ರಾಜ್ಯದಲ್ಲಿ ಏ.18 ಮತ್ತು 23ಕ್ಕೆ ಮತದಾನ : ಕೊಪ್ಪಳದಲ್ಲಿ 23ಕ್ಕೆ ಮತದಾನ

ಲೋಕಸಭಾ ಚುಣಾವಣೆ ದಿನಾಂಕ ಪ್ರಕಟ: ಕರ್ನಾಟಕದ ಸೇರಿದಂತೆ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳ ಚುನಾವಣಾ ದಿನಾಂಕ ಪ್ರಕಟಿಸಿದ ಭಾರತೀಯ ಚುನಾವಣಾ ಆಯೋಗ. ಬಹುನಿರೀಕ್ಷಿತ ಚುನಾವಣಾ ದಿನಾಂಕ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ. ಘೋಷಣೆಯ ಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ

ಏ.11ರಿಂದ ಚುನಾವಣೆ, ರಾಜ್ಯದಲ್ಲಿ ಏ.18 ಮತ್ತು 23ಕ್ಕೆ ಮತದಾನ.

* ಕರ್ನಾಟಕದಲ್ಲಿ ಎರಡನೇ(ಏ.18) ಮತ್ತು ಮೂರನೇ ಹಂತದಲ್ಲಿ(ಏ.23) ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಚುನಾವಣೆ.

* ಒಟ್ಟು 7 ಹಂತಗಳಲ್ಲಿ ಮತದಾನ: ಏಪ್ರಿಲ್ 11ರಿಂದ ಆರಂಭವಾಗಿ ಒಟ್ಟು ಏಳು ಹಂತಗಳಲ್ಲಿ ಮತದಾನ. ಮೊದಲ ಹಂತ; ಏ.11ರಂದು. ಎರಡನೇ ಹಂತ; ಏ.18. ಮೂರನೇ ಹಂತ; ಏ.23. ನಾಲ್ಕನೇ ಹಂತ; ಏ.29. ಐದನೇ ಹಂತ; ಮೇ.6. ಆರನೇ ಹಂತ; ಮೇ 12 ಮತ್ತು ಏಳನೇ ಹಂತ; ಮೇ.19. ಮತ ಎಣಿಕೆ; ಮೇ 23.

* ಈ ಬಾರಿ ದೇಶದ ಒಟ್ಟು 90 ಕೋಟಿ ಮತದಾರರಿಂದ ಮತದಾನ. ಆ ಪೈಕಿ ಮೊದಲ ಬಾರಿ ಮತದಾನ ಮಾಡುವವರು (18-19 ವಯೋಮಾನ) 1.5 ಕೋಟಿ ಮಂದಿ. ಒಟ್ಟು ಅಂದಾಜು 10 ಲಕ್ಷ ಮತಗಟ್ಟೆಗಳಲ್ಲಿ ಮತದಾನ.

* ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ಸೇರಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಕೂಡ ಲೋಕಸಭಾ ಚುನಾವಣೆಯೊಂದಿಗೇ ಏಕಕಾಲಕ್ಕೆ ನಡೆಯಲಿದೆ. ಬಹುನಿರೀಕ್ಷಿತ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗಿಲ್ಲ.

* ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತೆಲಂಗಾಣ, ತಮಿಳುನಾಡು, ಉತ್ತರಾಖಂಡ, ಅಂಡಮಾನ್-ನಿಕೋಬರ್, ದಾದ್ರಾ- ನಗರ್- ಹವೇಲಿ, ದಮನ್ ಮತ್ತು ಡಿಯು, ಲಕ್ಷದ್ವೀಪ್, ದೆಹಲಿ, ಪಾಂಡಿಚೆರಿ ಮತ್ತು ಚಂಡೀಗಢದಲ್ಲಿ ಒಂದೇ ಹಂತದ ಮತದಾನ.

* ಕರ್ನಾಟಕ, ಮಣಿಪುರ, ರಾಜಸ್ತಾನ ಮತ್ತು ತ್ರಿಪುರಾದಲ್ಲಿ ಎರಡು ಹಂತದ ಮತದಾನ.

* ಅಸ್ಸಾಂ ಮತ್ತು ಛತ್ತೀಸಗಢದಲ್ಲಿ ಮೂರು ಹಂತದ ಮತದಾನ.

* ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ನಾಲ್ಕು ಹಂತದ ಮತದಾನ.

* ಜಮ್ಮು-ಕಾಶ್ಮೀರದಲ್ಲಿ ಐದು ಹಂತದಲ್ಲಿ ಮತದಾನ.

* ಬಿಹಾರ, ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದೆ.

Election dates
18-4-2019 (phase-1)
—————————
Kolara
Chikkaballapura
Bengaluru south
Bengaluru central
Bengaluru north
Bengaluru rural
Chamarajanagara
Mysuru
Mandya
Tumakuru
Chitradurga
Dakshina Kannada
Hasana
Udupi – Chikkamagaluru

23-4-2019 (phase-2)
—————————
Chikkodi
Belagavi
Bagalakote
Vijayapura
Kalburgi
Raichuru
Koppala
Bidar
Ballary
Dharavada
Havery
Uttara Kannada
Davanagere
Shivamogga

Please follow and like us:
error