ರಾಜ್ಯದಲ್ಲಿ ಈ ವರ್ಷ ಶೇ.100 ರಷ್ಟು ಭಿತ್ತನೆ : ಸಚಿವ ಬಿ.ಸಿ. ಪಾಟೀಲ್


ಕೊಪ್ಪಳ, : ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ರೈತರು ಶೇ. 100 ಕ್ಕಿಂತಲು ಹೆಚ್ಚು ಭಿತ್ತನೆ ಮಾಡಿದ್ದಾರೆ ಹಾಗಾಗಿ ಈ ವರ್ಷ ಭಗವಂತನ ಕೃಪೆಯಿಂದ ರೈತರು ಉತ್ತಮ ಫಸಲು ಪಡೆಯುತ್ತಾರೆ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ಅವರು ಶುಕ್ರವಾರ ಯಲಬುರ್ಗಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ವಾರ್ಡ್ಗಳ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿದರು.
ಈ ಹಿಂದೆ ಕೃಷಿ ಇಲಾಖೆಯಿಂದ ಬೆಳೆ ಸಮೀಕ್ಷೆ ಜಿ.ಪಿ.ಎಸ್ ಮೂಲಕ ಮಾಡಲಾಗುತ್ತಿತ್ತು.  ಇದರಿಂದ ಶೇ. 42 ರಷ್ಟು ವೆತ್ಯಾಸ ಉಂಟಾಗುತ್ತಿತ್ತು.  ಹಾಗಾಗಿ ಅದನ್ನು ತಪ್ಪಿಸಲು ಈಗಾಗಲೇ ಬೆಳೆ ಸಮೀಕ್ಷೆ ಉತ್ಸವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ತಾವೆ ಫೋಟೋ ಹೊಡೆದು ಬೆಳೆ ಆ್ಯಪ್‌ಗೆ ಅಪ್‌ಲೋಡ್ ಮಾಡಲು ರೈತರಿಗೆ ಅನುಕೂಲ ಮಾಡಿದ್ದು, “ನನ್ನ ಬೆಳೆ ನನ್ನ ಹಕ್ಕು’’ ಎಂಬ ಕಾರ್ಯಕ್ರಮದಡಿ ರೈತರೇ ತಾವು ಬೆಳೆದ ಬೆಳೆಗಳನ್ನು ಆ್ಯಪ್ ಮೂಲಕ ಅಪ್‌ಲೋಡ್ ಮಾಡಬಹುದಾಗಿದ್ದು, ರಾಜ್ಯದಲ್ಲಿ ಇಲ್ಲಿಯರೆಗೆ 75 ಲಕ್ಷಕ್ಕಿಂತ ಅಧಿಕ ರೈತರು ಅಪ್‌ಲೋಡ್ ಮಾಡಿದ್ದಾರೆ.  ಯಾವ ರೈತರು ಅಪ್‌ಲೋಡ್ ಮಾಡುವುದನ್ನು ಮರೆಯಬಾರದು.  ಇದರಿಂದ ತಮಗೆ ಬೆಳೆ ವಿಮೆ, ಪ್ರಕೃತಿ ವಿಕೋಪ ಹಾಗೂ ಯಾವುದೇ ಬೆಳೆ ಹಾನಿ ಸಂಭವಿಸಿದ್ದಲ್ಲಿ ಸರ್ಕಾರದಿಂದ ದೊರಕುವ ಫರಿಹಾರವನ್ನು ಪಡೆಯಲು ರೈತರಿಗೆ ಅನುಕೂಲವಾಗುತ್ತದೆ ಎಂದರು.
