fbpx

ಯಾದಗಿರಿ ಸೋಂಕಿತರ ಸಂಖ್ಯೆ 929ಕ್ಕೆ ಏರಿಕೆ: ಮತ್ತೆ 13 ಜನರಿಗೆ ಕೊರೊನಾ ಪಾಸಿಟಿವ್

ಯಾದಗಿರಿ,: ಜಿಲ್ಲೆಯಲ್ಲಿ ಜೂನ್ 27ರಂದು ಶನಿವಾರ 2 ವರ್ಷದ ಗಂಡುಮಗು ಸೇರಿದಂತೆ ಒಟ್ಟು 13 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 929 ಪ್ರಕರಣಗಳ ಪೈಕಿ 785 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುರಪುರ ತಾಲ್ಲೂಕಿನ ಕೆಂಭಾವಿಯ 24 ವರ್ಷದ ಪುರುಷ (ಪಿ-11263), ಕೆಂಭಾವಿಯ 24 ವರ್ಷದ ಪುರುಷ (ಪಿ-11264), ಹುಣಸಗಿ ಬೈಲಗಿಡ್ಡ ತಾಂಡಾದ 32 ವರ್ಷದ ಪುರುಷ (ಪಿ-11265), ಗುರುಮಠಕಲ್ ತಾಲ್ಲೂಕಿನ ಕೊಂಕಲ್ ಗ್ರಾಮದ 20 ವರ್ಷದ ಮಹಿಳೆ (ಪಿ-11266), ಗುರುಮಠಕಲ್ ತಾಲ್ಲೂಕಿನ ಯಲಸತ್ತಿ ಗ್ರಾಮದ 27 ವರ್ಷದ ಪುರುಷ (ಪಿ-11267), ಯಲಸತ್ತಿ ಗ್ರಾಮದ 70 ವರ್ಷದ ಮಹಿಳೆ (ಪಿ-11268), ಯಾದಗಿರಿ ತಾಲ್ಲೂಕಿನ ಅಲ್ಲಿಪೂರ ದೊಡ್ಡ ತ‍ಂಡಾದ 5 ವರ್ಷದ ಹೆಣ್ಣಮಗು (ಪಿ-11269), ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದ 27 ವರ್ಷದ ಮಹಿಳೆ (ಪಿ-11270), ಹತ್ತಿಕುಣಿ ಗ್ರಾಮದ 5 ವರ್ಷದ ಗಂಡುಮಗು (ಪಿ-11271), ಹತ್ತಿಕುಣಿ ಗ್ರಾಮದ 2 ವರ್ಷದ ಗಂಡುಮಗು (ಪಿ-11272).

ಅಲ್ಲಿಪೂರ ದೊಡ್ಡ ತ‍ಂಡಾದ 34 ವರ್ಷದ ಪುರುಷ (ಪಿ-11273), ಯಾದಗಿರಿ ಬಸವೇಶ್ವರ ನಗರದ 25 ವರ್ಷದ ಪುರುಷ (ಪಿ-11274), ಗುರುಮಠಕಲ್ ನ 11 ವರ್ಷದ ಬಾಲಕ (ಪಿ-11275) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಪ್ರಕರಣ ಸಂಖ್ಯೆ ಪಿ-11265ರ ವ್ಯಕ್ತಿ ಪಿ-8228ರ ವ್ಯಕ್ತಿಯ ಸಂಪರ್ಕದ ಹಿನ್ನೆಲೆ ಹೊಂದಿರುತ್ತಾರೆ. ಉಳಿದ ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಪುಣೆ, ಮುಂಬೈ ಹಾಗೂ ಗುಜರಾತ್ ರಾಜ್ಯದಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

Please follow and like us:
error
error: Content is protected !!