ಕೊಪ್ಪಳ, ೧೪: ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ರಾಜ್ಯಮಟ್ಟದಲ್ಲಿ ಹಸ್ತಪ್ರತಿಗಳನ್ನು ಆಹ್ವಾನಿಸಿತ್ತು. ಈ ಸಲದ ಕಾವ್ಯ ಪ್ರಶಸ್ತಿಗೆ ಒಟ್ಟು ೨೬ ಹಸ್ತಪ್ರತಿಗಳು ಬಂದಿದ್ದವು. ಈ ಹಸ್ತಪ್ರತಿಗಳ ಪೈಕಿ ಶಿವಮೊಗ್ಗದ ಎನ್. ರವಿಕುಮಾರ ಟೆಲೆಕ್ಸ್ ಅವರ ‘ನೆರಿಕೆ ಗೋಡೆಯ ರತ್ನಪಕ್ಷಿ’ ಹಸ್ತಪ್ರತಿಯು ೨೦೧೯ ರ ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ
ಆಯ್ಕೆಯಾಗಿದೆ. ಪ್ರಶಸ್ತಿಯು ೫,೦೦೦ ರೂ. ನಗದು ಮತ್ತು
ಬೆಳ್ಳಿ ಪದಕವನ್ನು ಒಳಗೊಂಡಿದೆ. ವಿಮರ್ಶಕರಾದ ಡಾ. ಜಾಜಿ ದೇವೆಂದ್ರಪ್ಪ ಅವರು ತೀರ್ಪುಗಾರರಾಗಿದ್ದರು. ಎನ್. ರವಿಕುಮಾರ ಟೆಲೆಕ್ಸ್ ಅವರಿಗೆ ಇದೇ ದಿನಾಂಕ ೨೦-೧೦-೨೦೧೯, ರವಿವಾರ ಕೊಪ್ಪಳದ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೊÃತ್ಸವ’ ಸಮಾರಂಭದಲ್ಲಿ ಡಾ. ಸರಜೂ ಕಾಟ್ಕರ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಾಹಿತ್ಯೊÃತ್ಸವದ ಸಂಚಾಲಕ ಮಹೇಶ ಬಳ್ಳಾರಿ ತಿಳಿಸಿದ್ದಾರೆ.
Please follow and like us: