ಯುವಮುಖಂಡ ಹಾಲೇಶ್ ಕಂದಾರಿ ಕರೋನಾಕ್ಕೆ ಬಲಿ

ಕೊಪ್ಪಳ: ಜಿಲ್ಲೆಯಲ್ಲಿ ತಮ್ಮ ಸಾಮಾಜಿಕ ಹೋರಾಟಗಳು ಮತ್ತು ಕಾರ್ಯಗಳಿಂದ ಗುರುತಿಸಿಕೊಂಡಿದ್ದ ಯುವ ಮುಖಂಡ ಹಾಲೇಶ್ ಕಂದಾರಿ ಕರೋನಾಕ್ಕೆ ಬಲಿಯಾಗಿದ್ದಾರೆ. ನಿನ್ನೆಯಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಹಾಲೇಶ್ ಕಂದಾರಿಯವರನ್ನು ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ನನ್ನ ತಮ್ಮನಂತಹ ಹುಡುಗ ಹಾಲೇಶ ಇನ್ನಿಲ್ಲವೆಂಬುದು ಹೇಗೆ ಅರಗಿಸಿಕೊಳ್ಳಲಿ……

ಹಾಲೇಶ ಕಂದಾರಿ ಸದಾ ಪುಟಿಯುವ ಉತ್ಸಾಹದ ಚಿಲುಮೆ, ಧೈರ್ಯ ,ಸ್ಪಷ್ಟ ಮುನ್ನೋಟದ ಸಮರ್ಥ ಕನಸುಗಾರ..

ನಮ್ಮ ಭರವಸೆಯ ನಾಯಕನಾಗುವ ಎಲ್ಲಾ ಅರ್ಹತೆಗಳನ್ನು ಗಳಿಸಿಕೊಂಡಿದ್ದ ಹುಡುಗ ಹಾಲೇಶ ಕಂದಾರಿ , ಚಿಕ್ಕ ವಯಸ್ಸಿನಲ್ಲಿಯೇ ಎತ್ತರಕ್ಕೆ ಏರಿದ , ಆಕಾಶಕ್ಕೆ ಏರುವ ಉಮೇದಿನಲ್ಲಿ , ಭೂಮಿಯ ಮೇಲೆ ಇದೀಗ ತಕ್ಕ ಹೆಜ್ಜೆ ಊರುತ್ತಿದ್ದ, ಮೇಲೆ ಹಾರಲು ಭೂಮಿಕೆಯನ್ನು ಸಿದ್ಧ ಮಾಡಿಕೊಳ್ಳುವ ಎಲ್ಲಾ ವರ್ತಮಾನದ ಪಟ್ಟುಗಳನ್ನೂ ಕರಗತ ಮಾಡಿಕೊಂಡಿದ್ದ…

ತಾನು ಹುಟ್ಟಿದ ದಲಿತ ಸಮಯದಾಯದ ಕಾಳಜಿಯೊಂದಿಗೆ … ಉಳಿದ ಎಲ್ಲ ಸಮುದಾಯಗಳೊಂದಿಗೆ ಬೆರೆತು ಬೆಳೆಯುವ ಛಾತಿ ರೂಢಿಸಿಕೊಂಡಿದ್ದ..

ನಾನು ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಬಿ.ಎ.ಓದುವಾಗ ಹಾಲೇಶ ,ಪಿಯುಸಿ ವ್ಯಾಸಂಗ ಮಾಡುತ್ತಿದ್ದ.. ಸ್ಥಳೀಯ ಸಂಘಟನೆಯೊಂದರ ಮೂಲಕ ನಾವು ” ಕುವೆಂಪು ಸಾಹಿತ್ಯದಲ್ಲಿ ಸೌಹಾರ್ದದ ನೆಲೆಗಳು” ಎಂಬ ವಿಷಯ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ Halesh Kandari ಬಹುಮಾನ ಪಡೆದಿದ್ದ ,

ಈಗ ಹಿರಿಯ ಕೆಎಎಸ್ ಅಧಿಕಾರಿಯಾಗಿರುವ ಸಹೋದರ Lokesh Pn ಅವರ ಮಾರ್ಗದರ್ಶನದಲ್ಲಿ ಮೈಸೂರಿಗೆ ತೆರಳಿ ಪತ್ರಿಕೋದ್ಯಮದಲ್ಲಿ ಪದವಿ,ಸ್ನಾತಕೋತ್ತರ ಪಡೆದು ಕೆಲಕಾಲ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ, ನಂತರ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡ ಮೊದಲ ಬಾರಿ ನಗರಸಭೆ ಸದಸ್ಯ ಚುನಾವಣೆಯಲ್ಲಿ ಪರಾಭವಗೊಂಡರೂ ಧೃತಿಗೆಡದೆ ನಂತರ ತನ್ನ ತಾಯಿಯವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದ…

ರಾಜಕಾರಣ, ಸಮಾಜಮುಖಿ ಚಟುವಟಿಕೆಗಳಾಚೆಗೂ ಹಲವು ಸಾಧ್ಯತೆಗಳನ್ನು ಸಾಧಿಸ ಬಲ್ಲ ಶಕ್ತಿ ಹೊಂದಿದ್ದ
ಗೆಳೆಯ, ಕಿರಿಯ ಸಹೋದರನ ಅಕಾಲಿಕ ಅಗಲಿಕೆ ಅಸಹನೀಯವಾಗಿದೆ.

ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ನನ್ನವರೆಂಬ ಅನೇಕರನ್ನು ಸಾಲು ಸಾಲಾಗಿ ಕಳೆದುಕೊಳ್ಳುತ್ತಿದ್ದೇವೆ…

ಹೋಗಿ ಬಾ ಹಾಲೇಶ…

ಭಾರವಾದ ವಿದಾಯಗಳು…

  • ಮಂಜುನಾಥ ಡೊಳ್ಳಿನ,
Please follow and like us:
error