ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ

ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳು, ಎಲ್ಲಾ ಮುಸ್ಲಿಂ ಶಾಸಕರ ಸಭೆಯನ್ನು ಕರೆದಿದ್ದೆ. ಅವರು ಎಲ್ಲಿಯವರೆಗೆ ಅಂದರೆ ನಾವು ಮಸೀದಿಗಳಲ್ಲಿ ನಮಾಜ್‌ ಮಾಡುವುದಿಲ್ಲ, ನಮ್ಮ ಮನೆಯಲ್ಲಿಯೇ ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಅವರು ಸಹಕಾರ ಕೊಡುತ್ತಿದ್ದಾರೆ. ಯಾರೊಬ್ಬರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಕನ್ನಡದ ಖಾಸಗಿ ಸುದ್ದಿವಾಹಿನಿ ಟಿವಿ9ಗೆ ನೀಡಿದ ಸಂದರ್ಭದಲ್ಲಿ ಅವರು, ಎಲ್ಲೊ ಒಂದು ಸಣ್ಣ ಘಟನೆ ನಡೆದರೆ ಅದಕ್ಕೆ ಇಡೀ ಮುಸ್ಲಿಂ ಸಮುದಾಯವೇ ಜವಾಬ್ದಾರರು ಅಂತ ಮಾತಾಡಿದರೆ ಅಂತವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ, ಈ ವಿಚಾರದಲ್ಲಿ ಹಿಂದೆ ಮುಂದೆ ನೋಡುವುದಿಲ್ಲ ಎಂದು ಖಡಕ್‌ ಆಗಿ ಉತ್ತರಿಸಿದ್ದಾರೆ.

ಸಂದರ್ಶನದಲ್ಲಿ ನಿರೂಪಕರು “ಕೊರೊನಾ ವಿರುದ್ಧ ವೈದ್ಯರು, ದಾದಿಯರು ಹೋರಾಟ ಮಾಡುತ್ತಿರುವುದರ ಬಗ್ಗೆ ನೀವು ಹೇಳಿದಿರಿ. ಇನ್ನೊಂದು ಕಡೆ ಗಣತಿಗೆ ಹೋಗುವವರ ಮೇಲೆ ಹಲ್ಲೆಗಳಾಗುತ್ತಿವೆ. ವೈದ್ಯರ ಮೇಲೆ ಹಲ್ಲೆ ಮಾಡುತ್ತಾರೆ. ಓಡಿಸಿಕೊಂಡು ಹೋಗುತ್ತಾರೆ. ಹೆಣ್ಣು ಮಕ್ಕಳು ಡೇಟಾ ಸಂಗ್ರಹಿಸಲು ಹೋದಲ್ಲಿ ಅವರ ಮೇಲೆ ಹಲ್ಲೆ ಪ್ರಯತ್ನ ನಡಯುತ್ತಿದೆ ಯಡಿಯೂರಪ್ಪನವರೆ ಎಂದು ಜೋರು ದನಿಯಲ್ಲಿ ಪ್ರಶ್ನೆ ಕೇಳುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು ನಿರೂಪಕರಿಗೂ ಸಹ ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ.

ಆ ಥರ ಒಂದೆರೆಡು ಘಟನೆ ನಡೆದಿದೆ. ಅವರ ಮೇಲೆ ನಾವು ಕ್ರಮವನ್ನು ತೆಗೆದುಕೊಂಡಿದ್ದೇವೆ. ನಾನು ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದೂರಬೇಡಿ ಎಂದು ಮನವಿ ಮಾಡುತ್ತೇನೆ. ಆದರೆ ಇಡೀ ಮುಸ್ಲಿಂ ಸಮುದಾಯದ ವಿರುದ್ಧವೇ ಜವಾಬ್ದಾರರು ಎಂದು ನೀವು ಮಾತನಾಡಿದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪನವರ ಈ ಸ್ಪಷ್ಟ ನಿಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಬೇಧ ಮರೆತು ಪ್ರಶಂಸೆ ವ್ಯಕ್ತವಾಗಿದೆ

Please follow and like us:
error