ಲಾಕ್‌ಡೌನ್ ಸಡಿಲವಾದಮೇಲೆ ಇದೇ ಮೊದಲ ಬಾರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಈ ಹಿಂದೆ 2005-06 ರಲ್ಲಿ  ಯಲಬುರ್ಗಾಕ್ಕೆ ಭೇಟಿ ನೀಡಿದ್ದೆ.  ಇದು ಎರಡನೇ ಭೇಟಿಯಾಗಿದ್ದು, ಕೃಷಿ ಸಚಿವನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ.  ಈ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನಾನು ಜಿಲ್ಲೆಗೆ ಆಗಾಗ ಭೇಟಿ ನೀಡಿ, ಇಲ್ಲಿಯ ಜನರ ಕಷ್ಟ-ದುಃಖ, ದುಮ್ಮಾನಗಳಿಗೆ ಸ್ಪಂಧಿಸುತ್ತೇನೆ.  ಈ ಹಿಂದೆ ಗಂಗಾವತಿಯಲ್ಲಿ ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ ಹಾನಿಯಾದಾಗ ಆ ರೈತರಿಗೆ ಸರ್ಕಾರದಿಂದ ಪರಿಹಾರವನ್ನು ಒದಗಿಸಲಾಗಿತ್ತು.  ರಾಜ್ಯದಲ್ಲಿ 10 ಲಕ್ಷ ರೈತರಿಗೆ ಪ್ರತಿಯೊಬ್ಬರಿಗೂ ರೂ. 5 ಸಾವಿರದಂತೆ ಸುಮಾರು 500 ಕೋಟಿ ಹಣವನ್ನು ಸರ್ಕಾರವು ಬಿಡುಗಡೆ ಮಾಡಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಲಬುರ್ಗಾ ಶಾಸಕ ಹಾಲಪ್ಪ ಬಸಪ್ಪ ಆಚಾರ್ ಮಾತನಾಡಿ, ಕೋವಿಡ್‌ನಿಂದಾಗಿ ಇಡಿ ವಿಶ್ವದಲ್ಲಿಯೆ ಕಳೆದ ಆರು ತಿಂಗಳಿನಿAದ ಯಾವುದೇ ವ್ಯವಹಾರಗಳು ನಡೆಯುತ್ತಿಲ್ಲ.  ಆರ್ಥಿಕವಾಗಿ ಇಡಿ ವಿಶ್ವವೇ ತತ್ತರಿಸಿ ಹೋಗಿದೆ.  ಹಾಗಾಗಿ ಯಲಬುರ್ಗಾ ತಾಲ್ಲೂಕಿನ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಗಳು ವಿಳಂಭವಾಗಿವೆ.  ಯಲಬುರ್ಗಾ ತಾಲ್ಲೂಕಿನ ಯವುದೇ ವಾರ್ಡ್ಗಳ ಕಾಮಗಾರಿಗಳನ್ನು ಯಾರಾದರು ಎಸ್ಟಿಮೆಟ್ ಮಾಡದೆ ಕೈಗೊಳ್ಳುತ್ತಿದ್ದರೆ ಅದನ್ನು ಮಾಡದಂತೆ ತಡೆಯುವ ಜವಾಬ್ದಾರಿ ತಮ್ಮದಾಗಿದೆ.  ಯಲಬುರ್ಗಾಕ್ಕೆ ಪಿ.ಜಿ ಸೆಂಟರ್ ಮಂಜೂರಾಗಿದ್ದರೂ ಭೂಮಿ  ಖರೀದಿಯಾಗಿರಲಿಲ್ಲ.  ನಾನು ಭೂಮಿ ಹುಡುಕಿ ಕೊಟ್ಟಿದ್ದು, ಕಟ್ಟಡ ಮುಗಿದರೆ ಮುಂದಿನ ವರ್ಷದಿಂದ ಪಿಜಿ ಸೆಂಟರ್ ಆರಂಭವಾಗಲಿದೆ.  ಯಲಬುರ್ಗಾ ತಾಲ್ಲೂಕಿನ ಬಾಣಾಪೂರ ಹತ್ತಿರ 400 ಎಕರೆ ಪ್ರದೇಶದಲ್ಲಿ ಟ್ವೆöÊಸ್ ಕ್ಲಸ್ಟರ್ ಸ್ಥಾಪನೆಯಾಗುತ್ತಿದ್ದು, ಇದರಿಂದ ಈ ಭಾಗದ ಯುವಕರಿಗೆ ಹಲವಾರು ಉದ್ಯೋಗವಕಾಶಗಳು ದೊರೆಯಲಿವೆ ಎಂದರು.
ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ರಾಮೇಶ್ವರ, ಯಲಬುರ್ಗಾ ತಾ.ಪಂ. ಅಧ್ಯಕ್ಷೆ ಲಕ್ಷಿö್ಮÃ ದ್ಯಾಮನಗೌಡ್ರ, ಕುಕನೂರ ತಾ.ಪಂ. ಅಧ್ಯಕ್ಷ ಜಗನ್ನಾಥಗೌಡ ಸೇರಿದಂತೆ ಜಿ.ಪಂ., ತಾ.ಪಂ., ಪ.ಪಂ. ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.    
ವೀಕ್ಷಣೆ;
  ಯಲಬುರ್ಗಾ ತಾಲ್ಲೂಕಿನ ಬಾಣಾಪುರದಲ್ಲಿ ನಿರ್ಮಾಣವಾಗಲಿರುವ ಗೊಂಬೆ ಪಾರ್ಕ್ (ಟ್ವೆöÊಸ್ ಕ್ಲಸ್ಟರ್)ನ ಸ್ಥಳವನ್ನು ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು ವೀಕ್ಷಣೆ ಮಾಡಿದರು.  ಶಾಸಕ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಸೇರಿದಂತೆ ಅನೇಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.    

Please follow and like us:
error