ಮೇ ಸಾಹಿತ್ಯ ಮೇಳ – ದಿನೇಶ ಅಮಿನ್ ಮಟ್ಟು ಆಶಯ ಮಾತುಗಳು

ಮೇ ಸಾಹಿತ್ಯ ಮೇಳ ,ಗದಗ ದಿನಾಂಕ 4-5 ಮೇ 2019
ಅಭಿವೃದ್ಧಿ ಭಾರತ – ಕವಲುದಾರಿಗಳ ಮುಖಾಮುಖಿ ಉದ್ಘಾಟನಾ ಹಾಗು ಪುಸ್ತಕ ಲೋಕಾರ್ಪಣೆ
ಪ್ರಗತಿಪರ ಚಿಂತಕರು ಹಾಗು ಪತ್ರಕರ್ತರಾದ ದಿನೇಶ ಅಮಿನ್ ಮಟ್ಟು ಆಶಯ ಮಾತುಗಳು.

ಈ ಮೇ‌ಸಾಹಿತ್ಯ ಕಾರ್ಯಕ್ರಮದಲ್ಲಿ ತಿಳಿದುಕೊಂಡದ್ದನ್ನು ನಿಮ್ಮೂರುಗಳಲ್ಲಿ ನಡೆಸುವ ಹಾಗೆ ಆಗಬೇಕು ಚುನಾವಣೆಗೆ ಮಾತ್ರ ನಮ್ಮ ಕೆಲಸಗಳು ಸೀಮಿತವಾಗಬಾರದು, ಬೆಂಗಳೂರಿನಲ್ಲಿ ಕಾಣುವ ಭಾರತ ಬೇರೆ ಗದಗದಲ್ಲು ಕಾಣುವ ಭಾರತ ಬೇರೆ, ವೈದ್ಯರಿಲ್ಲದ ,ನೀರು ಬಾರದ ಭಾರತ ಗದಗಿನಲ್ಲಿ ಕಂಡರೆ ಬೆಂಗಳೂರಿನಲ್ಲಿ ವಿಶ್ವಭಾರತ ಮಾಡುವವರನ್ನು ನಾವು ಕಾಣಬಹುದು, ಅಂಕಿ ಅಂಶಗಳನ್ನು ಯಾವುದೇ ತೀರ್ಮಾನಗಳನ್ನು ಮಾಡಬೇಕು, ಸಮಿಕ್ಷೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ, ರೈತರ ಸಂಖ್ಯೆ ಏಳೂ ವರ್ಷಗಳಲ್ಲಿ ಶೇ7% ಕಡಿಮೆಯಾಗಿದೆ, ಕೆಲ ಮುಕ್ಕಾಲು ರೈತರು ರೈತನಾಗಲು ಬಯಸುವುದಿಲ್ಲ.

ಒಬ್ಬ ನಿರೋದ್ಯೋಗಿ ಉದ್ಯೋಗದ ಬಗ್ಗೆ ಮಾತಾನಾಡುವುದಿಲ್ಲ ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ ಅಷ್ಟರ ಮಟ್ಟಿಗೆ ಧರ್ಮವನ್ನು ತಲೆ ಹೊಕ್ಕಿಸಲಾಗುತ್ತಿದೆ. ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ನಾವು ಅರ್ಥ ಮಾಡಿಕೊಂಡ ಸಂವಿಧಾನವೇನೆಂಬುದು ನಮಗೆ ಗೊತ್ತಿರಬೇಕು, ಇವತ್ತಿನ ಚುನಾವಣೆ ವ್ಯವಸ್ಥೇಯಲ್ಲೂ ಪ್ರಾಮಾಣಿಕವಾಗಿ ಏನಾದರೂ ಕೆಲಸ ಮಾಡಬೇಕೆಂದರೂ ಕೂಡ ಮಾಡಲಾರದ ವ್ಯವಸ್ಥ ಇದೆ, ಅಂಬೇಡ್ಕರ್ ಬಯಸಿದ ಸಂವಿಧಾನವನ್ನು ಚಿಂತನೆಗಳನ್ನು ಸೇರಿಸಿದರೆ ಅಭಿವೃದ್ಧಿ ಭಾರತ ಮಾಡಲು ಸಾಧ್ಯ, , ಮೇ ಮೇಳದಂತಹ ಕಾರ್ಯಕ್ರಮಗಳು ಚುನಾವಣೆಗಿಂತ ಮುಂಚೆ ನಡೆಯಬೇಕಿತ್ತು, ಇಲ್ಲಿ ಸೇರಿದ ಯುವಜನರು ಇಲ್ಲಿನ ಮಾತುಗಳು ಕೇಳಿ ವೈಚಾರಿಕ ತಿಳುವಳಿಕೆ ಪಡೆಯಬೇಕು,

Please follow and like us:
error