ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ ೬ ಜನ ಸಾವು

ಚಿಕ್ಕಬಳ್ಳಾಪೂರ :ಚಿಕ್ಕಬಳ್ಳಾಪುರ ತಾಲ್ಲೂಕಿನ ಹಿರೇನಾವಲ್ಲಿ ಗ್ರಾಮದ ಬಳಿ ಕಲ್ಲು ಕ್ವಾರಿಯಲ್ಲಿ ಜೆಲೆಟಿನ್ ಸ್ಪೋಟ ಸಂಭವಿಸಿದ್ದು ದುರಂತದಲ್ಲಿ 6 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.ಶಿವಮೊಗ್ಗ ತಾಲ್ಲೂಕಿನ ಹುಣಸೋಡು ಕಲ್ಲು ಕ್ವಾರಿ ಸ್ಪೋಟ ದುರಂತ ನೆನಪು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟವಾಗಿದೆ.ಆರೋಗ್ಯ ಸಚಿವ ಡಾ ಕೆ ಸುಧಾಕರ್ ತವರೂರಿನ ಬಳಿಯೇ ದುರ್ಘಟನೆ ನಡೆದಿದೆ.ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

Please follow and like us:
error