ಮೈಸೂರು ಪತ್ರಕರ್ತನ
ಕುಟುಂಬಕ್ಕೆ ಸಿಎಂ ನೆರವು

ಬೆಂಗಳೂರು :

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ)ಮನವಿ ಮೇರೆಗೆ ಇತ್ತೀಚೆಗೆ ಮೃತಪಟ್ಟ
ಪತ್ರಕರ್ತರಾದ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ (ರಾಜ್ಯ ಧರ್ಮ ಮತ್ತು ಮೈಸೂರು ದಿಗಂತ, ಸಾದ್ವಿ ಪತ್ರಿಕೆಯಲ್ಲಿ ಸೇವೆ) ಮಂಜುನಾಥ್ ಕುಟುಂಬಕ್ಕೆ
5 ಲಕ್ಷ ರೂ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಜೂರು ಮಾಡಿದ್ದಾರೆ.

ಪತ್ರಕರ್ತ ಎಂ.ಮಂಜುನಾಥ್
ಕುಟುಂಬಕ್ಕೆ ನೆರವು ನೀಡುವಂತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು, ರಾಜ್ಯ ಸಂಘಕ್ಕೆ ಮನವಿ ಮಾಡಿತ್ತು.

ಸಂಕಷ್ಟದಲ್ಲಿದ್ದ ಪತ್ರಕರ್ತನ ಕುಟುಂಬಕ್ಕೆ 5 ಲಕ್ಷ ಮಂಜೂರು ಮಾಡಿರುವ ಯಡಿಯೂರಪ್ಪ ಅವರಿಗೆ ಕೆಯುಡಬ್ಲ್ಯೂಜೆ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು
ಕೃತಜ್ಞತೆ ಸಲ್ಲಿಸಿದ್ದಾರೆ.

Please follow and like us:
error