊಪ್ಪಳದಲ್ಲಿಯೂ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಹಬ್ಬವನ್ನು ಆಚರಣೆ 
ಮಾಡಲಾಗುತ್ತಿದೆ.  ನಗರದ ಕುಷ್ಟಗಿ ರಸ್ತೆಯ ಎಸ್ ಎಫ್ ಎಸ್ ಚರ್ಚ್ ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಆಚರಣೆ ಮಾಡಲಾಯಿತು. ಕ್ರಿಸ್‌ಮಸ್ ಹಬ್ಬದ ಹಿನ್ನಲೆಯಲ್ಲಿ ಎಸ್ ಎಫ್ ಎಸ್ ಚರ್ಚನಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಏಸುವಿನ ಕುರಿತು ಹಾಡುಗಳನ್ನು ಹಾಡಲಾಯಿತು.ಇನ್ನು ವಿಶೇಷ ಪ್ರಾರ್ಥನೆಯಲ್ಲಿ  ನೂರಾರು ಕ್ರೈಸ್ತ ಬಾಂಧವರು ಪಾಲ್ಗೊಂಡಿದ್ದರು. ನಗರಸಭೆ ಹಿಂಭಾಗದ ಇಸಿಐ ಚರ್ಚಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಯೇಸು ಕ್ರೈಸ್ತರ ಗುಣಗಾನ ಮಾಡಿ ಸಮಸ್ತರಿಗೆ ಕ್ರಿಸ್ಮಸ್ ಹಬ್ಬದ ಶುಭಾಷಯಗಳನ್ನು ಕೋರಿದರು.

Please follow and like us:
error