ಮೊಬೈಲ್ ಅಂಗಡಿ ಕಳ್ಳರ ಬಂಧನ

Kannadanet NEWS ಗಂಗಾವತಿಯಲ್ಲಿ ಇತ್ತೀಚಿಗೆ ನಡೆದ ಮೊಬೈಲ್ ಅಂಗಡಿ ಕಳ್ಳತನದ ಪ್ರಕಣ ಭೇದಿಸಿದ ಗಂಗಾವತಿ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಮಾಹಿತಿ ಇಲ್ಲಿದೆ

ಇತ್ತೀಚಿಗೆ ಗಂಗಾವತಿ ನಗರದ ಸಿಬಿ ಸರ್ಕಲ್ ನಲ್ಲಿರುವ ಎಂ.ಎಸ್ , ಮೊಬೈಲ್ ಸೇಲ್ಸ್ & ಸರ್ವಿಸ್ ಅಂಗಡಿ ಕಳ್ಳತನ ಆದ ಬಗ್ಗೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. . ಸದರಿ ಮೊಬೈಲ್ ಕಳ್ಳರ ಪತ್ತೆಗಾಗಿ ಎಸ್.ಪಿ., ಕೊಪ್ಪಳ ಹಾಗೂ ಆರ್.ಎಸ್ , ಉಜ್ಜನಕೊಪ್ಪ , ಡಿ.ಎಸ್.ಪಿ. ಗಂಗಾವತಿ ರವರ ನಿರ್ದೇಶನದಂತೆ ಗಂಗಾವತಿ ನಗರ ಪೊಲೀಸ್ ಠಾಣೆಯ ವೆಂಕಟಸ್ವಾಮಿ.ಟಿ . ಪಿ.ಐ. ಶ್ರೀಮತಿ ಶನಾಜ್ ಬೇಗಂ , ಪಿ.ಎಸ್.ಐ. ( ಆ.ವಿ ) ರವರ ನೇತೃತ್ವದಲ್ಲಿ ವಿಶೇಷ ತಂಡದ ಸದಸ್ಯರಾದ ಚಿರಂಜೀವಿ , ಅನೀಲ್ ಕುಮಾರ , ಮೈಲಾರಪ್ಪ , ಪ್ರಭಾಕರ , ಮಹೇಶ , ಶ್ರೀಶೈಲ ರವರನ್ನೊಳಗೊಂಡ ತಂಡ ವೃತ್ತಿಪರವಾಗಿ ತನಿಖೆ ಕೈಗೊಂಡು ಆರೋಪಿತರಾದ ಮಹೇಶ ತಂದೆ ಲಿಂಗಪ್ಪ ವಯಸ್ಸು 19 ವರ್ಷ ಚಾ : ನಾಯಕ ಉ : ಕೂಲಿ ಕೆಲಸ ಮಸೀದಿ ಹತ್ತಿರ ಎಲ್.ಬಿ , ಎಸ್ . ನಗರ ರಾಯಚೂರು . ಖಾಜಾಮೋಯಿನ್ ತಂದೆ ಫಕ್ರುದ್ದೀನಸಾಬ ವಯಸ್ಸು 23 ವರ್ಷ ಚಾ : ಮುಸ್ಲಿಂ ಉ : ಗಾರ ಕೆಲಸ ಸಾ : ಸುಕಲ್ ಪೇಟೆ ರಸ್ತೆ , ಜನತಾ ಕಾಲೋನಿ , ಸಿಂಧನೂರು ಇವರನ್ನು ದಸ್ತಗಿರಿ ಮಾಡಿದ್ದು , ಸದರಿ ಆರೋಪಿತರಿಂದ ಕಳ್ಳತನ ಆಗಿರುವ ಒಟ್ಟು ಅಂ.ಕಿ.ರೂ. 28,150 / ಬೆಲೆ ಬಾಳುವ ಮೊಬೈಲ್ , ಸ್ಪೀಕರ್‌ಗಳು ಹಾಗೂ ಇತರೆ ವಸ್ತುಗಳು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ , ಪ್ರಕರಣವನ್ನು ಬೇದಿಸುವಲ್ಲಿ ಶ್ಲಾಘನಿಯ ಕರ್ತವ್ಯ ನಿರ್ವಹಿಸಿದ ವಿಶೇಷ ತನಿಖಾ ತಂಡದ ಕಾರ್ಯವನ್ನು ಮೆಚ್ಚಿ ಮಾನ್ಯ ಎಸ್.ಪಿ , ಕೊಪ್ಪಳರವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ .

Please follow and like us:
error