ರಾಜ್ಯದ ಐದು ಕಡೆ ಕೋವಿಡ್ ಡ್ರೈ ರನ್

ಬೆಂಗಳೂರು : ಕೇಂದ್ರ ಸರಕಾರದ ಮಾರ್ಗದರ್ಶನದಂತೆ ರಾಜ್ಯದ ಐದು ಕಡೆಗಳಲ್ಲಿ ಕೋವಿಡ್ ಡ್ರೈ ರನ್ ಆರಂಭಿಸುವಂತೆ ಸೂಚನೆ ನೀಡಿದೆ.ಬೆಳಗಾವಿ, ಕಲಬುರ್ಗಿ, ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗವನ್ನ ಡ್ರೈ‌ರನ್ ಗಾಗಿ ಗುರುತಿಸಲಾಗಿದೆ.

ಶಿವಮೊಗ್ಗದಲ್ಲಿ ಡ್ರೈರನ್ ಆರಂಭಿಸಲಾಗುತ್ತಿದ್ದು ಜಿಲ್ಲೆಯಲ್ಲಿ ಮೂರು ಕಡೆ ಡ್ರೈ ರನ್ ಕೇಂದ್ರ ಗುರುತಿಸಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ, ಶಿಕಾರಿಪುರದ ತಾಲೊಕು ಆಸ್ಪತ್ರೆ ಹಾಗೂ ಭದ್ರಾವತಿ ತಾಲೂಕಿನ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ ರನ್ ನಡೆಸಲಾಗುತ್ತದೆ.ಡ್ರೈ ರನ್ ನಲ್ಲಿ ಪ್ರತಿಯೊಂದು ಕೇಂದ್ರದಲ್ಲಿ 25 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ.

ಇವರೆಲ್ಲರೂ ಆರೋಗ್ಯ ಇಲಾಖೆಯ ಸಿಬ್ಬಂದಿ. ಡ್ರೈ ರನ್ ಅಂದ್ರೆ ಕೋವಿಡ್ ವ್ಯಾಕ್ಸಿನೇಷನ್ ಬಂದ ನಂತರ ಲಸಿಕೆ ಹಾಕಲು ಜಿಲ್ಲೆಯಲ್ಲಿ 21 ಸಾವಿರ ಮಂದಿಯನ್ನು ಗುರುತಿಸಲಾಗಿದೆ. ವ್ಯಾಕ್ಸಿನ್ ಕೊಟ್ಟ ನಂತರ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಬೇಕು.ಇದಕ್ಕಾಗಿ ಮೂರು ರೂಂಗಳನ್ನ ರಚಿಸಲಾಗಿದೆ. ಮೊದಲನೇ ರೂಂ ನಲ್ಲಿ ವೇಯಿಟಿಂಗ್ ರೂಂ, ಎರಡನೇ ರೂಂ ನಲ್ಲಿ ಇಂಜೆಕ್ಷನ್ ರೂಂ,ಮೂರನೇ ರೂಂ ನಲ್ಲಿ ಅಬ್ಸರವೇಷನ್ ರೂಂ ಇರುತ್ತೆ.ಇಲ್ಲಿದ್ದ ಫಲಾನುಭವಿಗಳು ಅರ್ಧ ಗಂಟೆಯವರೆಗೆ ರೂಂ ನಿಂದ ಹೊರಗೆ ಹೋಗಬಾರದು. ಏನಾದರೂ ಅಡ್ಡ ಪರಿಣಾಮ ಆದರೆ ಸರಿಪಡಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.ಲಸಿಕೆ ಬಂದ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲು ಡ್ರೈ ರನ್ ನಡೆಸಲಾಗುತ್ತಿದೆ . ಇಡೀ ರಾಜ್ಯದ ಜನತೆ ಇದರತ್ತ ಗಮನ ನೀಡಿದೆ.

Please follow and like us:
error