ರಾಜೀನಾಮೆ ನೀಡಲ್ಲ , ಬೇರೆ ಪಕ್ಷದ ಕಡೆ ಮುಖ ಮಾಡುವುದಿಲ್ಲ – ಬಸವರಾಜ್ ದಡೆಸೂಗೂರು

ಕೊಪ್ಪಳ : ಈ   ಮೂಲಕ ನನ್ನ ಮತ ಕ್ಷೇತ್ರದ ಮತದಾರ 
ಬಾಂಧವರಿಗೆ ನಾನು ಮಾಹಿತಿ ನೀಡುವುದೇನೆಂದರೆ, ಭಾರತೀಯ ಜನತಾ ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರ ಆಶೀವರ್ಾದ, ಕೊಪ್ಪಳ ಜಿಲ್ಲೆಯ ಮತ್ತು ನನ್ನ ಕನಕಗಿರಿ ಮತ ಕ್ಷೇತ್ರದ ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಹಾಗೂ ಕನಕಗಿರಿ ಕ್ಷೇತ್ರದ ಮತದಾರರ ಆಶೀವರ್ಾದಿಂದ ನಾನು ಭಾರತೀಯ ಜನತಾ ಪಕ್ಷದಿಂದ ಸ್ಪರ್ದಿಸಿ ಕನಕಗಿರಿ ವಿಧಾನಸಭೆ ಕ್ಷೇತ್ರದ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. 

ಶಾಸಕನಾಗಿ ಆಯ್ಕೆಯಾಗಿ ಒಂದು ವರ್ಷ ಪೂರ್ಣಗೊಳಿಸಿರುವ ನಾನು, ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಮತ್ತು ರೈತರಿಗೆ ಅವಶ್ಯವಿರುವ ಕೆಲಸ ಕಾರ್ಯಗಳನ್ನು ಪೂರೈಸಲು ರಾಜ್ಯದ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಗಳು, ವಿವಿಧ ಖಾತೆಯ ಸಚಿವರನ್ನು ಹಲವು ಭಾರಿ ಭೇಟಿ ಮಾಡಿರುವುದು ನಿಜ. 

ಅದರೆ ಜನತೆಯಿಂದ ತಿರಸ್ಕೃತಗೊಂಡಿರುವ ಹಾಗೂ ನನ್ನ ವಿರೋಧಿಗಳು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಕ್ಷೇತ್ರದ ಮತದಾರರ ನಡುವೆ ಗೊಂದಲ ಸೃಷ್ಟಿಸುವ ಷಡ್ಯಂತರದಿಂದ ನಾನು ಅನ್ಯ ಪಕ್ಷ ಸೇರುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. 

ಕಳೆದ ಹತ್ತು ವರ್ಷಗಳಿಂದ ನಮ್ಮ ನಾಯಕರಾದ ಮಾನ್ಯ ಬಿ.ಎಸ್.ಯಡಿಯೂರಪ್ಪ ರಾಜ್ಯಾಧ್ಯಕ್ಷರು ಬಿಜೆಪಿ ಅವರ ಕೃಪಾಶೀವಾದಿಂದ ಮತ್ತು ಅವರ ಮಾರ್ಗದರ್ಶನದಲ್ಲಿ ಶಾಸಕನಾಗಿ ಜನಪರ ಕೆಲಸಗಳನ್ನು ಮತ್ತು ಪಕ್ಷ ಸಂಘಟನೆಗಾಗಿ ನಾನು ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಮತ್ತು ಪ್ರಧಾನಿ ನರೇಂದ್ರ ಮೋದಿ ಅಂತಹ ದೇವ ಮಾನವ ನಾಯಕರಿರು ಪಕ್ಷದಲ್ಲಿರುವ ನಾನು ರಾಜ್ಯದ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂಬ ಸುದ್ದಿಯೇ ಹಾಸ್ಯಾಸ್ಪದವಾಗಿದೆ. ನಾನು ಯಾವುದೇ ಕಾರಣಕ್ಕೂ ಶಾಸಕತ್ವಕ್ಕೆ ರಾಜೀನಾಮೆ ನೀಡುವುದಿಲ್ಲ ಮತ್ತು ಯಾವುದೇ ಪಕ್ಷದ ಕಡೆ ಮುಖ ಮಾಡುವುದಿಲ್ಲ ಎಂದು ಮಾಧ್ಯಮಗಳ ಮೂಲಕ ಜನತೆ ಸ್ಪಷ್ಟಪಡಿಸುತ್ತಿದ್ದೇನೆ. ಈ ಕುರಿತು ಈಗಾಗಲೆ ಕೆಲ ಮಾಧ್ಯಮಗಳಲ್ಲಿ ನನ್ನ ಹೇಳಿಕೆ ಪ್ರಕಟವಾಗಿದೆ. ಆದರೂ ಈಡೀ ನನ್ನ ಮತ ಕ್ಷೇತ್ರದ ಜನತೆಗೆ ಮತ್ತೊಮ್ಮೆ ನನ್ನ ಅಭಿಪ್ರಾಯವನ್ನು ಮಾಧ್ಯಮಗಳ ಮೂಲಕ ಪುನಃ ಸ್ಪಷ್ಟಪಡಿಸುತ್ತಿದ್ದೇನೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಶಾಸಕ ಬಸವರಾಜ್ ದಡೆಸೂಗುರು ಸ್ಪಷ್ಟ ನೆ ನೀಡಿದ್ದಾರೆ 

Please follow and like us:
error