ರಾಜ್ಯದ ಹಲವಾರು ಕಡೆ ಇಂದು ಬೀಕರ ಅಪಘಾತಗಳು

ಇಂದು ರಾಜ್ಯದ ವಿವಿದೆಡೆ ಸಂಭವಿಸಿದ ಬೀಕರ ಅಪಘಾತಗಳಲ್ಲಿ ಹತ್ತಾರು ಜನ ಸಾವನ್ನಪ್ಪಿದ್ದಾರೆ.

ಭಾಗಲಕೋಟೆ ;: ಟಂಟಂ ಮತ್ತು ಶಿಫ್ಟ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿ ಇಬ್ಬರು ದುರ್ಮರಣಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ಬೈಪಾಸ್ ಬಳಿ ನಡೆದಿದೆ. ಬೈಪಾಸ್ ಬಳಿ ವೇಗವಾಗಿ ಚಲುಸುತ್ತಿದ್ದಾಗ ಎದುರಿಗೆ ಬಂದ ಟಂಟಂಗೆ ಶಿಫ್ಟ್ ಕಾರ್ ಡಿಕ್ಕಿ ಹೊಡೆದಿದೆ. ಈ ವೇಳೆ ಟಂಟಂ ನಲ್ಲಿದ್ದ ಇಬ್ಬರು ದುರ್ಮಣಕ್ಕೀಡಾಗಿದ್ದಾರೆ. ಮೃತರು ಬಾದಾಮಿ ತಾಲೂಕಿನ ಖ್ಯಾಡ ಗ್ರಾಮದವರಾಗಿದ್ದು ಟಂಟಂ ಚಾಲಕ ೩೫ ವರ್ಷದ ಗಂಗಯ್ಯ ಬಿಕ್ಷಾವತಿಮಠ, ಮತ್ತು ೧೩ ವರ್ಷದ ರಮೇಶ ಸಂಕಿಣ್ಣವರ್ ಅಂತ ಗುರ್ತಿಸಲಾಗಿದೆ. ಟಂಟಂನಲ್ಲದ್ದ ಇಬ್ಬರು ಮೃತರು ಕೆರೂರ್ ಸಂತೆಗೆ ತೆರಳುತ್ತಿದ್ದರು ಅಂತ ತಿಂಳಿದುಬಂದಿದೆ. ಇನ್ನು ಶಿಫ್ಟ್ ಕಾರ್ ಚಾಲಕ ಕಾರು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

ಬಳ್ಳಾರಿ : ಹೊಸಪೇಟೆ. ಬಳ್ಳಾರಿಯ ಪಾಪಿನಾಯಕಮಹಳ್ಳಿಯ ಬಳಿ ಬೀಕರ ರಸ್ತೆ ಅಪಘಾತ.ಒಮಿನಿ ಕಾರಿನಲ್ಲಿದ್ದ ಒಂದೇ ಕುಟುಂಭದ ನಾಲ್ವರು ದುರ್ಮರಣ.

ಲಾರಿ ಮತ್ತು ಒಮಿನಿ ಕಾರಿನ ಮದ್ಯ ಸಂಭವಿಸಿರುವ ಅಪಘಾತ. ಚಿತ್ರದುರ್ಗದ ಹಿರಿಯೂರಿನ ಸರಸ್ವತಿ೫೫ವರ್ಷ.ವೆಂಕಟಮ್ಮ.೫೭.ಎ.ನಳಿನಿ೩೩ವರ್ಷ.ಶ್ರೀನಿವಾಸ್ ರಾವ್ ೪೫.ವರ್ಷ. ಸಾವಿಗೀಡಾದ ದುರ್ದೈವಿಗಳು. ಏಳು ಜನ ಗಾಯಾಳು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು.ಗಾಯಾಳುಗಳಲ್ಲಿ ಇಬ್ಬರು ಮಕ್ಕಳ ಸ್ಥಿತಿ ಗಂಬೀರ.

