ರಸ್ತೆಯಲ್ಲಿಯೇ ಹೊತ್ತಿ ಉರಿದ ಕಾರು

ಕಲಬುರ್ಗಿ : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರೊಂದು ಏಕಾಏಕಿ ಹೊತ್ತಿ ಉರಿದ ಘಟನೆ ಕಲ್ಬುರ್ಗಿಯಲ್ಲಿ ನಡೆದಿದೆ. ಕಲಬುರಗಿ ಜಿಲ್ಲೆ ಚಿಂಚೊಳಿ ತಾಲೂಕಿನ ಕೆರಳ್ಳಿ ಬಳಿ ಘಟನೆ ನಡೆದಿದೆ.

ಸ್ವಿಫ್ಟ್ ಕಾರ್ ಹೊತ್ತಿ ಉರಿದಿದ್ದು ಅದೃಷ್ಟವಶಾತ್ ಚಾಲಕ ಹಾಗೂ ಇನ್ನೊಬ್ಬ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂತ್ರ ವಿಸರ್ಜನೆಗಾಗಿ ರಸ್ತೆ ಪಕ್ಕ ಕಾರನ್ನು ನಿಲ್ಲಿಸಿದ್ದರು. ಮರಳಿ ಹತ್ತಲು ಕಾರ್ ಡೋರ್ ಓಪನ್ ಮಾಡುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಕ್ಷಣಾರ್ಧದಲ್ಲೇ ಕಾರು ಹೊತ್ತಿ ಉರಿದಿದೆ.

Please follow and like us:
error