ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ.

ಕೊಪ್ಪಳ : ಲೋಕೋಪಯೋಗಿ ಇಲಾಖೆಯ 9.56 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಮಂಗಳವಾರದಂದು ಚಾಲನೆ ನೀಡಿದರು. ನಗರದ 19 ನೇ ವಾರ್ಡ್ ನ ಗಣೇಶ ಸರ್ಕಲ್ ಹತ್ತಿರ 247 ಮೀಟರ್ ಉದ್ದದ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿ ಅವರು, ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಈಗಾಗಲೇ ನಗರದಲ್ಲಿ ಹತ್ತು ಹಲವಾರು ರಸ್ತೆಗಳು ಅಭಿವೃದ್ದಿಗೊಂಡಿವೆ. ಇನ್ನು ಗುಣಮಟ್ಟದ ಹಾಗೂ ಇನ್ನಷ್ಟು ಅಭಿವೃದ್ದಿ ಕಾಮಗಾರಿಗಳನ್ನು ನಮ್ಮ ಸರ್ಕಾರ ಬದ್ದವಾಗಿದೆ. ಕ್ಷೇತ್ರದ ಜನತೆ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಜಯ ಬಿಚ್ಚಾಲಿ , ನವೀನಕುಮಾರ ಪಾಟೀಲ್, ವಾಸುದೇವ ನವಲಿ, ಮುಖಂಡರಾದ ನಾಗರಾಜ ಚಳಿಗೇರಿ,ಅಭಿಷೇಕ, ಸೇರಿದಂತೆ ಇತ್ತರರು ಇದ್ದರು

Please follow and like us:
error