ತುಮಕೂರು :
ಹೇಮಾವತಿ ಕಾಲುವೆಗೆ ಕಾರು ಬಿದ್ದು ಸ್ಥಳದಲ್ಲೇ ಮಗು ಸಾವು..ಇಬ್ಬರ ಸ್ಥಿತಿ ಗಂಭೀರ..ಮೂವರಿಗೆ ಸಣ್ಣ ಪುಟ್ಟ ಗಾಯ..ಗಂಭೀರ ಗಾಯಾಳು ಜಿಲ್ಲಾಸ್ಪತ್ರೆಗೆ ರವಾನೆ..ಮೂವರಿಗೆ ಗುಬ್ಬಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ.ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಾಳೆನಹಳ್ಳಿ ಬಳಿ ಘಟನೆ..ರಸ್ತೆ ಬದಿಯಿರುವ ಹೇಮಾವತಿ ಕಾಲುವೆಗೆ ಬಿದ್ದ ಸ್ವಿಪ್ಟ್ ಕಾರು.ಒಂದು ವರ್ಷದ ಗಂಡು ಮಗು ಸ್ಥಳದಲ್ಲಿ ಸಾವು..

ವಿಜಯಪುರ: ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ, ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೆ ಸಾವು, ಐವರಿಗೆ ಗಾಯ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ದೇಗಿನಾಳ ಕ್ರಾಸ್ ಬಳಿ ಘಟನೆ.

ಸೊಲಾಪುರದಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದವೇಳೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಅಪಘಾತ. ಗಾಯಾಳು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲು.

ಚಿತ್ರದುರ್ಗ :ಚಾಲಕನ ಅಜಾಗರೂಕತೆಯ ಪರಿಣಾಮವಾಗಿ ಟಾಟಾ ಮ್ಯಾಜಿಕ್ ವಾಹನ ಪಲ್ಟಿಯಾಗಿ ೧೦ ಜನ್ರು ಗಂಭೀರವಾಗಿ ಗಾಯಗೊಂಡು ಒರ್ವ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಕ್ಯಾದಿಗೆರೆ ಗ್ರಾಮದ ಬಳಿ ನಡೆದಿದೆ.
ಟಾಟಾ ಮ್ಯಾಜಿಕ್ ನಲ್ಲಿ ಚಿತ್ರದುರ್ಗದಿಂದ ಪ್ರಯಾಣ ಮಾಡುತ್ತಿರುವ ವರೆಲ್ಲರೂ ಪಾಲವ್ವನಹಳ್ಳಿ ಗ್ರಾಮದವರೆಂದು ಗುರತಿಸಲಾಗಿದೆ. ೧೦ ಜನ್ರು ಗಂಭೀರವಾಗಿ ಗಾಯಗೊಂಡಿದ್ದು, ತಿಪ್ಪೇಸ್ವಾಮಿ ಎಂಬ ೫೫ ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ. ಪಾಲವ್ವನಹಳ್ಳಿಯಿಂದ ಚಿತ್ರದುರ್ಗಕ್ಕೆ ವ್ಯಾಪಾರ ಕ್ಕೆ ಇವರೆಲ್ಲ ರೂ ಬಂದಿದ್ದರು. ವ್ಯಾಪಾರ ಮುಗಿಸಿ ಹಳ್ಳಿಗೆ ವಾಪಾಸ್ಸಾಗುತ್ತಿದ್ದ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೪ ರ ಬಳಿ ಬರುವ ಕ್ಯಾದಿಗೆರೆ ಬಳಿ ಟಾಟಾ ಮ್ಯಾಜಿಕ್ ಚಾಲನ ನಿಯಂತ್ರಣ ತಪ್ಪಿದೆ. ಇದಕ್ಕೆ ಚಾಲಕನ ಅಜಾಗರೂಕತೆಯೆ ಕಾರಣ ಎನ್ನಲಾಗಿದೆ. ಪೋಲಿಸ್ರೆ ಖಾಸಗಿ ವಾಹನದಲ್ಲಿ ತಂದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ರು. ಆಸ್ಪತ್ರೆಗೆ ಕರೆ ತರಲು ಕೂಡ ೧೦೮ ವಾಹನ ಸಿಕ್ಕಿಲ್ಲ.
ಟಾಟಾ ಮ್ಯಾಜಿಕ್ ನಲ್ಲಿ ೧೦ ರಿಂದ ೧೩ ಜನರನ್ನು ಕುರಿಗಳ ರೀತಿಯಲ್ಲಿ ತುಂಬಲಾಗುತ್ತದೆ ಎಂದು ಗ್ರಾಮಸ್ಥರು ಅರೋಪಿಸಿದ್ದಾರೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Please follow and like us:
error