fbpx

ಯಾದಗಿರಿ – ಕೊರೊನಾ ಸೋಂಕಿತರ ಸಂಖ್ಯೆ 877ಕ್ಕೆ ಏರಿಕೆ

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 877ಕ್ಕೆ ಏರಿಕೆ
ಜಿಲ್ಲೆಯಲ್ಲಿ ಮತ್ತೆ 4 ಜನರಿಗೆ ಕೊರೊನಾ ಪಾಸಿಟಿವ್
*
ಯಾದಗಿರಿ,: ಜಿಲ್ಲೆಯಲ್ಲಿ ಜೂನ್ 19ರಂದು ಶುಕ್ರವಾರ ಒಟ್ಟು 4 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 877 ಪ್ರಕರಣಗಳ ಪೈಕಿ 489 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ತಿಳಿಸಿದ್ದಾರೆ.

ಸುರಪುರ ತಾಲ್ಲೂಕಿನ ದಿವಳಗುಡ್ಡದ 27 ವರ್ಷದ ಮಹಿಳೆ (ಪಿ-8227), ದಿವಳಗುಡ್ಡದ 31 ವರ್ಷದ ಪುರುಷ (ಪಿ-8228), ಯಾದಗಿರಿ ತಾಲ್ಲೂಕಿನ ಲಿಂಗೇರಿಯ 78 ವರ್ಷದ ಮಹಿಳೆ (ಪಿ-8229), ಯಾದಗಿರಿ ತಾಲ್ಲೂಕಿನ ಅಲ್ಲಿಪೂರ ಗ್ರಾಮದ 32 ವರ್ಷದ ಮಹಿಳೆ (ಪಿ-8230) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇವರೆಲ್ಲರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಕೋವಿಡ್-19 ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಹಕರಿಸಬೇಕೆಂದು ಅವರು ಕೋರಿದ್ದಾರೆ.

Please follow and like us:
error
error: Content is protected !!